ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಅರ್ಹಸಾಧಕರ ಆಯ್ಕೆ!

0

ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಅರ್ಹಸಾಧಕರ ಆಯ್ಕೆ!

2020 ನೇ ಸಾಲಿನಲ್ಲಿ ಹಿರಿಯ ನಾಗರಿಕರ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡಲು ಗೂಗಲ್ ಮೀಟ್ ಮೂಲಕ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ರಾಜ್ಯ ಮಟ್ಟದ ಆಯ್ಕೆ ಸಮಿತಿ ಸಭೆಯನ್ನು ನಡೆಸಿ, ಅರ್ಹರನ್ನು ಆಯ್ಕೆ ಮಾಡಿದರು.

ವಿಶ್ವ ಹಿರಿಯರ ದಿನಾಚರಣೆಯ ಅಂಗವಾಗಿ 7 ವಿಭಾಗಗಳಲ್ಲಿ ಶಿಕ್ಷಣ, ಸಾಹಿತ್ಯ, ಕಲೆ, ಕಾನೂನು, ಕ್ರೀಡೆ, ಸಮಾಜಸೇವೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ, ಅಪ್ರತಿಮ ಸಾಧನೆಗೈದ ಹಿರಿಯ ನಾಗರೀಕರು ಹಾಗೂ ಸಂಸ್ಥೆಗಳನ್ನು ಗುರುತಿಸಿ, ಅವರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆಂದು ಹೇಳಿದರು.

ಈ ಸಭೆಯಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ನಾಗಲಾಂಬಿಕಾದೇವಿ, ವಿಕಲಚೇತನ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಲೀಲಾವತಿ, ಜಂಟಿ ಕಾರ್ಯದರ್ಶಿಗಳಾದ ಶ್ರೀಮತಿ ಕಲ್ಪನಾ, ಹಿರಿಯ ನಾಗರಿಕರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾದ ಶ್ರೀಮತಿ ರಾಧಾ ಶ್ರೀನಿವಾಸಮೂರ್ತಿ,ಸಚಿವರ ಆಪ್ತ ಕಾರ್ಯದರ್ಶಿಗಳಾದ ಶ್ರೀ ಮಹೇಶ ಕರಜಗಿ ಹಾಗೂ ಇತರರು ಹಾಜರಿದ್ದರು.

यक्संबा
ज्येष्ठ नागरिक राज्य पुरस्कार पात्र लाभार्थ्यांचे निवड!

सन 2020 मध्ये ज्येष्ठ नागरिकांच्या क्षेत्रात उत्कृष्ट कामगिरी केलेल्या साधकांचे नामांकन करण्यासाठी गूगल मीट द्वारे राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी निवड समितीची बैठक घेऊन, पात्र लाभार्थ्यांचे निवड केली.

जागतिक ज्येष्ठ नागरिक दिना निमित्ताने 7 विभागांमध्ये शिक्षण, साहित्य, कला, कायदा, क्रीडा आणि सामाजिक सेवांमध्ये महत्त्वपूर्ण कामगिरी केलेल्या ज्येष्ठ नागरिक आणि संस्थांना पुरस्कार प्रदान करण्यात येणार आहे असे सांगितले.

या बैठकीस विभागाच्या अपर कार्यदर्शी सौ. नागलांबिकादेवी, अपंग विभागाच्या संचालिका श्रीमती लीलावती, सह कार्यदर्शी श्रीमती कल्पना, ज्येष्ठ नागरिक पुरस्कार निवड समितीच्या सदस्या श्रीमती राधा श्रीनिवासमूर्ती, निकटवर्ती श्री महेश करजगी आणि इतर उपस्थित होते.

LEAVE A REPLY

Please enter your comment!
Please enter your name here