ಹುಕ್ಕೇರಿಯಲ್ಲೊಬ್ಬ ಅಪರೂಪದ ಕಾವಿಧಾರಿಯ ಜನ್ಮಸುವರ್ಣ ಮಹೋತ್ಸವ

0

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಈ ನಾಡಿನ ಅಪರೂಪದ ಕಾವಿಧಾರಿಗಳು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಮಹೋನ್ನತ ಕೊಡುಗೆಗಳನ್ನು ನೀಡುತ್ತಬಂದ ಯತಿವರ್ಯ. ಅವರ ಸೇವೆಯನ್ನು ಕಂಡರೆ ಅಪಾರ ಅಭಿಮಾನವನ್ನು ಉಂಟುಮಾಡುತ್ತದೆ. ನಿಜವಾಗಿಯೂ ಅವರೊಬ್ಬ ಆದರ್ಶ ಶ್ರೀಗಳು.
ಕರೋನಾ ವೈರಸ್ ನ ಹಿನ್ನಲೆಯಲ್ಲಿ ಜನರಿಗೆ ಅನೇಕ ವಿಧದಲ್ಲಿ ನೆರವಾಗಿದ್ದಾರೆ. ಸ್ಪಂದಿಸಿದ್ದಾರೆ. ಜನತೆಯೊಂದಿಗೆ ಸಾಂತ್ವನವನ್ನು ಇತ್ತಿದ್ದಾರೆ. ದಿನಬಳಕೆಯ ಸಾಮಗ್ರಿಗಳನ್ನು ಶ್ರೀಮಠದಿಂದ ನೀಡಿದ್ದಾರೆ. ಆದರೆ ಕಾನೂನು ಉಲ್ಲಂಘನೆ ಯಾಗಬಾರದೆಂದು ಪೊಲೀಸರ ಮುಖಾಂತರ ಹೋಗಬೇಕು ಎಂದಾಗ ಸ್ವತಃ ಹುಕ್ಕೇರಿ ತಾಲೂಕಿನ ಸಿಪಿಐ, ಪಿಎಸ್ಐ ಸಂಕೇಶ್ವರದ ಪಿಎಸ್ಐ ಯಮಕನಮರಡಿ ಪಿಎಸ್ಐ ರವರು ತಮ್ಮ ಸಿಬ್ಬಂದಿಯವರೊಂದಿಗೆ ಸಂತ್ರಸ್ಥರಿಗೆ, ಕಷ್ಟದಲ್ಲಿರುವವರಿಗೆ ಹುಕ್ಕೇರಿ ಶ್ರೀಗಳ ಆಶೀರ್ವಾದದ ಪ್ರಸಾದವನ್ನು ಮುಟ್ಟಿಸಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿರುವುದು ವಿಶೇಷವಾಗಿದೆ.
ಸಹಾಯ ಮಾಡಿದ ಕಾವಿಧಾರಿಗೆ, ಸಹಾಯವನ್ನು ಜನರಿಗೆ ತಲುಪಿಸಿದ ಕಾಕಿಧಾರಿಗಳಿಗೆ ನಮ್ಮದೊಂದು ಸಲಾಂ. ಕರೋನಾ ವೈರಸ್ಸಿನಿಂದ ಜನತೆ ಹೊರಗೆ ಬರಲಿ ಎಂದು ವಿವಿಧ ಪೂಜೆ ಪುನಸ್ಕಾರವನ್ನು ಮಾಡಿದರು. ಅಲ್ಲದೇ ಹನ್ನೊಂದು ದಿನಗಳವರೆಗೆ ಉಪವಾಸವನ್ನು ಗೈಯುವುದರ ಮೂಲಕ ಪೂಜೆ, ಹೋಮ, ಹವನದೊಂದಿಗೆ ಸೇವೆಯನ್ನು ಗೈದಂತ ಮಹಾತ್ಮರು. ಅವರ ಸಾಧನೆ ಸಿದ್ದಿಯ ಮುಂದೆ ನಾನು ಬರೆದ ಈ ಎರಡಕ್ಷರ ಏನೂ ಅಲ್ಲ ಬಿಡಿ.
ಆ ನಿಟ್ಟಿನಲ್ಲಿ ಹುಕ್ಕೇರಿ ಹಿರೇಮಠದ ಸೇವಾ ಕಾರ್ಯವನ್ನು, ಅವರಿಡುವ ನಡಿಗೆಯನ್ನು, ಅವರ ಕನ್ನಡದ ಕೈಕಂರ್ಯವನ್ನು ನಾನು ಮೊದಲಿನಿಂದಲೂ ಬಲ್ಲೆನು. ದೂರದ ಗಡಿಯಾದ ಹುಕ್ಕೇರಿಯಿಂದ ಬೆಂಗಳೂರಿಗೆ ಬಂದು ಕನ್ನಡದ ಸೇವೆಯನ್ನು ಮಾಡುವ ಮೂಲಕ ಲಕ್ಷ ಗಟ್ಟಲೇ ಬಟ್ಟೆಚೀಲವನ್ನು ವಿತರಿಸುವುದೆಂದರೆ ಸಾಮಾನ್ಯದ ಮಾತೆ. ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ದಿನ ಸಾವಿರಾರು ಕನ್ನಡಾಭಿಮಾನಿಗಳಿಗೆ ಹೋಳಿಗೆ ಊಟ ಹಾಕಿಸುವುದೆಂದರೇನು, ಮೊನ್ನೆ ಪ್ರವಾಹ ಬಂದಾಗ ಹಗಲಿರುಳೆನ್ನದೇ ನಿರಾಶ್ರಿತರಿಗಾಗಿ ಪೂಜ್ಯರು ಗೈದಂತಹ ಸೇವೆ ಅಪರೂಪವಾದುದು.
ಹೀಗೆ ಅವಿರತ ಸೇವೆಯ ಸಾಧನೆಗೆ, ನಾಡವರ ಸೇವೆಯಲ್ಲಿ ಮನಸ್ಸು ಪೂರ್ವಕವಾಗಿ ಪೂಜ್ಯರು ಮಾಡುತ್ತಿರುವ ಈ ಪರಿಯ ಸಮಾಜ ಸೇವೆಗೆ ನನ್ನದೊಂದು ಸಲಾಂ…!
**#**
ಲೇಖನ ಬಾಕ್ಸ..
(ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನಾಡವರು ಕಂಡಂತಹ ಅಪರೂಪದ ಚೇತನ. ಅವರ ಸಾಧನೆ, ಸಿದ್ಧಿ ಅಪಾರ. ಅವರ ಜನ್ಮಸುವರ್ಣ ಮಹೋತ್ಸವ ಅಗಸ್ಟ, 22. ತನ್ನಿಮಿತ್ತ ಈ ಬರಹ)

LEAVE A REPLY

Please enter your comment!
Please enter your name here