ಹುಬ್ಬಳ್ಳಿಯಲ್ಲಿ ಧಾರವಾಡ ಜಿಲ್ಲಾ ಮಟ್ಟದ ಸುನ್ನೀ ದಾರುಲ್ ಖಜಾ ಸ್ಥಾಪನೆ

0

ಹುಬ್ಬಳ್ಳಿಯಲ್ಲಿ ಧಾರವಾಡ ಜಿಲ್ಲಾ ಮಟ್ಟದ ಸುನ್ನೀ ದಾರುಲ್ ಖಜಾ ಸ್ಥಾಪನೆ
ಧಾರವಾಡ ಜಿಲ್ಲೆಯ ಮುಸ್ಲಿಂ ಬಾಂಧವರ ಬಹುದಿನಗಳ ಬೇಡಿಕೆಯಾದ ಸುನ್ನೀ ದಾರುಲ್ ಖಜಾದ (ಷರಯೀ ಕೋನ್ಸಿಲ್) ಸುಮಾರು 200 ಉಲಮಾ,ಮಷಾಯೀಖಗಳ ಉಪಸ್ಥಿತಿಯಲ್ಲಿ ಎಲ್ಲರ ಬೆಂಬಲದಿಂದ 26-09/2020 ಶನಿವಾರ ಸಾಯಂಕಾಲ ಸ್ಥಾಪನೆಯಾಯಿತು.
ಈಗ ಈ ದಾರುಲ್ ಖಜಾದಿಂದ ಬಡಜನರು ತಮ್ಮ ಕೌಟುಂಬಿಕ, ವೈವಾಹಿಕ,ಆಸ್ತಿ ವಿತರಣೆ ಮತ್ತು ತಮ್ಮ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದು.ಈ ದಾರುಲ್ ಖಜಾದ ಮುಖ್ಯ ಮುಫ್ತಿಗಳಾಗಿ ಹಜರತ್ ಅಲ್ಲಾಮಾ ಮೌಲಾನಾ ಮುಫ್ತಿ ನಿಸಾರ್ ಅಹಮದ್ ಮಿಸ್ಬಾಹಿರವರನ್ನು ಉಲಮಾ ಮಷಾಯೀಖಗಳ ಒಮ್ಮತದ ತೀರ್ಮಾನದಿಂದ ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಖಾಜಿಯಾದ ಹಜರತ್ ಮೌಲಾನಾ ಖಾಜೀ ಜಹೀರುದ್ದೀನ್ರವರು ತಮ್ಮ ಸಂಪೂರ್ಣ ಸಹಮತವನ್ನು ವೆಕ್ತಪಡಿಸಿದರು ಎಂದು ಹಾಫಿಜ್ ಶಾರಿಕ್ ಅಹ್ಮದ್ ಪಟೇಲ್ ತಿಳಿಸಿದರು.

ಈ ಸಂದರ್ಭದಲ್ಲಿ
1) ಹಾಫಿಜ್ ಶಾರಿಕ್ ಅಹ್ಮದ್ ಪಟೇಲ್
2ಮೌಲಾನಾ ಜಹೀರುದ್ದೀನ ಖಾಜಿ
3)ಮೌಲಾನಾ ಸಯ್ಯದ್ ಅಹ್ಮದ್ ರಾಜಾ ಸರಖಾಜಿ
4) ಮೌಲಾನಾ ಸಯ್ಯದ್ ನಿಸಾರ್ ಅಹ್ಮದ್ ಛಗನ್
5) ಅಲ್ಹಾಜ ಅಬ್ದುಲ್ ಹಮೀದ್ ಖೈರಾತಿ
6) ಹಾಫಿಜ್ ಇರ್ಶಾದ್ ಅಹ್ಮದ್ ಬೆಟಗೇರೀ
ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here