ಹೂವಿನ ಹಡಗಲಿ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಪತ್ರಿಕಾ ದಿನಾಚರಣೆ..!

0

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ವತಿಯಿಂದ ಪತ್ರಿಕಾ ದಿನಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಓದೊ ಗಂಗಪ್ಪ ಅವರು ‘ಪತ್ರಿಕೆಯೆನ್ನುವಂತಹದ್ದು ಸಮಾಜದಲ್ಲಿ ನಡೆಯುವಂತಹ ಅನ್ಯಾಯವನ್ನು ಸರಿಪಡಿಸಿ, ಪತ್ರಿಕಾ ಬರವಣಿಗೆ ಮೂಲಕ ಸಮಾಜವನ್ನು ಉತ್ತಮವಾದ ರೀತಿಯಲ್ಲಿ ಕೊಂಡೊಯ್ಯುವಂತಹ ಕೆಲಸವನ್ನು ಮಾಡಬೇಕು’ ಎಂದರು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಯುತ ಮಾಯಣ್ಣ ಹಾಗೂ ಶಾಮ್ಸ್ ಕಿಂಗ್ ಉಪಸ್ಥಿತರಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ರಾಜ್ಯಾಧ್ಯಕ್ಷರಾದ ಶ್ರೀಯುತ ಡಾಕ್ಟರ್ ಶಿವಕುಮಾರ ನಾಗರನವಿಲೆ ರವರು ಮಾತನಾಡಿ ‘ಸಮಾಜದಲ್ಲಿರುವಂತಹ ಅನ್ಯಾಯ, ಅಧರ್ಮ, ಅನೀತಿಯ ವಿರುದ್ಧ ಪತ್ರಿಕೆಯಲ್ಲಿ ಪ್ರಕಟಣೆ ಮಾಡುವುದರ ಮೂಲಕವಾಗಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವಂತಹ ಕೆಲಸವನ್ನು ಮಾಡಬೇಕು. ಜೊತೆಗೆ ಪತ್ರಿಕಾ ಮಾಧ್ಯಮ ಎನ್ನುವಂಥದ್ದು ದೇಶದ ನಾಲ್ಕನೇ ಅಂಗವಾಗಿದ್ದು ಇದನ್ನು ಕಾಯ, ವಾಚಾ ಮತ್ತು ಮನಸ್ಸಿನಿಂದ ಸಮಾಜದ ಕೆಲಸವನ್ನು ಮಾಡಬೇಕು’ ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದ ಶ್ರೀ ಡಾಕ್ಟರ್ ಹಿರಿ ಶಾಂತವೀರ ಮಹಾಸ್ವಾಮಿಗಳು, ಸದ್ಗುರು ಶಿವಯೋಗಿ ಡಾಕ್ಟರ್ ಎಂ.ಪಿ.ಎಂ. ಮಂಜುನಾಥ್ ಮಹಾಸ್ವಾಮಿಗಳು ಹಾಗೂ ಶ್ರೀ ವೆಂಕಪ್ಪಯ್ಯ ಒಡೆಯರ್ ಅವರು ಆಶೀರ್ವಚನ ನೀಡುವುದರ ಮೂಲಕ ಪತ್ರಿಕಾ ಮಾಧ್ಯಮ ಸಮಾಜದಲ್ಲಿರುವಂತಹ ಅಂಕು-ಡೊಂಕುಗಳನ್ನು ಒರೆಗಲ್ಲಿಗೆ ಹಚ್ಚಿ ಸಮಾಜವನ್ನು ಉತ್ತಮವಾದ ಮಾರ್ಗದಲ್ಲಿ ತೆಗೆದುಕೊಂಡು ಹೋಗುವುದು ತಮ್ಮ ಜವಾಬ್ದಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ತಾಲ್ಲೂಕು ಸಮಿತಿ ಅಧ್ಯಕ್ಷರಾದ ವಿ. ಜಯ ನಾಯಕ್, ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಹಲಗಿ ಸುರೇಶ್, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಡಾಕ್ಟರ್ ಲಲಿತಾಬಾಯಿ ಸೋಮಿ ನಾಯಕ್, ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಯು.ಎಚ್. ಸೋಮಶೇಖರ್, ತಹಸೀಲ್ದಾರ್ ಕೆ. ವಿಜಯ್ ಕುಮಾರ್, ಆಯುಷ್ ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾಕ್ಟರ್ ಕೊಟ್ರಮ್ಮ. ಫಾದರ್ ಡೆಂಜಿಲ್, ಜಿಲ್ಲಾಧ್ಯಕ್ಷರಾದ ಷಣ್ಮುಖ ಭಂಡಾರಿ, ಸಿ.ಡಿ.ಪಿ.ಓ. ರಾಮನಗೌಡ, ತಾಲ್ಲೂಕು ವೈದ್ಯಾಧಿಕಾರಿಗಳಾದ ಸಾಲಗೇರಿ ಶಿವಕುಮಾರ್, ತಾಲ್ಲೂಕು ಸಮಿತಿ ಪದಾಧಿಕಾರಿಗಳು ಹಾಗೂ ಪತ್ರಿಕಾ ಮಾಧ್ಯಮದ ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here