ಹೆಣವನ್ನು ಸುಡುವ ಘಟಕದಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕಿ ಹೆಣ ಸುಡುವ ಘಟಕವನ್ನು ಬಂದ್ ಮಾಡಿದ್ದಾರೆ

0

ಕುಂದಾಪುರ ತಾಲೂಕಿನ ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹುಣಸೆ ಮಕ್ಕಿ ಯಲ್ಲಿ ರುದ್ರಭೂಮಿಯಲ್ಲಿ SLRM ಘಟಕವನ್ನು ಮಾಡಿದ್ದಾರೆ ಹೆಣವನ್ನು ಸುಡುವ ಘಟಕದಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕಿ ಹೆಣ ಸುಡುವ ಘಟಕವನ್ನು ಬಂದ್ ಮಾಡಿದ್ದಾರೆ ಆ ಪರಿಸರದ ಜನ ಯಾರಾದರೂ ಮೃತಪಟ್ಟರೆ ಅವರು ಎಲ್ಲಿ ಹೆಣವನ್ನು ಇಡಬೇಕು ಎಲ್ಲಿ ಸುಡಬೇಕು ಹೆಣ ಸುಡುವುದಕ್ಕೆ ಬಂದ
ಜನರು ಎಲ್ಲಿ ನಿಲ್ಲಬೇಕು ಮಳೆಗಾಲದಲ್ಲಿ ??

ನಾವು SLRM ಘಟಕವನ್ನು ಕಾರ್ಯಾಚರಿಸುತ್ತಿರುವ ವಿಜಯಲಕ್ಷ್ಮಿಯವರನ್ನು ಕೇಳಿದ್ದೇವೆ ಯಾಕೆ ಹೆಣ ಸುಡುವ ಘಟಕದಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕಿದ್ದೀರಿ ಅಂತ ಅವರಿಂದ ಬಂದ ಉತ್ತರ ಮಳೆ ಜೋರಾದ ಕಾರಣ ಅವೆಲ್ಲ ಒದ್ದೆಯಾಗುತ್ತವೆ ಆದಕಾರಣ ಹೆಣ ಸುಡುವ ಘಟಕದಲ್ಲಿ ಹಾಕಿದ್ದೇವೆ ನಮಗೆ ಅವರಿಂದ ಬಂದ ಉತ್ತರ ಇಂಥಾ ಮಳೆಗಾಲದಲ್ಲಿ ಆ ಭಾಗದ ಜನ ಯಾರಾದರೂ ಮೃತಪಟ್ಟರೆ ಅವರು ಹೆಣವನ್ನು ಎಲ್ಲಿ ಸುಡಬೇಕು ಸುಡುವುದಕ್ಕೆ ಬಂದ ಜನ ಎಲ್ಲಿ ನಿಲ್ಲಬೇಕು??
SLRM ಮತ್ತು ರುದ್ರಭೂಮಿಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ..]

ಮಾನ್ಯ ಜಿಲ್ಲಾಧಿಕಾರಿಯವರು ಸೂಕ್ತ ಕ್ರಮವನ್ನು ತೆಗೆದುಕೊಂಡು ಅಲ್ಲಿ ಅಧಿಕಾರಿಯವರಿಗೆ ತೆರವುಗೊಳಿಸುವುದಕ್ಕೆ ಆದೇಶ ಮಾಡಬೇಕಾಗಿ ಜನಸಾಮಾನ್ಯರ ಹಿತ ಶಕ್ತಿಗಾಗಿ .ಕ್ರೈಂ ಫೈಲ್ ಪಾಕ್ಷಿಕ ಪತ್ರಿಕೆಯಿಂದ ಮಾನ್ಯ ಜಿಲ್ಲಾ ಅಧಿಕಾರಿ ಅವರಲ್ಲಿ ಒಂದು ಮನವಿ

ಕ್ರೈಂ ಫೈಲ್ ಜಿಲ್ಲಾ ವರದಿಗಾರ

ಮಂಜುನಾಥ್ M N

LEAVE A REPLY

Please enter your comment!
Please enter your name here