ಹೆತ್ತ ಮಗು ಕೊಂದ ತಾಯಿ ಸೇರಿ ಮೂವರ ಬಂಧನ

0

ಹೆತ್ತ ಮಗುವನ್ನು ಕೊಂದು ಸಹಜ ಸಾವು ಎಂದು ಬಿಂಬಿಸಿದ್ದ ತಾಯಿ, ಅಜ್ಜಿ ಹಾಗೂ 2ನೇ ಪತಿಯನ್ನು ಮೈಸೂರಿನ ಮೆಟಗಳ್ಳಿ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಶ್ಯಾನದಗಹಳ್ಳಿಯಲ್ಲಿ ಮೊದಲ ಪತಿ ಸಿದ್ದೇಶ್ ಅವರ ಮಗು ಜಯಲಕ್ಷ್ಮೀ ಅಸಹಜವಾಗಿ ಮೃತಪಟ್ಟಿತ್ತು. ಆದರೆ ತಾಯಿ, ಅಜ್ಜಿ ಹಾಗೂ 2ನೇ ಪತಿ ಇದು ಸಹಜ ಸಾವು ಎಂದು ಬಿಂಬಿಸಿದ್ದರು.

ಶ್ಯಾನದಗಳ್ಳಿಯ ನಿವಾಸಿಗಳಾದ ತಾಯಿ ಪವಿತ್ರಾ, ಅಜ್ಜಿ ಗೌರಮ್ಮ ಹಾಗೂ 2ನೇ ಪತಿ ಸೂರ್ಯ ಬಂಧಿತ ಆರೋಪಿಗಳು.

ಮಗುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಸಿದ್ದೇಶ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮೊದಲ ಪತಿ ಸಿದ್ದೇಶ್ ಅವರನ್ನು ತೊರೆದಿದ್ದ ಪವಿತ್ರಾ ಸೂರ್ಯನನ್ನು ಮದುವೆ ಆಗಿದ್ದರು. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here