ರಾಜ್ಯ ಸರ್ಕಾರ ಧರ್ಮ ವಿರೋಧಿ ಮತ್ತು ಜಾತಿ ವಿರೋಧಿ ನಡೆಯನ್ನು ಅನುಸರಿಸುತ್ತದೆ. ರಾಷ್ಟ್ರ ಕಂಡ ಅಪ್ಪಟ ದೇಶ ಭಕ್ತರಾದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹೋಗಲಿ ಬೇಡರು, ರಾಣಿ ಅಬ್ಬಕ್ಕ, ಹೈದರಾಲಿ, ಟಿಪ್ಪು ಸುಲ್ತಾನ್ ಇವರ ಪಾಠಗಳನ್ನು ಹತ್ತನೇ ತರಗತಿ ಪಠ್ಯ ಪುಸ್ತಕದಲ್ಲಿ ಕೈ ಬಿಟ್ಟಿದ್ದ ನ್ನು ಕರ್ನಾಟಕ ಪ್ರದೇಶ ಕುರುಬರ ಪದವೀಧರ ರ ತಾಲೂಕು ಅಧ್ಯಕ್ಷರಾದ ಶಶಿಕಾಂತ ಗೊರೆಬಾಳ ರವರು ಖಂಡಿಸಿದರು.