ಹೊನ್ನಮನ ಜಾತ್ರೆ ರದ್ದು

0

ಕೊಡಗು: ಸೋಮವಾರಪೇಟೆ ತಾಲ್ಲೂಕಿನ ಸುಳಿಮಳ್ತೆ ಗ್ರಾಮದಲ್ಲಿರುವ ಐತಿಹಾಸಿಕ ಹೊನ್ನಮ್ಮನ ಜಾತ್ರೆ ಈ ಭಾರಿ ತಾರೀಖು 21ರಂದು ನಡೆಯುವುದಿಲ್ಲ.ಪ್ರತೀ ವರ್ಷ ಸ್ವರ್ಣಗೌರಿ ಸಂದರ್ಭ ವಿಶೇಷ ಪೂಜೆ,ನವದಂಪತಿಗಳು ಹರಕೆ ಹೊತ್ತು ಬಾಗೀನ ಅರ್ಪಣೆ,ಅನ್ನದಾನ ಹೀಗೆ ಹತ್ತು ಹಲವು ವೈಶಿಷ್ಠ್ಯಗಳಿಂದ ಕೂಡಿರುವ ಸುತ್ತಮುತ್ಥ ಹತ್ತು ಹಳ್ಳಿಗಳಿಗೆ ನಡೆಯುವ ವಿಜೃಂಬಣೆಯ ಜಾತ್ರೆಗೆ ಕೊರೊನಾ ಅಡ್ಡಿ ಮಾಡಿದೆ. ಯಾವುದೇ ವಿಶೇಷ ಪೂಜೆ ನಡೆಸದಂತೆ ದೇವಾಲಯ ಸಮಿತಿ ತೀರ್ಮಾನ ಮಾಡಲಾಗಿದ್ದು ಸಂಪ್ರದಾಯದಂತೆ ಬೆಳಗ್ಗೆ 9.30ಕ್ಕೆ ಹೊನ್ನಮತಾಯಿ ಕುಟುಂಬಸ್ಥರು ಮತ್ತು ದೇವಾಲಯದ ಸಮಿತಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಪೂಜೆ ಸಲ್ಲಿಸಿ ವಾಡಿಕೆಯಂತೆ ಹೊನ್ನಮನ ಕೆರೆಗೆ ಬಾಗಿನ ಅರ್ಪಣೆ ಮಾಡಲು ದೇವಾಲಯ ನಿರ್ಧರಿಸಿದೆ.ಇದೇ ಸಂದರ್ಭ ದೇವಾಲಯ ಹಿಂಬಾಗದಿಂದ ಹೊನ್ನಮನ ಕೆರೆ ವಿಹಂಗಮ ನೋಟ ನೋಡಲು ಗವಿ ಬೆಟ್ಟಕ್ಕೆ ಹತ್ತುವುದು ಸಾಮಾನ್ಯವಾಗಿದ್ದು ಅದಕ್ಕೂ ನಿರ್ಬಂಧ ಹೇರಲಾಗಿದೆ.

LEAVE A REPLY

Please enter your comment!
Please enter your name here