ಬೆಳಗಾವಿ: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕದವನಹಳ್ಳಿ ಯ ಭೋವಿ ಸಮಾಜದ ರೈತ ಮಹಿಳೆ ನಾಗಮ್ಮ , ಹನುಮಂತಪ್ಪ ವಯಸ್ಸು 36 ಅವರನ್ನು ದಿನಾಂಕ – 01.08.2020 ನಾಗಮ್ಮ ಹನಮಂತಪ್ಪ ಅವರ ಜಾಮೀನು ರಿ ಸ ನಂ 51 ರಲ್ಲಿ 4 ಎಕರೆ ನೀರಾವರಿ ಜಮೀನಿನಲ್ಲಿ ಅಡಕೆ ಬೆಳೆಯಲು ನಿರ್ವಹಣೆ ಮಾಡಿದ್ದು.ಜೊತೆಗೆ ಮೆಕ್ಕೆ ಜೋಳ ಬೆಳೆಯುತ್ತಿದ್ದು ಸುಮಾರು 2 ವರ್ಷದ 3000 ಅಡಕೆ ಗಿಡಗಳಿದ್ದು ಸದರಿ ಜಮೀನಿನಲ್ಲಿಯೇ ಮನೆ ಕಟ್ಟಿಕೊಂಡು ವಾಸವಾಗಿದ್ದು. ಕಣಿವೆ ಜೋಗಿಹಳ್ಳಿ ಗ್ರಾಮದ ಗೊಲ್ಲರ ಜನಾಂಗಕ್ಕೆ ಸೇರಿದ 1. ಸನ್ನಜ್ಜರ ತಿಮ್ಮಪ್ಪ 2. ಚಂದ್ರಪ್ಪ ಬಿನ್ ಬುರುಡೆ ಕರಿಯಪ್ಪ 3. ಕರಿ ನಿಂಗಪ್ಪ ಸೆರೆ ಸುಮಾರು ಸುಮಾರು 17 ಜನ ಸೇರಿ ಜೊತೆಗೆ 70 , 80 ಕ್ಕೂ ಹೆಚ್ಚು ಜನ ಗುಂಪು ಸೇರಿಕೊಂಡು ಏಕಾಏಕಿ ಬಂದವರೇ 1.8.2020 ರಂದು ಮನೆಗೆ ನುಗ್ಗಿ ಸದರಿ ಜಮೀನು ನಮಗೆ ಸೇರಿದ್ದು .ನೀವು ಬಿಟ್ಟು ಹೋಗಲಿಲ್ಲ ಅಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜಾತಿ ಮೇಲೆ ಕೆಟ್ಟ ಕೆಟ್ಟಡಗೂ ಬೈದು ನೀವು ಕೀಳು ಜಾತಿಯವರು ನಿಮ್ಮನ್ನು ಉರು ಬಿಡಿಸುತ್ತೇವೆಂದು ಮನೆ ಮೇಲೆಲ್ಲ ಕಲ್ಲುಗಳನ್ನು ಹೊಡೆದು. ಪಿರ್ಯಾದುದಾರರ ಸೀರೆ ಎಳೆದು ಜಕೀಟ ಹರಿದು ಮನಕ್ಕೆ ಚ್ಯುತಿ ಬರುವಂತೆ ಮಾಡಿದ್ದಾರೆ. ಮಾರಕಾಸ್ತ್ರಗಳಿಂದ ಕೊಲೆ ಮಾಡಲು ಯತ್ನಿಸಿದ್ದಾರೆ. ಮನೆಯವರಿಗೆಲ್ಲ ರಕ್ತ ಬರುವಹಾಗೆ ಸಿಕ್ಕಾಪಟ್ಟೆ ಹೊಡೆದು ಮನೆಯನ್ನು ಸಂಪೂರ್ಣ ಸುಟ್ಟು ಜಮೀನಿನಲ್ಲಿರುವ 3000 ಕ್ಕೂ ಹೆಚ್ಚು ಇರುವ ತೆಂಗಿನ ಮರಗಳನ್ನು ಸುಟ್ಟು ಮೆಕ್ಕೆಜೋಳ ಸಹ ನಾಶ ಮಾಡಿದ್ದಾರೆ. ಮತ್ತು ಮಾರುತಿ ಹಳ್ಳಿಯಲ್ಲಿರುವ ಹನಮಂತಪ್ಪ ತಮ್ಮ ಪರಮೇಶ್ವರಮ್ಮ ನವರ ಮನೆಗೂ ನುಗ್ಗಿ ಸುಮಾರು 2 ಲಕ್ಷ ಕ್ಕೂ ಹೆಚ್ಚು ಹಣವನ್ನು ಕಳ್ಳತನ ಮಾಡಿ ಮನೆಯಲ್ಲಿದ್ದ ಟಿವಿ ಯನ್ನು ಹೊಡೆದು ಹಾಕಿದ್ದಾರೆ . ಮತ್ತು ಪದೇ ಪದೇ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ ಊರಿಗೆ ಬಂದರೆ ನಿಮ್ಮನ್ನು ಸುತ್ತು ಹಾಕುತ್ತೇವೆಂದು ಜೀವ ಬೆದರಿಗೆ ಹಾಕುತ್ತಿದ್ದು.
ಅಂತವರ ಮೇಲೆ ಈಗಾಗಲೇ ಪಿರ್ಯಾದು ನೀಡಲಾಗಿದೆ ಹೀಗಾಗಿ ಸ್ಥಳೀಯ ಚಿತ್ರಹಳ್ಳಿ ಗೇಟ್ ಪೊಲೀಸ ಠಾಣೆ ಮತ್ತು ಜಿಲ್ಲಾ ವರಿಷ್ಠಾಧಿಕಾರಿಗಳು ಆ 17 ಜನರ ಮೇಲೆ ಜಾತಿ ನಿಂದನೆ ಕೇಸನ್ನು ಹಾಕಿ ಎಲ್ಲರನ್ನು ಈ ಕೂಡಲೇ ಬಂದಿಸಿ ಕಾನೂನು ಕ್ರಮ ಜರುಗಿಸಬೇಕು ಮತ್ತು ನಮ್ಮ ಸಮಾಜದವರಿಗೆ ನ್ಯಾಯ ಕೊಡಿಸಿ ಅವರಿಗಾದ ಹಾನಿಯನ್ನು ಆರೋಪಿಗಳಿಂದ ಕೊಡಿಸಬೇಕು ಇಲ್ಲವಾದಲ್ಲಿ ರಾಜ್ಯಧ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಭೋವಿ ಸಮಾಜದ ಮುಖಂಡರಾದ ಡಾ. ಅರ್ಜುನ ಬಂಡಿ ಅವರು ಹೇಳಿದರು.