ಹೊಸ ಬೈಕ್ ಬಿಡುಗಡೆಗೆ ಹೋಂಡಾ ಸಿದ್ಧತೆ: ಬೆಲೆ 60,000 ರೂಪಾಯಿ ಒಳಗೆ

0

ಹೊಸ ಮೋಟಾರ್ ಸೈಕಲ್ ಮಾರುಕಟ್ಟೆಗೆ ತರಲು ಹೋಂಡಾ ಸಿದ್ಧತೆ ನಡೆಸಿದೆ. ಈಗಾಗಲೇ ಹೋಂಡಾ ಕಂಪನಿಯು ಭಾರತೀಯ ದ್ವಿಚಕ್ರ ಮಾರುಕಟ್ಟೆಯಲ್ಲಿ ಒಳ್ಳೆಯ ಹಿಡಿತವನ್ನುಹೊಂದಿದ್ದು, ಬೈಕ್ ಅಲ್ಲದೆ ಸ್ಕೂಟರ್ ವಿಭಾಗದಲ್ಲೂ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಮತ್ತು ಗ್ರಾಮೀಣ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಹೋಂಡಾ ಹೊಸ ಬೈಕ್‌ನೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಪ್ರಮುಖ ವಿಚಾರ ಏನಪ್ಪಾ ಅಂದ್ರೆ ಈ ಹೊಸ ಹೋಂಡಾ ಬೈಕ್‌ ತುಂಬಾ ಅಗ್ಗವಾಗಿರಲಿದೆ.

ಹೋಂಡಾದ ಹೊಸ ಬೈಕು ಅದರ ಸಿಡಿ 110 ವ್ಯಾಪ್ತಿಯಲ್ಲಿರುತ್ತದೆ. ಪ್ರಸ್ತುತ, ಸಿಡಿ 110 ಶ್ರೇಣಿಯು ಕಂಪನಿಯ ಅತ್ಯಂತ ಒಳ್ಳೆ ಬೈಕುಗಳಲ್ಲಿ ಒಂದಾಗಿದ್ದು , ದೆಹಲಿಯ ಸಿಡಿ 100 ರ ಎಕ್ಸ್ ಶೋ ರೂಂ ಬೆಲೆ 64,505 ರೂಪಾಯಿ. ಇಂತಹ ವೇಳೆಯಲ್ಲಿ ಹೋಂಡಾದ ಹೊಸ ಮೋಟಾರ್‌ ಸೈಕಲ್ ಬೆಲೆ 60 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿರಬಹುದು.

ಹೀರೋ ಸ್ಪ್ಲೆಂಡರ್, ಟಿವಿಎಸ್ ರೇಡಿಯನ್, ಬಜಾಜ್ ಸಿಟಿ 100, ಟಿವಿಎಸ್ ವಿಕ್ಟರ್‌ಗೆ ಹೋಲಿಸಿದರೆ ಹೋಂಡಾದ ಹೊಸ ಬೈಕು ಕಡಿಮೆಗೆ ಸಿಗಬಹುದು ಎನ್ನಲಾಗಿದೆ. ಹೆಚ್ಚಿನ ಗ್ರಾಹಕರನ್ನು ಪಡೆಯಲು ಕಂಪನಿಯು ತನ್ನ ಈ ಹೊಸ ಬೈಕ್‌ ಅನ್ನು ಗುರಿಯಾಗಿರಿಸಿದೆ.

LEAVE A REPLY

Please enter your comment!
Please enter your name here