ಹೋಲದ ನಡುವೆ ಎಣ್ಣೆ ಸೇವನೆಯ ಅಡ್ಡೆ! ಕುಡುಕರಿಂದ ಕಂಗಾಲಾದ ರೈತರು | ಹೊಲಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು | 

0

ಹೋಲದ ನಡುವೆ ಎಣ್ಣೆ ಸೇವನೆಯ ಅಡ್ಡೆ! ಕುಡುಕರಿಂದ ಕಂಗಾಲಾದ ರೈತರು | ಹೊಲಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು |

ಹೋಲಗಳೆ ಮದ್ಯ ಸೇವನೆ ಅಡ್ಡೆ! ಕುಡುಕರಿಂದ ಕಂಗಾಲಾದ ರೈತರು.

ಹುಬ್ಬಳ್ಳಿ:
ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಹಾಗೂ ಹುಬ್ಬಳ್ಳಿ ಸುತ್ತಮುತ್ತಲಿನ ಹೊಲಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ರಾಜಾರೋಷವಾಗಿ ಮಧ್ಯ ಸೇವನೆ ಮಾಡುತ್ತಿದ್ದಾರೆ.ರಾತ್ರಿಯದ್ರೆ ಸಾಕು ರಾಜಾರೋಷವಾಗಿ ಮದ್ಯ ಸೇವಿಸುವ ಕುಡುಕರು ಎಲ್ಲೆಂದರಲ್ಲಿ ಮದ್ಯದ ಡಬ್ಬಿಗಳನ್ನು ಎಸೆದು ಹೋಗುತ್ತಿದ್ದು ಇದಿರಂದ ರೈತರು ಕಂಗಾಲಾಗುವಂತೆ ಮಾಡಿದೆ…

ಹೌದು.. ಮೊದಲೇ ಮಳೆಯಾದ್ರೆ ಬೆಳೆ ಬರುವುದಿಲ್ಲ, ಬೆಳೆ ಇದ್ರೆ ಮಳೆ ಬರುವುದಿಲ್ಲ ಇಂತಹ ಸಂದರ್ಭದಲ್ಲಿ ಕುಡುಕರು ಹಾವಳಿ ಹೆಚ್ಚಾಗಿದ್ದು,ರಾತ್ರಿಯಾದ್ರೆ ಸಾಕು ಹೋಲಗಳನ್ನೆ ಬಾರ್ ರೆಸ್ಟೋರೆಂಟ್ ತರಹ ಮಾಡಿಕೊಂಡ ಕುಡುಕರು ಮದ್ಯ ಸೇವನೆ ಮಾಡಿ ಬಾಟಲ್ ಗಳನ್ನು ಎಸೆದು ಹೋಗುತ್ತಿರುವದರಿದ ರೈತರಿಗೆ ದಿನವಿಡೀ ಬಾಟಲಿಗಳು ಆರಿಸುವದರಲ್ಲೆ ಸಮಯ ಕಳೆಯತ್ತಿದೇ ಅಷ್ಟೇ ಅಲ್ಲದೇ ರೈತರು ಬೆಳೆಯ ಮಧ್ಯ ಬೆಳೆದ ಕಳೆಯನ್ನು ತೆಗೆಯುವ ಸಂದರ್ಭದಲ್ಲಿ ಬಿದ್ದಿರುವ ಬಾಟಲಿಗಳು ಕಾಲಿಗೆ ನೆಟ್ಟು ರಕ್ತ ಬಂದಿರುವ ಉದಾಹರಣೆಗಳಿವೆ.ಹೋಲಗಳನ್ನೆ ಮಧ್ಯ ಸೇವನೆ ಅಡ್ಡೆ ಮಾಡಿಕೊಂಡಿರುವ ಕುಡುಕರು. ರಾಜಾರೋಶವಾಗಿ ಎಣ್ಣೆ ಹೊಡೆಯುತ್ತಾರೆ.ಪೊಲೀಸರ ಮತ್ತು ರೈತರ ಭಯ ಇಲ್ಲದಂತೆ,ಹೋಲಗಳ ತುಂಬಾ ಮದ್ಯದ ಪ್ಯಾಕೇಟ್ ಗಳು ಎಸೆದು ಹೋಗುತ್ತಿದ್ದಾರೆ. ಆದ್ದರಿಂದ ಕೂಡಲೇ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಪೋಲಿಸ್ ಸಿಬ್ಬಂದಿ ಕುಡುಕರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ಬೈಟ್:-ಹುಸೇನಸಾಬ( ರೈತ)

ಸುಧೀರ್ ಕುಲಕರ್ಣಿ ಹುಬ್ಬಳ್ಳಿ

LEAVE A REPLY

Please enter your comment!
Please enter your name here