ʼFacebookʼಗೆ ದಿಲ್ಲಿ ಸಮಿತಿಯಿಂದ ಸಮನ್ಸ್ ಜಾರಿ..!

0

 ಫೇಸ್‌ಬುಕ್ ಪೋಸ್ಟ್‌ನಿಂದ ಹಲವು ಆವಾಂತರಗಳು, ಗಲಭೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ವಿಧಾನಸಭಾ ಶಾಂತಿ ಮತ್ತು ಸೌಹಾರ್ಧ ಸಮಿತಿ, ಫೇಸ್‌ಬುಕ್ ಇಂಡಿಯಾದ ಉಪಾಧ್ಯಕ್ಷ ಅಜಿತ್ ಮೋಹನ್‌ಗೆ ಸಮನ್ಸ್ ನೀಡಿದೆ.

ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡ ದೆಹಲಿ ವಿಧಾನಸಭಾ ಶಾಂತಿ ಮತ್ತು ಸೌಹಾರ್ಧ ಸಮಿತಿಯ ಅಧ್ಯಕ್ಷರಾಗಿದ್ದು, ಭಾರತದಲ್ಲಿ ಫೇಸ್‌ಬುಕ್ ಪಕ್ಷಪಾತ ನೀತಿ ಅನುಸರಿಸುತ್ತಿದೆ. ಹಾಗೂ ಉದ್ದೇಶ ಪೂರ್ವಕವಾಗಿ ದ್ವೇಷಪೂರಿತ ಭಾಷಣಗಳನ್ನು ಫೇಸ್‌ಬುಕ್ ನಿಯಂತ್ರಿಸುತ್ತಿಲ್ಲ. ಇದರಿಂದ ಕೋಮು ಸೌಹಾರ್ಧಕ್ಕೆ ಧಕ್ಕೆಯಾಗಿದೆ. ಶಾಂತಿ ಕದಡುವಲ್ಲಿ ಫೇಸ್‌ಬುಕ್ ಕಾರಣಾಗುತ್ತಿದೆ ಎಂದು ದೆಹಲಿ ವಿಧಾನಸಭೆಯ ಶಾಂತಿ ಹಾಗೂ ಸೌಹಾರ್ಧ ಸಮಿತಿ ಫೇಸ್‌ಬುಕ್ ಇಂಡಿಯಾಗೆ ಸಮನ್ಸ್ ಜಾರಿ ಮಾಡಿದೆ. ಸೆಪ್ಟೆಂಬರ್ 15 ರಂದು ಮಧ್ಯಾಹ್ನ 12ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಅಂದ್ಹಾಗೆ, ಕಳೆದ ತಿಂಗಳು ಫೇಸ್‌ಬುಕ್ ಇಂಡಿಯಾ ದ್ವೇಷಪೂರಿತ ಭಾಷಣ, ಬರಹ, ಫೋಟೋ, ವಿಡಿಯೋಗಳನ್ನು ಫೇಸ್‌ಬುಕ್ ನಿರ್ಬಂಧಿಸಲಿದ್ದು, ಫೇಸ್‌ಬುಕ್ ನಿಯಮ ಮೀರಿದರೆ ಖಾತೆಗಳನ್ನು ನಿರ್ಬಂಧಿಸಲಾಗುವುದು ಎಂದು ಹೇಳಿತ್ತು.(ಏಜೆನ್ಸೀಸ್​)

LEAVE A REPLY

Please enter your comment!
Please enter your name here