ಅನಾಥ ಅಜ್ಜಿಯನ್ನು ರಕ್ಷಣೆ ಮಾಡಿ ಅನಾಥಾಶ್ರಮ ಕೆ ಸೇರಿಸಿದ ಕರವೇ ಕಾರ್ಯಕರ್ತರು.. ಗಾಂಧಿ ಜಯಂತಿ ಅಂಗವಾಗಿ ಕರವೇ ಕಾರ್ಯಕರ್ತರು ಈ ಅಜ್ಜಿಯನ್ನು ಸೇರಿಸಿ ಅನಾಥಾಶ್ರಮ ಸೇರಿಸಿ ವಿನೂತನ ಕಾರ್ಯಕ್ರಮ ಮಾಡಿದರು

0

ಅನಾಥ ಅಜ್ಜಿಯನ್ನು ರಕ್ಷಣೆ ಮಾಡಿ ಅನಾಥಾಶ್ರಮ ಕೆ ಸೇರಿಸಿದ ಕರವೇ ಕಾರ್ಯಕರ್ತರು.. ಗಾಂಧಿ ಜಯಂತಿ ಅಂಗವಾಗಿ ಕರವೇ ಕಾರ್ಯಕರ್ತರು ಈ ಅಜ್ಜಿಯನ್ನು ಸೇರಿಸಿ ಅನಾಥಾಶ್ರಮ ಸೇರಿಸಿ ವಿನೂತನ ಕಾರ್ಯಕ್ರಮ ಮಾಡಿದರು…
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯಗೆ ಹುಣಸೂರು ನಿಂದ ಕೆಲಸ ಕ್ಕೆ ಬಂದು ಶನಿವಾರಸಂತೆ ತ್ಯಾಗರಾಜ ಕಾಲೋನಿ ಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಹೇಮಾವತಿ ಇವರ ವಯಸ್ಸು 60 .ಈ ಅರ್ಜಿಗೆ ಒಬ್ಬ ಮಗನಿದ್ದ .ಮಗನ ಹೆಸರು ಚಂದ್ರಶೇಖರ್ .ಈ ಚಂದ್ರಶೇಖರ್ ಗೆ ಒಂದು ಮಗಳಿದ್ದು ಈಗ ಕೆಲವು ದಿನಗಳ ಹಿಂದೆ ಮಗಳಿಗೆ ಹಿಂಸೆ ಕೊಡುತ್ತಾರೆಂದು ಮಗುವೇ ಪೊಲೀಸ್ ಹೇಳಿಕೆ ನೀಡಿದ ಕಾರಣ ಚಂದ್ರಶೇಖರ್ ಅವರು ಜೈಲು ಸೇರಿಕೊಂಡರು .ಆದ ಕಾರಣ ಈ ಅಜ್ಜಿ ಅನಾಥೆಯಾಗಿ ಊಟಕ್ಕೂ ತೊಂದರೆಯಾಗಿ ರಸ್ತೆ ಬದಿಯಲ್ಲಿ ಓಡಾಡಿಕೊಂಡಿದ್ದರು .ಇದನ್ನು ಗಮನಿಸಿದ ಸಾರ್ವಜನಿಕರು ಶಿವರಾಮೇಗೌಡರ ಕರವೇ ತಂಡಕ್ಕೆ ತಿಳಿಸಿದರು .ಕರವೇ ತಂಡ ಭೇಟಿ ನೀಡಿ .ಅಜ್ಜಿಯನ್ನು ಮಾತನಾಡಿಸಿದಾಗ ನನ್ನನ್ನು ಅನಾಥಶ್ರಮಕ್ಕೆ ಸೇರಿಸಿ ಅಂತ ಕೇಳಿಕೊಂಡ ಮೇರೆಗೆ .ಆ ಅರ್ಜಿಯನ್ನು ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಕೋರನಾ ಟೆಸ್ಟ್ ಮಾಡಿಸಿ ಮತ್ತು ಶನಿವಾರಸಂತೆ ಪೊಲೀಸ್ ಠಾಣೆಯಿಂದ ಈ ಅಜ್ಜಿಯನ್ನು ಸೇರಿಸಲು ಲೆಟರ್ ಮಾಡಿಸಿಕೊಂಡು .ಸುಂಟಿಕೊಪ್ಪ ವಿಕಾಸ್ ಜನಸೇವಾ ಟ್ರಸ್ಟ್ ಗೆ ಕರವೇ ಕಾರ್ಯಕರ್ತರು ಈ ಅಜ್ಜಿಯನ್ನು ಕರೆದುಕೊಂಡು ಹೋಗಿ ಸೇರಿಸಿದರು ..ಕರವೇ ಕಾರ್ಯಕರ್ತರು ವಿಕಾಸ್ ಜನಸೇವಾ ಟ್ರಸ್ಟ್ ಸುಂಟಿಕೊಪ್ಪ ಇವರಿಗೆ ಈ ಅಜ್ಜಿಯನ್ನು ಸೇರಿಸಿಕೊಂಡಿದ್ದಕ್ಕೆ ಕರವೇ ಕಾರ್ಯಕರ್ತರು ಧನ್ಯವಾದ ಅರ್ಪಿಸುತ್ತೇವೆ ..ಹಾಗೆಯೇ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋರನಾ ಟೆಸ್ಟ್ ಮಾಡಲು ಸಹಕರಿಸಿದ ಎಲ್ಲ ಸಿಬ್ಬಂದಿಗಳಿಗೂ ಧನ್ಯವಾದಗಳು ಅರ್ಪಿಸುತ್ತೆವೆ. ಹಾಗೂ ಶನಿವಾರಸಂತೆ ಪೊಲೀಸ್ ಠಾಣೆಯಿಂದ ಈ ಅರ್ಜಿಯನ್ನು ಅನಾಥಾಶ್ರಮಕ್ಕೆ ಸೇರಿಸಲು ಲೆಟರ್ ಅನ್ನು ಮಾಡಿಕೊಡಲು ಸಹಕರಿಸಿದ ಎಲ್ಲ ಪೊಲೀಸ್ ನವರಿಗೂ ಧನ್ಯವಾದಗಳು ಅರ್ಪಿಸುತ್ತೆವೆ .ಹಾಗೆಯೇ ಕರವೇ ಕಾರ್ಯಕರ್ತರಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಅರ್ಪಿಸುತ್ತೇವೆ ..ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ರು ಫ್ರಾನ್ಸಿಸ್ ಡಿಸೋಜ ಮತ್ತು ಸೋಮವಾರಪೇಟೆ ತಾಲ್ಲೂಕು ಕರವೇ ಕಾರ್ಯದರ್ಶಿ ರಾಮನಹಳ್ಳಿ ಪ್ರಾವಿಣ್ ಮತ್ತು ಕರವೇ ಹೋಬಳಿ ಅಧ್ಯಕ್ಷರಾದ ಅನಂದ ಮತ್ತು ಕರವೇ ಕಾರ್ಯಕರ್ತರಾದ ರಂಜಿತ್. ಮತ್ತು ಕರವೇ ಕಾರ್ಯಕರ್ತರು ಭಾಗವಹಿಸಿದ್ದರು..

LEAVE A REPLY

Please enter your comment!
Please enter your name here