ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ರಾಮ ಮಂದಿರ ಮಾದರಿಯ ರೈಲು ನಿಲ್ದಾಣ..!

0

ಅಯೋಧ್ಯೆಯಲ್ಲಿ ರಾಮ ಮಂದಿರ ಮಾದರಿಯ ರೈಲು ನಿಲ್ದಾಣ ನಿರ್ಮಿಸಲು ಭಾರತೀಯ ರೈಲ್ವೆ ಕಾರ್ಯಪ್ರವೃತ್ತವಾಗಿದೆ. ನಿಲ್ದಾಣದ ಕಟ್ಟಡ ವಿನ್ಯಾಸವು ಮಂದಿರದಂತೆ ಗುಮ್ಮಟ, ಗೋಪುರಗಳನ್ನು ಒಳಗೊಂಡಿರಲಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಈಗಿರುವ ನಿಲ್ದಾಣವನ್ನು ₹80 ಕೋಟಿ ವೆಚ್ಚದೊಂದಿಗೆ ಆಧುನೀಕರಣಗೊಳಿಸುವ ಯೋಜನೆಗೆ ಸರ್ಕಾರ 2017-18ರಲ್ಲಿ ಅನುಮೋದನೆ ನೀಡಿತ್ತು. ಬಳಿಕ ವೆಚ್ಚವನ್ನು ₹104 ಕೋಟಿಗೆ ಹೆಚ್ಚಳ ಮಾಡಿ ನಿಲ್ದಾಣದಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿತ್ತು. ಯೋಜನೆ ಪ್ರಕಾರ, ಎರಡು ಹಂತಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ.

ಮೊದಲ ಹಂತದ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು 2021ರ ಜೂನ್‌ಗೆ ಪೂರ್ಣಗೊಳ್ಳಲಿದೆ. ಎರಡನೇ ಹಂತದ ಕಾಮಗಾರಿ 2023-24ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನಿಲ್ದಾಣವು ಒಟ್ಟು 1 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿರಲಿದೆ.

‘ದೇಶದ ಕೋಟ್ಯಂತರ ಜನರ ನಂಬಿಕೆಯ ಪ್ರತೀಕವಾಗಿರುವ ಶ್ರೀ ರಾಮ ಜನ್ಮಭೂಮಿಯ ಮಂದಿರಕ್ಕೆ ಭೇಟಿ ನೀಡಲು ಬರುವ ಭಕ್ತರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರೈಲ್ವೆ ಇಲಾಖೆಯು ಅಯೋಧ್ಯೆಯ ನಿಲ್ದಾಣವನ್ನು ಅಭಿವೃದ್ಧಿಪಡಿಸುತ್ತಿದೆ’ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here