ಅಯೋಧ್ಯೆ ರಾಮ ಮಂದಿರ ಹೇಗೆ ನಿರ್ಮಾಣವಾಗಲಿದೆ ಗೊತ್ತಾ? ಇಲ್ಲಿದೆ ಫುಲ್ ಡೀಟೇಲ್ಸ್.

0

ದೇವಾಲಯದಲ್ಲಿ ಒಟ್ಟು ಸ್ತಂಬಗಳಿರಲಿದ್ದು, ದೇವಾಲಯದ ಸುತ್ತಮುತ್ತ 4 ಮಂದಿರಗಳು ಕೂಡ ನಿರ್ಮಾಣಗೊಳ್ಳಲಿದೆ. ಒಟ್ಟು ರಾಮ ಮಂದಿರ 161 ಅಡಿಯಲ್ಲಿ ಎತ್ತರ ನಿರ್ಮಾಣಗೊಳ್ಳಲಿದೆ ಎನ್ನಲಾಗಿದೆ.

ದೇವಾಲಯಲ್ಲಿ ಒಟ್ಟು ಐದು ಗುಮ್ಮಟಗಳು, ರಾಮನ ಗರ್ಭಗುಡಿಯ ಮೇಲೆ ಶಿಖರ ಸೇರಿದಂತೆ ಹಲವು ಸಂಖ್ಯೆಯಲ್ಲಿ ಬರುವ ಭಕ್ತರಿಗೆ ಹೋಗಲು ಅವಕಾಶವಿರುವ ರೀತಿಯಲ್ಲಿ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ಹಂತ ಹಂತವಾಗಿ ನಿರ್ಮಾಣವಾಗಲಿದ್ದು, ಕೊನೆಯದಾಗಿ ದೇವಾಲಯ ಯಾವ ರೀತಿ ಕಾಣಲಿದೆ ಎಂದ ಚಿತ್ರ ಬಿಡುಗಡೆ ಮಾಡಿದ್ದು, ಎಲ್ಲೆಡೆ ವೈರಲ್ ಆಗಿದೆ.ದೇಶದಲ್ಲಿ ಹಿಂದೂ ದೇವಾಲಯಗಳ ವಾಸ್ತುಶುಲ್ಪ ‘ ನಾಗರ ಶೈಲಿ’ ಪ್ರಕಾರ ರಾಮ ಮಂದಿರ ನಿರ್ಮಾಣವಾಗಲಿದೆ.

ಉತ್ತರ ಪ್ರದೇಶ : ಭಾರತೀಯರ ದಶಕಗಳ ಕನಸು ನಾಳೆ ಈಡೇರಲಿದೆ. ಐತಿಹಾಸಿಕ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ನಡೆಯಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.

”ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ
ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಥಸೇ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ”

ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯಮಂದಿರ ನಿರ್ಮಾಣದ ಕೋಟಿ ಕೋಟಿ ಭಕ್ತರ ಕನಸು ದಶಕಗಳ ತರುವಾಯ ನನಸಾಗಿದೆ. ಇಂದು ನಮ್ಮ ರಾಷ್ಟ್ರದ ಹೆಮ್ಮೆಯ ನೇತಾರ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಶ್ರೀರಾಮ ಮಂದಿರಕ್ಕೆ ಭೂಮಿ ಪೂಜನ ನೆರವೇರಿಸಲಿದ್ದಾರೆ.
ಭಾರತೀಯರ ಭವ್ಯ ದಿವ್ಯ ಪರಂಪರೆಯ ಪ್ರತೀಕವಾಗಿ ಶ್ರೀರಾಮ ಮಂದಿರ ತಲೆ ಎತ್ತಲಿ. ಜಾತಿ, ಧರ್ಮಗಳ ನಡುವೆ ಸಾಮರಸ್ಯ, ಭಾವೈಕ್ಯತೆಯ ಕೇಂದ್ರ ಇದಾಗಲಿ. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ಆದರ್ಶ ಪ್ರತಿಯೊಬ್ಬರಿಗೂ ಮಾದರಿಯಾಗಲಿ.
ಶ್ರೀರಾಮ ಮಂದಿರದ ಭೂಮಿ ಪೂಜನದ ಅಪರೂಪದ ಗಳಿಗೆಯಲ್ಲಿ ಮನೆ ಮನೆಗಳಲ್ಲೂ ದೀಪ ಬೆಳಗಲಿ.

ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಹಿನ್ನೆಲೆಯಲ್ಲಿ ಡಿಜಿಐಜಿಪಿ ಪ್ರವೀಣ್ ಸೂದ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಎಲ್ಲಾ ವಲಯ ಐಜಿಪಿಗಳು ಮತ್ತು ಎಸ್‍ಪಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಮಹತ್ವದ ಸಭೆ ನಡೆಸಿದರು

ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಡಿಜಿಐಜಿಪಿ ಪ್ರವೀಣ್ ಸೂದ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಎಲ್ಲಾ ವಲಯ ಐಜಿಪಿಗಳು ಮತ್ತು ಎಸ್‍ಪಿಗಳೊಂದಿಗೆ ಮಹತ್ವದ ಸಭೆ ನಡೆಸಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here