ಆಡು ಮೇಯಿಸಲು ಹೋಗಿದ್ದ ಯುವತಿಯ ರೇಪ್ ಗೆ ಯತ್ನ; ಆರೋಪಿ ಸಾದಿಕ್ ಪೊಲೀಸರ ಅತಿಥಿ

0

ಆಡು ಮೇಯಿಸುತ್ತಿದ್ದ ಯುವತಿಯನ್ನು ಹಾಡು ಹಗಲಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಯುವಕನಿಗೆ ಸಾರ್ವಜನಿಕರು ಹಿಡಿದು ಗೂಸ ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ಉಜಿರೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ನಿನ್ನಿಕಲ್ಲು ಎಂಬಲ್ಲಿ ಈ ಘಟನೆ ನಡೆದಿದೆ. ಉಜಿರೆ ಸಮೀಪದ ನಿನ್ನಿಕಲ್ಲಿನಲ್ಲಿ ಯುವತಿ ಆಡು ಮೇಯಿಸುತ್ತಿದ್ದಾಗ ಅಲ್ಲಿಗೆ ಬಂದ ಸಾದಿಕ್ ಎಂಬಾತ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಹಾಡುಹಗಲೇ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ್ದು ಯುವತಿ ಜೋರಾಗಿ ಕೂಗಿದ್ದಾಳೆ. ಅಗ ಅಲ್ಲಿದ್ದ ಸಾರ್ವಜನಿಕರು ಸೇರಿ ಯುವತಿಯನ್ನು ರಕ್ಷಿಸಿ ಆರೋಪಿಯನ್ನು ಹಿಡಿದು ಗೂಸ ನೀಡಿ ಪೊಲೀಸರಿಗೊಪ್ಪಿಸಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here