ಇಗ್ನೋ ಪ್ರವೇಶಕ್ಕೆ ದಿನಾಂಕ ವಿಸ್ತರಣೆ

0

ಬೆಂಗಳೂರು: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಇಗ್ನೋ) ಆನ್‌ಲೈನ್ ಪ್ರವೇಶಕ್ಕೆ ನಿಗದಿ ಪಡಿಸಿದ್ದ ಕೊನೆಯ ದಿನಾಂಕವನ್ನು ಸೆ.30ರವರೆಗೆ ವಿಸ್ತರಿಸಿದೆ.

ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಅಭ್ಯರ್ಥಿಗಳು ಇಗ್ನೋ ವೆಬ್‌ಸೈಟ್‌ಗೆ https://ignouadmission.samarth.edu.in ಭೇಟಿ ನೀಡಿ ಪ್ರವೇಶ ಪಡೆಯಬಹುದು. ಕೆಲವು ಕೋರ್ಸ್‌ಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನಿಗದಿ ಪಡಿಸಿದೆ.

ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು 9449337272 ಸಂಖ್ಯೆಗೆ ವಾಟ್ಸ್‌ಆಯಪ್ ಮತ್ತು rcbangalore@ignou.ac.in ಇ-ಮೇಲ್ ಮಾಡಬಹುದು ಎಂದು ಇಗ್ನೋ ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕ ಜಿ.ಎಚ್. ಇಮ್ರಾಪುರ ತಿಳಿಸಿದರು.

LEAVE A REPLY

Please enter your comment!
Please enter your name here