‘ಇಡಿ’ ಅಧಿಕಾರಿಗಳ ಕಾಟಕ್ಕೆ ನಟಿಮಣಿಯರು ಸುಸ್ತೋ ಸುಸ್ತು: ‘ಮಾದಕ’ ಸುಂದರಿಯರಿಗೆ ಜೈಲಲ್ಲಿದ್ರು ಸಿಗ್ತಿಲ್ಲ ವಿಚಾರಣೆಯಿಂದ ಮುಕ್ತಿ..!

0

ಚಂದನವನದಲ್ಲಿ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನಾ ಖೈದಿಗಳಾಗಿ ಪರಪ್ಪನ ಅಗ್ರಹಾರ ಸೇರಿರುವ ನಟಿ ಸಂಜನಾ ಮತ್ತು ನಟಿ ರಾಗಿಣಿಗೆ ಜೈಲುವಾಸ ಸಾಕು ಸಾಕು ಎನ್ನಿಸುವಷ್ಟು ಬೇಸರವಾಗಿದೆ. ಇದರ ನಡುವೆ ಇಡಿ ವಿಚಾರಣೆ ಇಬ್ಬರು ನಟಿಯರನ್ನು ಹೈರಾಣಾಗಿಸಿದೆ.

ಹೌದು, ಸಿಸಿಬಿ ವಿಚಾರಣೆಯಿಂದಲೇ ಸಾಕಾಗಿ ಹೋಗಿದ್ದ ನಟಿಯರು ಜೈಲಿನಲ್ಲಾದರೂ ಯಾವುದೇ ವಿಚಾರಣೆ ಇಲ್ಲದೆ ನೆಮ್ಮದಿಯಾಗಿ ಇರ್ಬೋದು ಅಂತಾ ಅಂದುಕೊಂಡಿದ್ದರೇನು. ಆದ್ರೆ, ನಟಿಮಣಿಯರಿಗೆ ಇಡಿ ಶಾಕ್ ನೀಡಿದೆ. ಕಳೆದ 2 ದಿನಗಳಿಂದ ಇಡಿ ನಡೆಸುತ್ತಿರುವ ಸತತ ವಿಚಾರಣೆಯಿಂದ ಮಾದಕ ಸುಂದರಿಯರು ಬಸವಳಿದಿದ್ದಾರೆ. ಅಧಿಕಾರಿಗಳು ಐಷಾರಾಮಿ ಜೀವನ, ಆದಾಯ ಮೀರಿ ಆಸ್ತಿ ಗಳಿಕೆ ಸೇರಿದಂತೆ ವಿವಿಧ ಪ್ರಶ್ನೆಗಳನ್ನ ಕೇಳುತ್ತಿದ್ದಾರೆ. ಇದ್ರಿಂದ ಕಂಗಾಲಾದ ನಟಿಯರಿಗೆ ಇಂದು ವಿರಾಮ‌ ನೀಡಿದ್ದು, ನಾಳೆ ಮತ್ತೆ ವಿಚಾರಣೆ ಮುಂದುವರಿಸುವ ಸಾಧ್ಯತೆ ಇದೆ ಎಂದು ಜೈಲಿನ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here