ಇನ್ಮುಂದೆ ಬರಲಿದೆ ಗೂಗಲ್ ಪೇಪರ್ ಫೋನ್ : ಇದು ಜಗತ್ತೆ ನಿಬ್ಬೆರಗಾಗಿಸುವ ಹೊಸ ಅವಿಷ್ಕಾರ

0

ರ್ಟ್ ಫೋನ್ ತುಂಬಾ ಭಾರವಾಗಿದೆ. ಎಲ್ಲೆಂದರಲ್ಲಿ ಹಿಡಿದು ಓಡಾಡುವುದು ಕಷ್ಟವಾಗುತ್ತಿದೆಯಾ ? ಭಾರದ ಫೋನ್ ಬದಲಿಗೆ ತೆಳು ಗಾತ್ರದ ಫೋನ್ ಇದ್ದರೇ ಎಷ್ಟು ಒಳ್ಳೆಯದು ಅಲ್ಲವೇ ಎಂದು ಯೋಚಿಸುತ್ತಿದ್ದೀರಾ ! ನಿಮ್ಮ ಕಲ್ಪನೆಗೆ ಗೂಗಲ್ ಹೊಸ ರೂಪ ನೀಡುತ್ತಿದೆ. ಕಾಗದದಂತಹ ಮೊಬೈಲ್ ತಯಾರಿಕೆಗೆ ಈಗಾಗಲೇ ಕೆಲಸಗಳು ಆರಂಭವಾಗಿದೆ. ಡಿಜಿಟಲ್ ಲೋಕದಿಂದ ಜನರನ್ನು ಬಿಡುಗಡೆಗೊಳಿಸಲು ಗೂಗಲ್ ಈ ಹೊಸ ಫೋನ್ ಪರಿಚಯಿಸುತ್ತಿದೆ. ಗೂಗಲ್ ನ ಪ್ರಯೋಗಾತ್ಮಕ ವೇದಿಕೆಯಲ್ಲಿ ಈ ಸ್ಮಾರ್ಟ್ ಫೋನ್ ನನ್ನು ಪರಿಚಯಿಸಲು ಸಿದ್ಧತೆ ಆರಂಭವಾಗಿದೆ.

ಸ್ಮಾರ್ಟ್ ಫೋನಿನ ಅತಿಯಾದ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಚಿಕ್ಕಮಕ್ಕಳಿಂದ ಹಿಡಿದು ನೂರು ವರ್ಷದ ವೃದ್ಧರ ಕೈಯಲ್ಲೂ ಮೊಬೈಲ್ ಬೇಕೇ ಬೇಕು ಎಂಬ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ . ಪೇಪರ್ ಫೋನ್ ಎಂಬುದು ಮೊಬೈಲ್ ಗೆ ಪರ್ಯಾಯವಾಗಿ ಬಳಸಲ್ಪಡುವ ಒಂದು ಹಾಳೆಯಷ್ಟೇ . ಇದರ ಉದ್ದೇಶವೆಂದರೆ ಜನರನ್ನು ಸಾಧ್ಯವಾದಷ್ಟು ಸ್ಮಾರ್ಟ್ ಫೋನ್ ಗಳಿಂದ ದೂರ ಮಾಡುವುದು . ಒಂದು ತುಂಡು ಪೇಪರ್ ನಂತಿರುವ ಫೋನ್ ಅನ್ನು 8 ಬಾರಿ ಮಡಚುವುದಕ್ಕೆ ಅವಕಾಶ ನೀಡುವಂತಹ ಪೇಪರ್ ಫೋನ್ ತಯಾರಿಯಲ್ಲಿ ಗೂಗಲ್ ನ ಕ್ರಿಯೇಟಿವ್ ಲ್ಯಾಬ್ ತೊಡಗಿದೆ .

ಸ್ವಲ್ಪ ಸಮಯ ನಮ್ಮ ಬಳಿ ಮೊಬೈಲ್ ಫೋನ್ ಇಲ್ಲದಿದ್ದರೆ ಏ ನೋ ಕಳೆದುಕೊಂಡಂತೆ ಪರಿತಪಿಸುತ್ತಿರುತ್ತೇವೆ . ಕೆಲವೊಮ್ಮೆ ಮೊಬೈಲ್ ಫೋನ್ ಅನ್ನೇ ಮರೆತು ಎಲ್ಲೋ ಬಿಟ್ಟು ಬಂದಿರುತ್ತೇವೆ . ಇದೇ ಈಗ ಗೂಗಲ್ ಕಲ್ಪನೆಗೆ ಪ್ರಮುಖ ಕಾರಣವಾಗಿದೆ . ಡಿಜಿಟಲ್ ವ್ಯಸನವನ್ನು ದೂರಾಗಿಸುವ ಹಲವು ಪ್ರಯೋಗಗಳಿಗೆ ಸಂಸ್ಥೆ “ ಎಕ್ಸ್ ಪೆರಿಮೆಂಟ್ ವಿತ್ ಗೂಗಲ್ ” ಮುಖೇನ ವೇದಿಕೆ ಕಲ್ಪಿಸಿದೆ . ಇದರಿಂದ ಹೊರಬಂದಿರುವುದೇ ಪೇಪರ್ ಫೋನ್ ಕಲ್ಪನೆ .

ಪೇಪರ್ ಫೋನ್ ಜೊತೆಗೆ ಗೂಗಲ್ ಇನ್ನೂ ಹಲವು ಪ್ರಯೋಗಗಳನ್ನು ಮಾಡುತ್ತಿದೆ . ಅನ್ ಲಾಕ್ ಕ್ಲಾಕ್ ( ನೀವು ಎಷ್ಟು ಬಾರಿ ಫೋನ್ ನ್ನು ಅಲ್ ಲಾಕ್ ಮಾಡುತ್ತೀರಿ ಎಂಬುದನ್ನು ಇದು ತಿಳಿಸುತ್ತದೆ ), ವಿ-ಫ್ಲಿಪ್ ( ಇದರಲ್ಲಿ ಗುಂಪಿನ ಎಲ್ಲಾ ಸದಸ್ಯರು ಒಟ್ಟಿಗೆ ಫೋನ್ ನ್ನು ಆಫ್ ಮಾಡಲು ಅವಕಾಶವಿರುತ್ತದೆ ), ಇತ್ಯಾದಿ ಪ್ರೊಜೆಕ್ಟ್ ಗಳನ್ನು ಮಾಡಲಾಗುತ್ತಿದೆ . ಗೂಗಲ್ ಜೊತೆಗೆ ಇನ್ನೂ ಹಲವು ಸಿಲಿಕಾನ್ ವ್ಯಾಲಿ ಕಂಪೆನಿಗಳು ಈ ನಿಟ್ಟಿನಲ್ಲಿ ತಮ್ಮದೇ ಆದ ವಿಶಿಷ್ಟ ಪ್ರೊಡಕ್ಟ್ ಗಳ ಬಿಡುಗಡೆಗೆ ತಯಾರಿ ನಡೆಸುತ್ತಿವೆ . ಪ್ರಾಥಮಿಕ ಮಾಹಿತಿ ಪ್ರಕಾರಈ ಫೋನ್ ನಲ್ಲಿ ನಲ್ಲಿ ಕ್ಯಾಮಾರ , ಕರೆ ಸೌಲಭ್ಯ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ . ಕೇವಲ ಅಕ್ಷರಗಳನ್ನು ಮಾತ್ರ ಡಿಜಿಟಲ್ ರೂಪದಲ್ಲಿ ನೋಡಬಹುದು . ಮುಂದಿನ ವರುಷಗಳಲ್ಲಿ ಎಲ್ಲಾ ಸೌಲಭ್ಯಗಳು ಬರಲಿವೆ ಎಂದು ಸುದ್ದಿ ಮಾಧ್ಯಮದ ವರದಿಯೊಂದು ತಿಳಿಸಿದೆ .

ಮುಂದಿನ ವರ್ಷಗಳಲ್ಲಿ ಜಗತ್ತೇ ನಿಬ್ಬೆರಗಾಗುವಂತಹ ತಂತ್ರಜ್ಞಾನಗಳು ಅವಿಷ್ಕಾರಗೊಳ್ಳಲಿದೆ . ಇದಕ್ಕೆ ಗೂಗಲ್ ಈಗಾಗಲೇ ಮುನ್ನುಡಿ ಬರೆಯುತ್ತಿದೆ . ಈಗಿರುವ ಸ್ಮಾರ್ಟ್ ಫೋನ್ ಗಳು ಸಾಮಾನ್ಯವಾಗಿ ಸರಾಸರಿ 500 ಗ್ರಾಂ ತೂಕವಂತೂ ಇದ್ದೇ ಇರುತ್ತದೆ . ಇನ್ನು ಪೇಪರ್ ನಂತಿರುವ ಪೋನ್ ಗಳು ಬಂದರಂತೂ ತಂತ್ರಜ್ಞಾನ ಕ್ಷೇತ್ರದಲ್ಲೂ ಕೂಡ ಮಹತ್ತರ ಬದಲಾವಣೆಗಳಾಗುತ್ತವೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ .

LEAVE A REPLY

Please enter your comment!
Please enter your name here