ಇವರೇ ನೌಕಾಪಡೆಯ ಹೆಲಿಕಾಪ್ಟರ್​ ಚಲಾಯಿಸುವ ದೇಶದ ಮೊದಲ ಮಹಿಳೆಯರು!

0

ದೇಶದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ನೌಕಾಪಡೆಯ ಹೆಲಿಕಾಪ್ಟರ್ ಚಲಾಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ನೌಕಾಪಡೆಯಲ್ಲೂ ಮಹಿಳೆಯರಿಗೆ ಮುಂಚೂಣಿಯ ಅವಕಾಶ ಸಿಕ್ಕಂತಾಗಿದೆ.

ಸಬ್​ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಮತ್ತು ಸ.ಲೆ. ರಿತಿ ಸಿಂಗ್ ದೇಶದ ಪ್ರಪ್ರಥಮ ಏರ್​ಬೋರ್ನ್​ ಟ್ಯಾಕ್ಟಿಷಿಯನ್ಸ್​ ಆಗಿ ಆಯ್ಕೆ ಆಗಿದ್ದು, ಇವರು ಯುದ್ಧನೌಕೆಯ ಡೆಕ್​​ನಿಂದಲೇ ಕಾರ್ಯನಿರ್ವಹಿಸಲಿದ್ದಾರೆ. ಇಂದು ಐಎನ್​ಎಸ್​ ಗರುಡದಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ನೌಕಾಪಡೆಯ 17 ಅಧಿಕಾರಿಗಳ ತಂಡಕ್ಕೆ ಇವರು ಈ ಮೂಲಕ ಸೇರಿಕೊಂಡಿದ್ದಾರೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಮೊದಲಿಗೆ ಇವರನ್ನು ಏರ್​ಬೋರ್ನ್​ ಟ್ಯಾಕ್ಟಿಷಿಯನ್ಸ್​(ಅಬ್ಸರ್ವರ್ಸ್​) ಆಗಿ ಸೇರಿಸಿಕೊಳ್ಳಲಿದ್ದು, ಬಳಿಕ ಇವರಿಗೆ ಯುದ್ಧನೌಕೆಯ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಲು ಹಾದಿ ಸುಗಮವಾಗಲಿದೆ. ಈ ಹಿಂದೆ ನಿಗದಿತ ಏರ್​ಕ್ರಾಫ್ಟ್​ಗೆ ಮಹಿಳೆಯರಿಗೆ ನಿರ್ಬಂಧವಿತ್ತು. (ಏಜೆನ್ಸೀಸ್)

LEAVE A REPLY

Please enter your comment!
Please enter your name here