ಎರಡು ಬಸ್‌ಗಳಿಗೂ ಒಂದೇ ನಂಬರ್‌; ತೆರಿಗೆ ವಂಚಕ ಮಾಲೀಕನಿಗೆ ಶಾಕ್‌ ನೀಡಿದ ನಂಜನಗೂಡು ಪೊಲೀಸರು

0

ಒಂದೆ ಸಂಖ್ಯೆಯ ಎರಡು ಬಸ್‌ ಇಟ್ಟುಕೊಂಡು ಒಂದಕ್ಕೆ ಟ್ಯಾಕ್ಸ್‌ ಕಟ್ಟಿ ಇನ್ನೊಂದನ್ನ ಬೇಕಾಬಿಟ್ಟಿ ಓಡಿಸುತ್ತಿದ್ದ ಐನಾತಿ ಮಾಲೀಕನೋಬ್ಬನಿಗೆ ಮೈಸೂರಿನ ನಂಜನಗೂಡು ಪೊಲೀಸರು ಇಂದು ಶಾಕ್‌ ನೀಡಿದ್ದಾರೆ. ಒಂದೆ ಸಂಖ್ಯೆಯ ಎರಡೇರಡು ಬಸ್‌ಗಳ ಮಾಹಿತಿ ಪಡೆದ ಪೊಲೀಸರು ಒಂದೆ ದಿನ ಎರಡು ಬಸ್ಸನ್ನು ಸೀಜ್‌ ಮಾಡಿ ಮಾಲೀಕನ ವಿರುದ್ದ ದೂರು ದಾಖಲಿಸಿದ್ದಾರೆ. ಅತ್ತ ಆರ್‌ಟಿಓ ಅಧಿಕಾರಿಗಳು ಸಹ ಮಾಲೀಕನಿಗೆ ಮತ್ತೊಂದು ನೋಟಿಸ್‌ ನೀಡಿದ್ದಾರೆ.

ಐಷಾರಾಮಿ ಬಸ್ ಮಾಲೀಕನ ಕಳ್ಳಾಟಕ್ಕೆ ನಂಜನಗೂಡು ಪೊಲೀಸರು ಕೊನೆಗೂ ಬ್ರೇಕ್ ಹಾಕಿದ್ದಾರೆ. ಒಂದೇ ನೋಂದಣಿ ಸಂಖ್ಯೆಯ ಎರಡು ಬಸ್ ಗಳು ಸೀಜ್ ಮಾಡುವ ಮೂಲಕ ಮಾಲೀಕನ ಕಳ್ಳಾಟಕ್ಕೆ ಬ್ರೇಕ್ ಹಾಕಲಾಗಿದೆ. ಕೆಎ 11 ಬಿ 2969 ನೊಂದಣಿ ಸಂಖ್ಯೆಯ ಎರಡು ಐಷಾರಾಮಿ ಬಸ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಮಧೇನು ಹೆಸರಿನ ಖಾಸಗಿ ಬಸ್ ಮಾಲೀಕ ಮಂಜುನಾಥನ ಐನಾತಿ ಪ್ಲಾನ್ ಫ್ಲಾಪ್ ಆಗಿದೆ. ನಂಜನಗೂಡು ಪೊಲೀಸರ ಕಾರ್ಯಚರಣೆಯಲ್ಲಿ ಬಸ್ ಮಾಲೀಕನ ಕಳ್ಳಾಟ ಬಟಾಬಯಲಾಗಿದೆ. ಮೈಸೂರು ಜೆ ಎಲ್ ಬಿ ರಸ್ತೆಯ ಪೆಟ್ರೋಲ್ ಬಂಕ್ ನಲ್ಲಿ ನಿಲುಗಡೆಯಾಗಿದ್ದ ಒಂದು ಬಸ್ ಸೀಜ್ ಆದರೆ, ಮತ್ತೊಂದು ನಂಜನಗೂಡು ಪಟ್ಟಣದ ವಿದ್ಯಾವರ್ಧಕ ಕಾಲೇಜು ಮೈದಾನದಲ್ಲಿ ಸಿಕ್ಕಿಬಿದ್ದಿದೆ. ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ಎರಡು ಬಸ್ ಸೀಜ್ ಮಾಡಲಾಗಿದೆ.

ನಂಜನಗೂಡಿನ ವೃತ್ತ ನಿರೀಕ್ಷಕ ಲಕ್ಷ್ಮಿಕಾಂತ ತಳವಾರ್ ಮತ್ತು ಪಿಎಸ್‌ಐ ರವಿಕುಮಾರ್ ಸದ್ಯ ಮೈಸೂರಿನ ಆರ್ ಟಿ ಓ ಕಚೇರಿಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಪತ್ರ ವ್ಯವಹಾರ ನಡೆಸಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ವಾಹನಗಳ ಪರವಾನಗಿಯನ್ನು ಸರ್ಕಾರಕ್ಕೆ ಒಪ್ಪಿಸಿರುವ ಬಸ್ ಮಾಲೀಕರು ತೆರಿಗೆ ವಿನಾಯಿತಿಗೆ ಮನವಿ ಮಾಡುತ್ತಿದ್ದರೆ, ಈ ಕಾಮಧೇನು ಮಾಲೀಕ ಮಂಜುನಾಥ್ ಮಾತ್ರ ಒಂದೇ ಸಂಖ್ಯೆಯನ್ನು ಎರಡೆರಡು ಬಸ್ ಗಳಿಗೆ ಹಾಕಿಕೊಂಡು ಸರ್ಕಾರಕ್ಕೆ ಪಂಗನಾಮ ಹಾಕುತ್ತಿದ್ದಾನೆ.

ಹೀಗಾಗಿ ಮಾಲೀಕನ ವಿರುದ್ಧ ಕಠಿಣ ಕ್ರಮಕ್ಕೆ ನಂಜನಗೂಡು ಪೊಲೀಸರು ಮುಂದಾಗಿದ್ದಾರೆ. ಆರ್‌ಟಿಓ ಅಧಿಕಾರಿಗಳು ಈ ಬಗ್ಗೆ ದಾಖಲೆ ಒದಗಿಸುವಂತೆ ನೋಟಿಸ್ ನೀಡಿದ್ದು ದಾಖಲೆ ಇಲ್ಲದ ಒಂದು ಬಸ್ಸನ್ನ ಆರ್‌ಟಿಓದವರೇ ವಶಪಡಿಸಿಕೊಳ್ಳು ಸಾಧ್ಯತೆ ಇದೆ ಅಥವ ನಂ ಪ್ಲೇಟ್ ತಪ್ಪಾಗಿ ಹಾಕಿದ್ದಕ್ಕೂ ಕೇಸು ದಾಖಲಿಸುವ ಸಾಧ್ಯತೆ ಇದೆ. ಟ್ಯಾಕ್ಸ್‌ ಕಟ್ಟೋಕೆ ಕಳ್ಳಾಟ ಆಡಿದ ಮಾಲೀಕನಿಗೆ ಪೊಲೀಸರು ಸಖತ್‌ ಶಾಕ್ ಕೊಟ್ಟಿದ್ದಂತು ಸುಳ್ಳಲ್ಲ.

LEAVE A REPLY

Please enter your comment!
Please enter your name here