ಎರಡೂವರೆ ವರ್ಷದ ಮಗಳಿಗೆ ಕೊಡಬಾರದ ಕಾಮೆಂಟ್​ ಕೊಟ್ಟ ಅಪ್ಪ; ರೊಚ್ಚಿಗೆದ್ದ ಅಮ್ಮ ಮಾಡಿದ್ದೇನು?

0

ಪರಸ್ಪರ ಪ್ರೀತಿಸಿ, ಒಟ್ಟಿಗೇ ಜೀವನ ನಡೆಸುತ್ತಿದ್ದ ದಂಪತಿ ಬೇರೆಯಾಗಿದ್ದರು. ಅಷ್ಟರಲ್ಲೇ ಅವರಿಗೆ ಒಂದು ಹೆಣ್ಣು ಮಗುವೂ ಆಗಿತ್ತು. ಮಗು ತಾಯಿಯೊಂದಿಗೆ ಇರುತ್ತಿದ್ದರೂ..ಆಗಾಗ ಅವಳನ್ನು ಭೇಟಿಯಾಗಲು ತಂದೆ ಬರುತ್ತಿದ್ದ. ಇಲ್ಲ, ಇವರೇ ಅಲ್ಲಿ ಹೋಗಿ ಬರುತ್ತಿದ್ದರು.

ಆದರೆ ಈಗ ಮಗುವಿನ ಅಮ್ಮ, ತನ್ನ ಮಾಜಿ ಪ್ರಿಯತಮನಿಗೆ ಇನ್ನು ಮುಂದೆ ಯಾವ ಕಾರಣಕ್ಕೂ ಮಗುವನ್ನು ತೋರಿಸುವುದಿಲ್ಲ. ಅವನೂ ಬರಬಾರದು..ನಾವೂ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾಳೆ.
ಲಂಡನ್​​ನಲ್ಲಿ ಹೀಗೊಂದು ಘಟನೆ ನಡೆದಿದೆ. ಮಗುವಿಗೆ ಈಗ ಎರಡೂವರೆ ವರ್ಷ. ಕರೊನಾ ಸೋಂಕಿನ ಕಾರಣದಿಂದ ಅಮ್ಮನೊಂದಿಗೆ ಇದ್ದ ಮಗು ತಂದೆಯನ್ನು ಭೇಟಿಯಾಗುತ್ತಿರಲಿಲ್ಲ. ಬದಲಿಗೆ ವಿಡಿಯೋ ಕಾಲ್​ ಮೂಲಕ ಅಪ್ಪ, ತನ್ನ ಮಗಳನ್ನು ನೋಡುತ್ತಿದ್ದ.

ಹೀಗೆ ಒಮ್ಮೆ ವಿಡಿಯೋ ಕಾಲ್​ ಮಾಡಿದಾಗ ಆತ ಮಗುವಿನ ಬಗ್ಗೆ ಒಂದು ಕಾಮೆಂಟ್​ ಮಾಡಿದ್ದೇ ಮಹಿಳೆ ರೊಚ್ಚಿಗೇಳಲು ಕಾರಣ. ಆ ಪುಟ್ಟ ಮಗುವಿಗೆ ಅದರ ಅಪ್ಪ ಡುಮ್ಮಿ ಎಂದ. ತುಂಬ ದಪ್ಪಗಿದ್ದಾಳೆ. ಅವಳಿಗೆ ಡಯಟ್​ ಮಾಡಿಸು ಎಂದ. ಹಾಗಾಗಿ ನನಗೆ ತುಂಬ ಕೋಪ ಬಂತು.

ಅಷ್ಟು ಪುಟ್ಟ ಮಗುವಿಗೆ ನಾನು ತಿನ್ನಿಸುವುದನ್ನು ನಿಲ್ಲಿಸಬೇಕಂತೆ. ಡಯಟ್​ ಮಾಡಿಸಬೇಕಂತೆ. ಅವಳು ತುಂಬ ದಪ್ಪಗಾಗಿದ್ದಾಳೆ ಎಂದು ಅಣಕಿಸಿದ. ನನಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಅವನೊಂದಿಗಿನ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಂಡಿದ್ದೇನೆ ಎಂದಿದ್ದಾರೆ.

ಒಂದು ಸಲ ಅಲ್ಲ. ಪದೇಪದೆ ಅದನ್ನೇ ಹೇಳುತ್ತಿದ್ದಾನೆ. ಹಾಗಾಗಿ ಖಡಕ್​ ಆಗಿ ಎಚ್ಚರಿಕೆ ನೀಡಿದ್ದೇನೆ. ಅವನು ತನ್ನನ್ನು ತಾನು ಕಂಟ್ರೋಲ್ ಮಾಡಿಕೊಂಡು, ಮಗುವಿಗೆ ಡುಮ್ಮಿ ಎಂದು ಹೇಳುವುದನ್ನು ಯಾವಾಗ ನಿಲ್ಲಿಸುತ್ತಾನೋ ಆಗ ಮತ್ತೆ ಮಗುವನ್ನು ತೋರಿಸುತ್ತೇನೆ. ಅಲ್ಲಿಯವರೆಗೆ ಮಗುವಿನ ಸಂಪೂರ್ಣ ಜವಾಬ್ದಾರಿ ನನ್ನದೇ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಇದನ್ನು ಸೋಷಿಯಲ್​ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ. ನೆಟ್ಟಿಗರು ಮಹಿಳೆಯ ಪರ-ವಿರೋಧ ಮಾತನಾಡಿದ್ದಾರೆ. ಆತ ಹೇಳಿದ್ದು ಮಗುವಿನ ಆರೋಗ್ಯದ ದೃಷ್ಟಿಯಿಂದ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಹಿಳೆಗೆ ಸಲಹೆಯನ್ನೂ ನೀಡಿದ್ದಾರೆ. ಆದರೆ ಈಕೆ ಮಾತ್ರ ಪಟ್ಟು ಬಿಡುತ್ತಿಲ್ಲ. (ಏಜೆನ್ಸೀಸ್​)

LEAVE A REPLY

Please enter your comment!
Please enter your name here