ಎಸ್​ಬಿಐ ಮುಖ್ಯಸ್ಥ ರಜನೀಶ್ ಕುಮಾರ್ ಅವಧಿ ಮುಕ್ತಾಯ: ಹೊಸ ಸಾರಥಿ ಯಾರು?

0

ದೇಶದ ಬ್ಯಾಂಕಿಂಗ್ ಕ್ಷೇತ್ರದ ಮುಂಚೂಣಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಸ್ಥ ರಜನೀಶ್ ಕುಮಾರ್ ಅವರ ಅಧಿಕಾರಾವಧಿ ಇಂದು ಮುಕ್ತಾಯವಾಗಿದೆ. 2017ರ ಅಕ್ಟೋಬರ್ 7ರಂದು ಅವರು ಅಧಿಕಾರ ಸ್ವೀಕರಿಸಿದ್ದರು. ಮೂರು ವರ್ಷದ ಅವಧಿ ಇಂದು ಕೊನೆಗೊಂಡಿದೆ. ಆದರೆ, ಹೊಸ ಮುಖ್ಯಸ್ಥರ ನೇಮಕ ಇನ್ನೂ ಆಗಿಲ್ಲ.

ಬ್ಯಾಂಕ್ಸ್ ಬೋರ್ಡ್ ಬ್ಯೂರೋ ಈಗಾಗಲೇ ಮೂರು ಬ್ಯಾಂಕುಗಳ ಮ್ಯಾನೇಜಿಂಗ್ ಡೈರೆಕ್ಟರ್​ಗಳ ಪೈಕಿ ಸೇವಾ ಹಿರಿತನ ಹೊಂದಿದ ದಿನೇಶ್ ಖಾರಾ ಅವರ ಹೆಸರನ್ನು ಎಸ್​ಬಿಐ ಮುಖ್ಯಸ್ಥರ ಹುದ್ದೆಗೆ ಶಿಫಾರಸು ಮಾಡಿದೆ. ಆದರೆ, ಸರ್ಕಾರ ಇನ್ನೂ ಅದಕ್ಕೆ ಹಸಿರುನಿಶಾನೆ ತೋರಿಲ್ಲ. ಇದಲ್ಲದೆ, ಖಾಲಿ ಇರುವ ಇತರೆ ಎಂಡಿ ಸ್ಥಾನಗಳಿಗೆ ಎಸ್​ ಜಾನಕಿರಾಮನ್ ಮತ್ತು ಅಶ್ವನಿಕುಮಾರ್ ತಿವಾರಿ ಹೆಸರನ್ನೂ ಬ್ಯೂರೋ ಶಿಫಾರಸು ಮಾಡಿದೆ.

ಇದನ್ನು ಓದಿ: ಹೀಗೂ ಉಂಟು! ಮೊಬೈಲ್‍ನಲ್ಲಿ ಮೊರೆ ಕೇಳಿ ವರ ನೀಡ್ತಾನಂತೆ ಈ ಗಣಪ.

ಕೇಂದ್ರ ಸರ್ಕಾರ ಇನ್ನಷ್ಟೇ ಈ ಬಗ್ಗೆ ನಿರ್ಣಯ ಪ್ರಕಟಿಸಬೇಕಾಗಿದೆ. ಬಹುತೇಕ ದಿನೇಶ್ ಹೆಸರು ಅಂತಿಮಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

LEAVE A REPLY

Please enter your comment!
Please enter your name here