ಐಪಿಎಲ್ ಪಂದ್ಯಗಳಿಗೆ ದುಬಾರಿಯಾಗಿದೆ ಯುಎಇ ನಿಯಮ

0

ಮುಂದಿನ ತಿಂಗಳು ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಐಪಿಎಲ್ ಪ್ರಾರಂಭವಾಗಲಿದೆ. ಪಂದ್ಯಾವಳಿಗಾಗಿ ಎಲ್ಲಾ ತಂಡಗಳು ಯುಎಇ ತಲುಪಿದೆ. ಆದ್ರೆ ಇಲ್ಲಿಯವರೆಗೆ ಬಿಸಿಸಿಐ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಇದಕ್ಕೆ ಕಾರಣ ಯುಎಇಯಲ್ಲಿ ಸದ್ಯ ಜಾರಿಯಲ್ಲಿರುವ ಕಾನೂನು.

ಈ ವರ್ಷ ಐಪಿಎಲ್‌ನಲ್ಲಿ ಸುಮಾರು 60 ಪಂದ್ಯಗಳು ನಡೆಯಲಿವೆ. ಗ್ರೂಪ್ ಲೀಗ್‌ನಲ್ಲಿ 56, ಪ್ಲೇಆಫ್‌ನಲ್ಲಿ ಮೂರು ಮತ್ತು ನಂತರ ಫೈನಲ್‌ ನಡೆಯಲಿದೆ. ವರದಿಗಳ ಪ್ರಕಾರ, ದುಬೈ ಮತ್ತು ಅಬುಧಾಬಿಯಲ್ಲಿ ಹೆಚ್ಚಿನ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಯೋಜಿಸುತ್ತಿದೆ.

ಅಬುಧಾಬಿಗೆ ಪ್ರಯಾಣಿಸಲು ಪ್ರತಿ ಬಾರಿಯೂ ಕೊರೊನಾ ಪರೀಕ್ಷೆ ಮಾಡಬೇಕಾಗುತ್ತದೆ. ದುಬೈ ಮತ್ತು ಅಬುಧಾಬಿಯಲ್ಲಿ 21 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಯೋಜಿಸುತ್ತಿದೆ.ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ರಸ್ತುತ ಅಬುಧಾಬಿಯಲ್ಲಿದೆ. ಅಲ್ಲಿ ಹೆಚ್ಚಿನ ಪಂದ್ಯಗಳನ್ನು ನಡೆಸಿದ್ರೆ ಕೊರೊನಾ ಪರೀಕ್ಷೆ ಕೂಡ ಹೆಚ್ಚು ಬಾರಿ ಮಾಡಿಸಬೇಕು. ಇದ್ರಿಂದ ಹೆಚ್ಚಿನ ಸಮಯ ಹಿಡಿಯುತ್ತದೆ. ಹಾಗಾಗಿ ಅಲ್ಲಿನ ಆಡಳಿತದ ಜೊತೆ ಬಿಸಿಸಿಐ ಮಾತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ನಿರ್ಧರಿಸಿದೆ.

LEAVE A REPLY

Please enter your comment!
Please enter your name here