ಐಪಿಎಲ್ 2020: ಕಾಮೆಂಟೇಟರ್‌ಗಳ ಪಟ್ಟಿ ಬಿಡುಗಡೆ, ಮಂಜ್ರೇಕರ್‌ಗಿಲ್ಲ ಅವಕಾಶ

0

ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಕಳೆದ ಹಲವು ವರ್ಷಗಳಿಂದ ಕಾಮೆಂಟೇಟರ್ ಆಗಿ ಖ್ಯಾತರಾಗಿದ್ದಾರೆ. ಐಪಿಎಲ್‌ನಲ್ಲೂ ಬಹುತೇಕ ಎಲ್ಲಾ ಆವೃತ್ತಿಗಳಲ್ಲಿ ಮಂಜ್ರೇಕರ್ ವೀಕ್ಷಕ ವಿವರಣೆಯನ್ನು ನೀಡಿದ್ದಾರೆ. ಆದರೆ ಈ ಬಾರಿಯ ಐಪಿಎಲ್ ಕಾಮೆಂಟೆರ್‌ಗಳ ಪಟ್ಟಿಯಿಂದ ನಿರೀಕ್ಷೆಯಂತೆಯೇ ಮಂಜ್ರೇಕರ್ ಹೊರಬಿದ್ದಿದ್ದಾರೆ.

ಮುಂಬೈ ಮಿರರ್ ವರದಿಯ ಪ್ರಕಾರ ಬಿಸಿಸಿಐ 7 ಕಾಮೆಂಟೆಟರ್‌ಗಳನ್ನು 13ನೇ ಆವೃತ್ತಿಯ ಐಪಿಎಲ್‌ಗೆ ಅಂತಿಮಗೊಳಿಸಿದೆ. ಸುನಿಲ್ ಗವಾಸ್ಕರ್, ಎಲ್ ಶಿವರಾಮ ಕೃಷ್ಣನ್, ಮುರಳಿ ಕಾರ್ತಿಕ್, ದೀಪ್‌ದಾಸ್‌ ಗುಪ್ತಾ, ರೋಹನ್ ಗವಾಸ್ಕರ್ ಹರ್ಷ ಭೋಗ್ಲೆ ಹಾಗೂ ಅಂಜುಮ್ ಚೋಪ್ರಾ ಈ ಬಾರಿಯ ಐಪಿಎಲ್‌ಗೆ ಕಾಮೆಂಟೇಟರ್‌ಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಸಂಜಯ್ ಮಂಜ್ರೇಕರ್ ಕಳೆದ ವಿಶ್ವಕಪ್‌ನಲ್ಲಿ ಕಾಮೆಂಟೇರ್‌ ಆಗಿ ಕರ್ತವ್ಯವನ್ನು ನಿರ್ವಹಿಸಿದ್ದರು. ಆದರೆ ಕೆಲ ವಿವಾದಾತ್ಮಕ ಹೇಳಿಕೆಗಳು ಮಂಜ್ರೇಕರ್‌ಗೆ ಮುಳುವಾಗಿದೆ. ಹೀಗಾಗಿ ಬಿಸಿಸಿಐ ತನ್ನ ಅಧಿಕೃತ ಕಾಮೆಂಟೇಟರ್‌ಗಳ ಪಟ್ಟಿಯಿಂದ ಮಂಜ್ರೇಕರ್ ಅವರನ್ನು ಕೈ ಬಿಟ್ಟಿತ್ತು.

3 ಕ್ರೀಡಾಂಗಣಗಳಲ್ಲಿ ಐಪಿಎಲ್ ನಡೆಯಲಿದ್ದು ದುಬೈ ಹಾಗೂ ಅಬುದಾಬಿಯಲ್ಲಿ ತಲಾ 21 ಪಂದ್ಯಗಳು ನಡೆದರೆ ಶಾರ್ಜಾದಲ್ಲಿ 14 ಪಂದ್ಯ ಆಯೋಜನೆಯಾಗಲಿದೆ. ಹೀಗಾಗಿ ಕಾಮೆಂಟೇರ್‌ಗಳು ಕೂಡ 2 ಜೈವಿಕ ವಲಯಗಳೊಂದಿಗೆ 3 ಕೇಂದ್ರ ಗಳಿಂದ ಕರ್ತವ್ಯ ನಿರ್ವಹಿಸಿಲಿದ್ದಾರೆ.

ಸೆಪ್ಟೆಂಬರ್ 19 ರಿಂದ ಐಪಿಎಲ್ ಆರಂಭವಾಗಲಿದೆ. ಆದರೆ ಕೆಲ ಕಾರಣಗಳಿಂದಾಗಿ ಐಪಿಎಲ್ ವೇಳಾಪಟ್ಟಿ ಬಿಡುಗಡೆಗೆ ತಡವಾಗಿದೆ. ಮತ್ತೊಂದೆಡೆ ಎಲ್ಲಾ ತಂಡಗಳು ತಮ್ಮ ಅಭ್ಯಾಸವನ್ನು ಈಗಾಗಲೇ ಆರಂಭಿಸಿದ್ದು ಟೂರ್ನಿಗೆ ಭರ್ಜರಿಯಾಗಿ ಸಿದ್ದವಾಗುತ್ತಿದೆ.

LEAVE A REPLY

Please enter your comment!
Please enter your name here