ಕರ್ನಾಟಕ ರಾಜ್ಯ ಬಂದ್ ಹರಪನಹಳ್ಳಿಯಲ್ಲಿ ವಿವಿಧ ಸಂಘಟನೆಗಳಿಂದ ಬಂದ್ ಯಶಸ್ವಿ

0

ಕರ್ನಾಟಕ ರಾಜ್ಯ ಬಂದ್ ಹರಪನಹಳ್ಳಿಯಲ್ಲಿ ವಿವಿಧ ಸಂಘಟನೆಗಳಿಂದ ಬಂದ್ ಯಶಸ್ವಿ
:
ಹರಪನಹಳ್ಳಿ:
ರೈತ ವಿರೋಧಿ, ಕಾರ್ಪೋರೇಟ್ ಕಂಪನಿಗಳ ಪರವಾದ ಭೂ
ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಸೇರಿದಂತೆ ರೈತ ಮತ್ತು
ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಕರ್ನಾಟಕ ರಾಜ್ಯ ವ್ಯಾಪ್ತಿ
ಬಂದ್‍ಗೆ ಹರಪನಹಳ್ಳಿಯಲ್ಲಿ ಯಶಸ್ವಿಯಾಗಿದೆ.
ಅಂಗಡಿ ಮುಂಗಟ್ಟುಗಳು ಬಂದ್ ಆದ ಪ್ರಯುಕ್ತ ಜೈಕಾರ
ಘೋಷಣೆಗಳೊಂದಿಗೆ ಮೆರವಣಿಗೆ ಮಾಡುತ್ತಿದ್ದ
ಪ್ರತಿಭಟನಾಕಾರರ ಕಣ್ಣಿಗೆ ಬಾಗಿಲು ತೆರೆದ
ಉಪನೊಂದಾಣಾಧಿಕಾರಿಗಳ ಕಚೇರಿ ಕಂಡ ಕೂಡಲೇ
ಮುಗಿಬಿದ್ದು, ಬಂದ್ ಮಾಡಿಸಿದ ಘಟನೆ ಜರುಗಿತು.
ವಿವಿಧ ಸಂಘಟನೆಗಳ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ
ಸೋಮುವಾರ ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿರುವ ಎಲ್ಲಾ
ಅಂಗಡಿಗಳನ್ನು ಬಂದ್ ಮಾಡುವಂತೆ ಮನವಿ ಮಾಡಿಕೊಂಡರು ಈ
ಹಿನ್ನೆಲೆಯಲ್ಲಿ ಬಹುತೇಕ ಅಂಗಡಿಗಳು ಬಂದ್ ಆಗಿದ್ದವು. ಬಸ್
ಸಂಚಾರ ಕೂಡ್ ಬಂದಾಗಿತ್ತು. ಮುಂಜಾಗೃತಾ ಬಂದ್ ಆದ್ದರಿಂದ
ಪ್ರಯಾಣೀಕರ ಓಡಾಟ ವಿರಳವಾಗಿತ್ತು.
ವಿವಿಧ ರೈತ ಪರ ಸಂಘಟನೆಗಳು ಪಟ್ಟಣದ ಪ್ರವಾಸಿ ಮಂದಿರ
ವೃತ್ತದಿಂದ ಹೋಸಪೇಟೆ ರಸ್ತೆಯ ಮೂಲಕ ಇಜಾರಿ ಶಿರಸಪ್ಪ
ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ಮೂಲಕ ಮಾನವ
ಸರಪಳಿಯನ್ನು ರಚಿಸಿ, ಬಹಿರಂಗ ಸಭೆ ನಡೆಸಿದರು, ಈ
ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಎಂ.ಪಿ.ವೀಣಾ ಮಹಂತೇಶ್ ಮಾತನಾಡಿ ಸರ್ಕಾರದ ಕ್ರಮವನ್ನು ಖಂಡಿಸಿ ಮಾತನಾಡಿದರು,ಹಾಗೂ ರೈತ ಮುಖಂಡರಾದ ಗೋಣಪ್ಪ ಮತ್ತು ಹೆಚ್ .ಎಂ.ಸಂತೋಷ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ವಾಗ್ಧಳಿಯನ್ನು ನೆಡೆಸಿದರು .ಈ ಸಂದರ್ಭದಲ್ಲಿ ಸಿಪಿಐ(ಎಂಎಲ್) ಮುಖಂಡ ಇದ್ಲಿರಾಮಪ್ಪ, ಸಿಪಿಐನ ಹೊಸಹಳ್ಳಿ
ಮಲ್ಲೇಶ್, ಎಐಕೆಎಸ್‍ನ ಗುಡಿಹಳ್ಳಿ ಹಾಲೇಶ್, ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷ ಬೇಲೂರು ಅಂಜಪ್ಪ, ಈರುಳ್ಳಿ ಬೆಳೆಗಾರರ ಒಕ್ಕೂಟದ
ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಮುಖಂಡರು ಎಂ.ಪಿ.ವೀಣಾಮಹಾಂತೇಶ್,
ದೇವದಾಸಿ ಮಹಿಳಾ ವಿಮೋಚನ ಸಂಘಟನೆಯ, ಸಿಪಿಐಎಂನ ಜಿಲ್ಲಾ
ಕಾರ್ಯದರ್ಶಿ ಟಿ.ವಿ.ರೇಣುಕಮ್ಮ, ಎಐಎಸ್‍ಫ್‍ನ ಹೆಚ್.ಎಂ.ಸಂತೋಷ್,
ಕರ್ನಾಟಕ ರಕ್ಷಣ ವೇದಿಕೆ (ನಾರಾಯಣ ಗೌಡ ಬಣ) ಅಧ್ಯಕ್ಷ ಬಸವರಾಜ
ಹುಲಿಯಪ್ಪನವರ್, ಗ್ರಾಮೀಣ ಕೂಲಿಕಾರರ ಸಂಘಟನೆಯ
ಹೆಚ್.ವೆಂಕಟೇಶ್, ದ್ಯಾಮಜ್ಜಿ ಹನುಮಂತಪ್ಪ, ಕೇಂದ್ರ ಮತ್ತು
ರಾಜ್ಯ ಸರ್ಕಾರದ ವಿರುದ್ಧ ತಿದ್ದುಪಡೆ ಕಾಯ್ದೆಗಳ ವಿರುದ್ದ
ವಾಗ್ದಾಳಿ ನಡೆಸಿದರು.
ತಹಶೀಲ್ದಾರರಿಗೆ ವಿವಿಧ ರೈತ ಕಾರ್ಮಿಕ ವಿರೋಧಿ
ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮನವಿ
ಸಲ್ಲಿಸಿದರು.
ಮದ್ಯಾಹ್ನದ ನಂತರ ಎಂದಿನಂತೆ ಅಂಗಡಿಗಳು, ವಾಹನ ಸಂಚಾರ
ನಡೆಯುತ್ತಿರುವ ದೃಶ್ಯ ಕಂಡುಬಂತು.
ರಾಜ್ಯ ಬಂದ್ ಆಗಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪೋಲಿಸ್
ಸಿಬ್ಬಂಧಿಗಳು ಸೂಕ್ತ ಕಟ್ಟೆಚ್ಚರವಹಿಸಿದ್ದರು. ಸ್ಥಳದಲ್ಲಿ ಸಿಪಿಐ,
ಪಿಎಸ್‍ಐ ಸೇರಿದಂತೆ ನೂರಾರು ಪೋಲಿಸ್‍ರು, ಪ್ರತಿಭಟನೆ ಸಂಧರ್ಬದಲ್ಲಿ
ಬಂದೋಬಸ್ತ ಕರ್ತವ್ಯದಲ್ಲಿ ನಿರತರಾಗಿದ್ದರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ಜಾಕೀರ್ ಸರಕಾವಸ್,
ಹುಲಿಕಟ್ಟಿ ರಾಜಪ್ಪ, ಸಂದೇರ ಪರಶುರಾಮ, ತೆಲಿಗಿ ಸುರೇಶ್‍ಪ್ಪ,
ಗೋಣೆಪ್ಪ, ಆರ್.ದುರುಗಪ್ಪ, ಗೌರಿಹಳ್ಳಿ ಹನುಮಂತಪ್ಪ,
ಕರಡಿದುರ್ಗದ ಚೌಡಪ್ಪ, ದ್ವಾರಕೇಶ್, ಶೃಂಗಾರತೋಟ
ಬಸವರಾಜ, ಭಾಗ್ಯಮ್ಮ, ಶೃತಿ, ಸರೋಜಬಾಯಿ, ಸೇರಿದಂತೆ ಇತರರು
ಇದ್ದರು.

 

 

LEAVE A REPLY

Please enter your comment!
Please enter your name here