ಕೂಡ್ಲಿಗಿ ಗಾಂಧೀ ಸ್ಮಾರಕದಲ್ಲಿ ಜಯಂತಿ: ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಗತ್ತಿಗೇ ಮಹಾತ್ಮರು -ಎಸ್.ಮಹಾಬಲೇಶ್ವರ ಕೂಡ್ಲಿಗಿ:

0

ಗಾಂಧಿ ಚಿತಾಭಸ್ಮ ಸ್ಮಾರಕ ಆವರಣದಲ್ಲಿ ಗಾಂಧೀಜಿ ಹಾಗುಾ ಶಾಸ್ತ್ರೀಜಿಯವರ ಜಯಂತಿ ಆಚರಿಸಲಾಯಿತು,ತಹಶಿಲ್ದಾರರಾದ ಎಸ್.ಮಹಾಬಲೇಶ್ವರ ಮಾತನಾಡಿದರು.ಅಹಿಂಸಾತ್ಮಸ್ವಾತಂತ್ರ್ಯ ಹೋರಾಟ,ಸರಳತೆ,ಸ್ವಚ್ಚತೆಗೆ ಗಾಂಧೀಜಿವರು.ಹಸಿರು ಕ್ರಾಂತಿ ಹಾಗೂ ಕ್ಷೀರ ಕ್ರಾಂತಿಯ ಹರಿಕಾರ,ದೇಶದ ಮೊದಲ ಪ್ರಧಾನಿ ಸರಳತೆಗೆ ಸಾಕ್ಷಿ ಶಾಸ್ತ್ರೀಜಿ.”ಜೈ ಜವಾನ್ ಜೈಕಿಸಾನ್” ಎಂದು ಸೈನಿಕರು ಮತ್ತು ರೈತರೇ ದೇಶದ ನಿಜವಾದ ನಾಯಕರು ಹಾಗೂ ಸಂಪತ್ತು ಎಂದವರು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು. ಇವರು ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಮಹಾತ್ಮರಾಗಿದ್ದಾರೆ.ಇಂತಹ ಮಹಾತ್ಮರ ರಾಷ್ಟ್ರೀಯ ಸ್ಮಾರಕವನ್ನು,ಹೊಂದಿರುವುದು ಕೂಡ್ಲಿಗಿ ತಾಲೂಕಿನ ಸಮಸ್ಥ ಜನತೆಯ ಭಾಗ್ಯವಾಗಿದೆ. ಸ್ಮಾರಕದಲ್ಲಿ ಮಹಾತ್ಮರ ಜಯಂತಿ ಆಚರಿಸುವ ನಾವೆಲ್ಲರೂ ಮಹಾನ್ ಭಾಗ್ಯ ಶಾಲಿಗಳು,ಮಹಾತ್ಮರ ಆದಶ೯ಗಳನ್ನು ಜಗತ್ತಿನ ಮಹಾನ್ ನಾಯಕರು ಪಾಲಿಸುತ್ತಿದ್ದಾರೆ.ಸವ೯ರೂ ಮಹಾತ್ಮರ ಆದಶ೯ಗಳನ್ನು ಪಾಲಿಸುವ ಮೂಲಕ ಅವರನ್ನು ಗೌರವಿಸೋಣ ಎಂದರು. ಸ್ಮಾರಕ ಅಭಿವೃದ್ಧಿ ಸಮಿತಿಯವರು,ರೈತ ಹಾಗೂ ಕಾಮಿ೯ಕ ಮುಖಂಡರು.ವಿವಿದ ತಾಲೂಕು ಮಟ್ಟದ ಇಲಾಖಾಧಿಕಾರಿಗಳು,ಪಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ,ಆರಕ್ಷಕ ಅಧಿಕಾರಿ ಹಾಗೂ ಸಿಬ್ಬಂದಿ,ಗೃಹರಕ್ಷಕ ದಳದವರು,ವಿವಿದ ಗಣ್ಯಮಾನ್ಯರು,ಹಿರಿಯ ನಾಗರೀಕರು,ಕಲಾವಿದರು,ಸಾಹಿತಿಗಳು,ವಿವಿದ ಸಂಘಟನೆಗಳ ಪದಾಧಿಕಾರಿಗಳು ಜಯಂತಿಯಲ್ಲಿ ಭಾಗವಹಿಸಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

LEAVE A REPLY

Please enter your comment!
Please enter your name here