ಕೆಜಿಎಫ್ 2 ಚಿತ್ರ ತಂಡಕ್ಕೆ ಎದುರಾಯ್ತು ಈ ಸಂಕಷ್ಟ…!

0

ಬಾಲಿವುಡ್ ನಟ ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್ ಇದೆ. ಸಂಜಯ್ ದತ್ ಚಿಕಿತ್ಸೆಗೆ ವಿದೇಶಕ್ಕೆ ಹೋಗುವ ಸಾಧ್ಯತೆಯಿದೆ. ಆದ್ರೆ ಅನೇಕ ಪ್ರಾಜೆಕ್ಟ್ ಗೆ ಸಂಜಯ್ ದತ್ ಸಹಿ ಹಾಕಿದ್ದು, ಅದ್ರ ಕಥೆಯೇನು ಎಂಬ ಪ್ರಶ್ನೆ ಎದ್ದಿದೆ.

ಸಂಜಯ್ ಅರ್ಧ ಮುಗಿಸಿರುವ ಚಿತ್ರದಲ್ಲಿ ಕೆಜಿಎಫ್ 2 ಕೂಡ ಒಂದು. ಸಂಜಯ್ ದತ್ ಮೂರು ತಿಂಗಳ ನಂತ್ರ ಮತ್ತೆ ಶೂಟಿಂಗ್ ಗೆ ಬರಲಿದ್ದಾರೆಂದು ಕೆಜಿಎಫ್ 2 ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ ಹೇಳಿದ್ದಾರೆ. ‘ಟೈಮ್ಸ್ ಆಫ್ ಇಂಡಿಯಾ’ ಜೊತೆ ಮಾತನಾಡಿದ ಕಾರ್ತಿಕ್ ಗೌಡ, ಮೂರು ತಿಂಗಳ ಚಿಕಿತ್ಸೆ ನಂತ್ರ ಸಂಜಯ್ ದತ್ ಚಿತ್ರದ ಶೂಟಿಂಗ್ ಮಾಡಲಿದ್ದಾರೆ. ಈ ಬಗ್ಗೆ ಅವ್ರ ತಂಡ ನಮ್ಮ ಜೊತೆ ಮಾತನಾಡಿದೆ. ಎರಡು ದಿನಗಳ ಹಿಂದೆ ಸಂಜಯ್ ದತ್ ಜೊತೆ ಕೂಡ ಮಾತನಾಡಿದ್ದೇನೆಂದು ಕಾರ್ತಿಕ್ ಹೇಳಿದ್ದಾರೆ.

ಕೆಜಿಎಫ್ 2ನಲ್ಲಿ ಸಂಜಯ್ ದತ್ ಅಧಿರನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಅವ್ರ ಮೂರು ದಿನದ ಶೂಟಿಂಗ್ ಬಾಕಿಯಿದೆ ಎಂದು ಕಾರ್ತಿಕ್ ಹೇಳಿದ್ದಾರೆ. ಸಂಜಯ್ ದತ್ 61ನೇ ಹುಟ್ಟುಹಬ್ಬದಂದು ಅವ್ರ ಪೋಸ್ಟರ್ ಬಿಡುಗಡೆಯಾಗಿತ್ತು.

LEAVE A REPLY

Please enter your comment!
Please enter your name here