ಕೆ ಆರ್ ಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷರಾದ ಮರುವನಹಳ್ಳಿ ಶಂಕರ್ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಾಲ್ಲೆ ಬೆಂಗಳೂರಿನತ್ತ ಪಯಣ ಬೆಳೆಸಿದರು

0

ಕೆ ಆರ್ ಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷರಾದ ಮರುವನಹಳ್ಳಿ ಶಂಕರ್ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಾಲ್ಲೆ ಬೆಂಗಳೂರಿನತ್ತ ಪಯಣ ಬೆಳೆಸಿದರು

ಕೇಂದ್ರ ಮತ್ತು ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆ (೧೯೬೧)ಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ 25-9-2020ರ ಶುಕ್ರವಾರ ಬಂದ್ ಕರೆ ನೀಡುವ ಹಿನ್ನೆಲೆಯಲ್ಲಿ ಕೆ ಆರ್ ಪೇಟೆ ತಾಲೂಕು ರೈತ ಸಂಘದ ತಾಲೂಕು ಅಧ್ಯಕ್ಷರಾದ ಮುರುವನಹಳ್ಳಿ ಶಂಕರ ನೇತೃತ್ವದಲ್ಲಿ 30 ಹೆಚ್ಚು ರೈತ ಮುಖಂಡರು ಬೆಂಗಳೂರಿಗೆ ರೈತಾಪಿ ವರ್ಗಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಲೇ ಚಳುವಳಿ ಮುನ್ನುಗ್ಗಿದರು…

ನಂತರ ಮಾತನಾಡಿದ ತಾಲೂಕು ಅಧ್ಯಕ್ಷ ಶಂಕರ್ ರವರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತರುವ ಮೂಲಕ ಜನವಿರೋಧಿ ನೀತಿಯನ್ನು ಅನುಸರಿಸುತ್ತಿವೆ.ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಲ್ಲಿ ಇಡೀ ಕೃಷಿಕ್ಷೇತ್ರ ದೊಡ್ಡ ಮಟ್ಟದ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಭಾರತ ಕೃಷಿಪ್ರಧಾನ ದೇಶ ಮತ್ತು ದೇಶದ ಕೋಟ್ಯಂತರ ರೈತರು ಕೃಷಿಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾರೆ. ಅವರ ಪಾಲಿಗೆ ಅವರ ಜಮೀನೇ ಸರ್ವಸ್ವ. ಸಮಸ್ಯೆಗಳಿಗೆ ಸಿಲುಕಿದ ರೈತರಿಗೆ ಜಮೀನು ಮಾರಾಟದ ಆಮಿಷಗಳನ್ನು ಒಡ್ಡಿ ಅವರ ಜಮೀನುಗಳನ್ನು ಕಿತ್ತುಕೊಂಡರೆ, ಅವರ ಬದುಕುವ ಹಕ್ಕನ್ನೇ ಕಿತ್ತುಕೊಂಡಂತೆ. ತಮ್ಮ ಜಮೀನನ್ನು ಮಾರಾಟ ಮಾಡಿದ ರೈತರು ಕಾಲಕ್ರಮೇಣ ದಿವಾಳಿಗಳಾಗುತ್ತಾರೆ.ಉಳುವವನೇ ಭೂಮಿಯ ಒಡೆಯ ಎಂಬ ಮಹೋನ್ನತ ಆದರ್ಶದ ನೀತಿಯನ್ನು ದೇವರಾಜ ಅರಸು ಅವರ ನೇತೃತ್ವದ ಸರ್ಕಾರ ಜಾರಿಗೆ ತಂದಿತ್ತು. ಆದರೆ ಈಗ ದುಡ್ಡಿರುವವನೇ ಭೂಮಿಯ ಒಡೆಯ ಎಂಬ ರಾಜ್ಯ ಸರ್ಕಾರದ ನೀತಿಯಾಗಿದೆ. ಇದರಿಂದಾಗಿ ಸಮಾಜದಲ್ಲಿ ಅತಿ ಶ್ರೀಮಂತರು ಮತ್ತು ಅತಿ ಬಡವರೆಂಬ ಎರಡು ವರ್ಗಗಳು ಉಳಿದುಕೊಳ್ಳಲಿವೆ. ಭೂ ಒಡೆತನ ಕಳೆದುಕೊಳ್ಳುವ ಜನರನ್ನು ಭಿಕ್ಷುಕರನ್ನಾಗಿಸುವ ಕ್ರೌರ್ಯ ಈ ತಿದ್ದುಪಡಿಯಲ್ಲಿದೆ. ಎಂದು ಆಕ್ರೋಶವರ ಹಾಕುತ್ತಲೇ ಬೆಂಗಳೂರು ನತ ಪಯಣ ಬೆಳೆಸಿದರು….

ಈ ಸಂದರ್ಭದಲ್ಲಿ ರೈತ ಪರ ಹೋರಾಟಗಾರರಾದ ಕರೋಟಿ ತಮ್ಮಯ್ಯ . ಪುಟ್ಟೇಗೌಡ ಕಾರಿಗನಹಳ್ಳಿ. ನಾಗರಾಜು ಬೂಕನಕೆರೆ. ನಾಗೇಂದ್ರು ದೊಡ್ಡಸೋಮನಹಳ್ಳಿ. ಹೊನ್ನೇಗೌಡ ಅಕ್ಕಿಮಂಚನಹಳ್ಳಿ. ತಮ್ಮಣ್ಣ ಬಸವರಾಜ್. ಸೇರಿದಂತೆ ಇನ್ನೂ ಅನೇಕ ರೈತಪರ ಹೋರಾಟಗಾರರು ಇದ್ದರು….
ವರದಿಗಾರ :::::: ಪ್ರತಾಪ್. ಎ.ಬಿ

LEAVE A REPLY

Please enter your comment!
Please enter your name here