ಕೊನೆಗೂ ಎನ್​ಸಿಬಿ ಅಧಿಕಾರಿಗಳ ಎದುರು ಸತ್ಯ ಬಾಯ್ಬಿಟ್ಟ ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿ

0

ಮುಂಬೈ: ರಿಯಾ ಚಕ್ರವರ್ತಿ ಅಕ್ರಮವಾಗಿ ಡ್ರಗ್​ ಖರೀದಿ ಮಾಡುತ್ತಿದ್ದರು ಎಂದು ಸುಶಾಂತ್ ಸಿಂಗ್​ ಮನೆ ಕೆಲಸದವನಾದ ದೀಪೇಶ್​ ಎನ್​ಸಿಬಿ ಅಧಿಕಾರಿಗಳಿಗೆ ತಿಳಿಸಿದ ಬೆನ್ನಲ್ಲೇ ಇನ್ನೊಂದು ಮಹತ್ವದ ಬೆಳವಣಿಗೆ ನಡೆದಿದೆ.

ಇಷ್ಟು ದಿನ ಹಾರಿಕೆಯ ಉತ್ತರ ಕೊಡುತ್ತಲೇ ಬಂದಿದ್ದ ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿ ಕೊನೆಗೂ ತಪ್ಪು ಒಪ್ಪಿಕೊಂಡಿದ್ದಾರೆ. ನಾನು ನನ್ನ ಸಹೋದರನ ಮೂಲಕ ಸುಶಾಂತ್​ ಸಿಂಗ್​ಗಾಗಿ ಡ್ರಗ್​ ಪಡೆಯುತ್ತಿದ್ದೆ. ಆದರೆ ಯಾವತ್ತೂ ಅದನ್ನು ಸೇವಿಸಿಲ್ಲ ಎಂದು ಎನ್​ಸಿಬಿ ಅಧಿಕಾರಿಗಳ ಎದುರು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಸುಶಾಂತ್​ ಸಾವಿನ ಜತೆ ಡ್ರಗ್ಸ್​ ಥಳುಕು ಹಾಕಿಕೊಂಡಿದ್ದು, ಅದರ ತನಿಖೆಯನ್ನು ಎನ್​ಸಿಬಿ ಕೂಲಂಕಷವಾಗಿ ನಡೆಸುತ್ತಿದೆ. ಪರಿಣಾಮ ಈಗಾಗಲೇ ಹಲವು ಡ್ರಗ್​ ಪೆಡ್ಲರ್​ಗಳ ಹೆಸರು ಹೊರಬಿದ್ದಿದೆ. ಆದರೆ ರಿಯಾ ಇದುವರೆಗೂ ಒಪ್ಪಿಕೊಂಡಿರಲಿಲ್ಲ. ಇಂದು ಸತತ ಆರು ಗಂಟೆ ವಿಚಾರಣೆಗೆ ಒಳಪಟ್ಟ ರಿಯಾ ಚಕ್ರವರ್ತಿ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾರೆ. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಬಲ್ಲರ್ಡ್ ಎಸ್ಟೇಟ್​​ನಲ್ಲಿರುವ ಎನ್​ಸಿಬಿ ಕಚೇರಿಗೆ ಆಗಮಿಸಿದ್ದ ರಿಯಾಳನ್ನು ಸಂಜೆ 6.50ರವರೆಗೆ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಅಷ್ಟಕ್ಕೂ ಮುಗಿದಿಲ್ಲ…ಮತ್ತೆ ಅವರಿಗೆ ಎನ್​ಸಿಬಿ ಸಮನ್ಸ್ ನೀಡಿದ್ದು, ನಾಳೆ ವಿಚಾರಣೆಗೆ ಹಾಜರಾಗಬೇಕಿದೆ.

ಸುಶಾಂತ್​ ಮನೆ ಮ್ಯಾನೇಜರ್​ ಸ್ಯಾಮ್ಯುಯೆಲ್​ ಮಿರಾಂಡಾ ಮಾರ್ಚ್​ 17ರಂದು ಡ್ರಗ್​ ಪೆಡ್ಲರ್​ ಜೈದ್​ನಿಂದ ಡ್ರಗ್ಸ್ ಖರೀದಿ ಮಾಡಿದ್ದು ಗೊತ್ತು, ಅಷ್ಟೇ ಅಲ್ಲ, ನಾನೇ ಸ್ವತಃ ಸಹೋದರ ಶೋವಿಕ್​ ಜತೆ ಸೇರಿ, ಜೈದ್​ ಸಂಪರ್ಕ ಮಾಡುತ್ತಿದ್ದೆ ಎಂದೂ ರಿಯಾ ಎನ್​ಸಿಬಿ ಅಧಿಕಾರಿಗಳಿಗೆ ಹೇಳಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಈವರೆಗೆ ಎನ್​ಸಿಬಿ ಅಧಿಕಾರಿಗಳು ಸುಮಾರು 8 ಮಂದಿಯನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here