ಕೊರೊನಾ ಅಟ್ಟಹಾಸಕ್ಕೆ ಮತ್ತೊಂದು ಬಲಿ |ಮೂರು ಸೋಂಕು ದೃಢ | ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ಸಾವು 

0

ಸಾಚಿ ಟಿವಿ ನ್ಯೂಸ್

ಕೊರೊನಾ ಅಟ್ಟಹಾಸಕ್ಕೆ ಮತ್ತೊಂದು ಬಲಿ : ಮೂರು ಸೋಂಕು ದೃಢ | ಚಿಕಿತ್ಸೆ ಪಡೆಯುತ್ತಿದ್ದ ಸೊಂಕಿತ ಸಾವು:

ಅಥಣಿ ಕೊರೊನಾ ಅಟ್ಟಹಾಸಕ್ಕೆ ಮತ್ತೊಂದು ಬಲಿ : ಮೂರು ಸೋಂಕು ದೃಢ

ಅಥಣಿ   ತಾಲೂಕಿನಲ್ಲಿ ಮೊನ್ನೆ ತಾನೆ ಕೊರೊನಾದಿಂದ ಒಂದು ಸಾವು ಸಂಭವಿಸುವ ಮೂಲಕ ತಲ್ಲಣ ಮೂಡಿಸಿತ್ತು.ಆದರೆ ಮತ್ತೆ  ಯಕ್ಕಂಚಿಯಲ್ಲಿ 2 , ಅಥಣಿ ಪಟ್ಟಣದಲ್ಲಿ 1 ಪ್ರಕರಣ ಬುಧವಾರ ಪತ್ತೆಯಾಗಿದೆ . ಅಥಣಿ ಪಟ್ಟಣದ ಶಾಂತಿ ನಗರ ನಿವಾಸಿ 54 ವರ್ಷದ ಓರ್ವ ವ್ಯಕ್ತಿ ಮತ್ತು ಯಕ್ಕಂಚಿ ಗ್ರಾಮದಲ್ಲಿ 12ವರ್ಷದ ಬಾಲಕಿಗೆ ಹಾಗೂ 52 ವರ್ಷದ ವ್ಯಕ್ತಿಗೆ ಬುಧವಾರ ಸೋಂಕು ದೃಢಪಟ್ಟಿದೆ . ಯಕ್ಕಂಚಿ ಗ್ರಾಮದ ಇಬ್ಬರು ಸೋಂಕಿತರು ಮೀರಜ್ , ಸಾಂಗಲಿ ಸಮೀಪ ಇರುವ ಇಟ್ಟಂಗಿ ಭಟ್ಟಿ ಕೆಲಸಕ್ಕೆ ಹೋಗಿದ್ದವರು ಎನ್ನಲಾಗಿದೆ . ಯಕ್ಕಂಚಿಯ ಇಬ್ಬರನ್ನು ಮೇ .27 ರಂದು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು . ಜೂ .4 ರಂದು ಮುಕ್ತಾಯ ವಾಗಿ ಇತ್ತು . 24 ರಂದು ಸ್ವಾಬ್ ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಿಕೊಡಲಾಗಿತ್ತು . ಇವರಿ ಬ್ಬರಿಗೂ ಬುಧವಾರ ಸೋಂಕು ದೃಢಪಟ್ಟಿದೆ . ಅಥಣಿ ಪಟ್ಟಣದ ವ್ಯಕ್ತಿಗೆ ಬ್ಯುಸಿನೆಸ್ ಇದ್ದು , ವ್ಯಾಪಾರ ಸಂಬಂಧ ಮಹಾರಾಷ್ಟ್ರ ಜೊತೆ ನಂಟಿತ್ತು ಎಂದು ಹೇಳಲಾಗಿದೆ . ಈತನಿಗೆ ಕಳೆದ ಎರಡು ಮೂರು ದಿನಗಳಿಂದ ಜ್ವರ ಇದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ನೆರೆ ಮಹಾರಾಷ್ಟ್ರದ ಮೀರಜ್‌ಗೆ ಹೋಗಿದ್ದ . ಅಲ್ಲಿ ಆತನ ಸೋಂಕು ದೃಢಪಟ್ಟಿದೆ .

ಚಿಕಿತ್ಸೆ ಪಡೆಯುತ್ತಿದ್ದ ಸೊಂಕಿತ ಸಾವು: ನೆರೆಯ ಮಹಾರಾಷ್ಟ್ರದ

ಮೀರಜ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಥಣಿ ತಾಲೂಕಿನ ಮತ್ತೊಬ್ಬ ಸೋಂಕಿತ ಮೃತಪಟ್ಟ ಘಟನೆ ಬುಧವಾರ ಪಟ್ಟಣದಲ್ಲಿ ನಡೆದಿದೆ . ತಾಲೂಕಿನ ಶಿವನೂರ ಗ್ರಾಮದ 36 ವರ್ಷದ ವ್ಯಕ್ತಿ ಮೃತಪಟ್ಟವರು .ತಾಲೂಕಿನಲ್ಲಿ ಇದೀಗ ಇಬ್ಬರು ಸಾವಿಗೀಡಾದಂತಾಗಿದೆ . ಕೋವಿಡ್ -19 ಮಹಾಮಾರಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಓರ್ವ ಯುವಕನನ್ನು ಬಲಿಪಡೆದ ಬೆನ್ನಲ್ಲೇ ಮತ್ತೊಬ್ಬ ವ್ಯಕ್ತಿ ಮೃತಪಟ್ಟ ಹಿನ್ನೆಲೆ ಜನತೆ ಭೀತಿಗೊಳಗಾಗಿದ್ದಾರೆ .

ಪಟ್ಟಣದ ಶಾಂತಿನಗರ ನಿವಾಸಿಗೆ ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಜನರಲ್ಲಿ ಆತಂಕ ಹೆಚ್ಚಾಗಿದೆ . ಪಟ್ಟಣದ ನಿವಾಸಿ ಅನಾರೋಗ್ಯದಿಂದಾಗಿ ಮೂರು ದಿನಗಳ ಹಿಂದೆ ಪಕ್ಕದ ರಾಜ್ಯದ ಮಹಾರಾಷ್ಟಮಿರಜ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಕೋವಿಡ್ -19 ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ . ಮಹಾರಾಷ್ಟ್ರದ ಅಧಿಕಾರಿಗಳು ಅಥಣಿ ತಾಲೂಕು ಆಡಳಿತ ಮಾಹಿತಿ ನೀಡಿದ ಬೆನ್ನಲ್ಲೇ ತಾಲೂಕು ಆಡಳಿತ ಶಾಂತಿ ನಗರದ ಮುಖ್ಯರಸ್ತೆ ಲಾಕ್ ಡೌನ್ ಮಾಡಲಾಗಿದೆ . ನಿವಾಸಿ ಮನೆ ಹಾಗೂ ದ್ವಿತೀಯ ಹಂತದ ಸಂಪರ್ಕಗೊಂಡ ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಮುತ್ತಪ್ಪ ಕೊಪ್ಪದ ದೂರವಾಣಿ ಮೂಲಕ ಮಾಹಿತಿ ನೀಡಿದರು .

ವರದಿ: ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ ಅಥಣಿ

Video

 

LEAVE A REPLY

Please enter your comment!
Please enter your name here