ಪ್ರಪಂಚದಾದ್ಯಂತ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಹಲವು ಜನರ ಪ್ರಾಣ ತೆಗೆದಿದೆ.
ಆದರೆ ಅಮೆರಿಕ ಅಧ್ಯಕ್ಷ ಟ್ರಂಪ್ ಕೊರೊನಾ ಸಣ್ಣ ಜ್ವರವಷ್ಟೇ ಎಂದು ಟ್ವೀಟ್ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಟ್ರಂಪ್ ಅವರ ಪೋಸ್ಟ್ ಗೆ ಟ್ವಿಟರ್ ಕೆಂಡಾಮಂಡಲವಾಗಿದ್ದು, ಟ್ರಂಪ್ ಅವರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಪೋಸ್ಟ್ ತೆಗೆದುಹಾಕಿದೆ. ಈ ಪೋಸ್ಟ್ ಈಗಾಗಲೇ 26 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಟ್ವೀಟ್ ಹಾಗೂ ರಿಟ್ವೀಟ್ ಗಳನ್ನು ಟ್ವಿಟರ್ ನಿಷ್ಕ್ರಿಯಗೊಳಿಸಿದೆ.