: ಕೊರೊನಾ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಮತ್ತೊಂದು ಮತ್ತಷ್ಟು ಹೊರೆ ಬೀಳುವ ಎಲ್ಲ ಲಕ್ಷಣಗಳು ಕಾಣುತ್ತಿದ್ದು, ರೈಲು ಪ್ರಯಾಣ ದರ ದುಬಾರಿಯಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ರೈಲ್ವೇ ಪ್ರಯಾಣಕ್ಕೆ ಯೂಸರ್ ಡೆವಲಪ್ಮೆಂಟ್ ಫೀಸ್ (ಯುಡಿಎಫ್) ವಿಧಿಸುವ ಚಿಂತನೆಯಲ್ಲಿದೆ. ಇನ್ನು ಒಂದು ತಿಂಗಳಲ್ಲಿ ಅದಕ್ಕೆ ಅನುಮೋದನೆ ನೀಡುವ ನಿಟ್ಟಿನಲ್ಲೂ ಮಾತುಕತೆ ನಡೆದಿದೆ ಎನ್ನುವ ಮಾಹಿತಿ ಬಹಿರಂಗಗೊಂಡಿದ್ದು, ಹಾಗಾದಲ್ಲಿ ಸ್ಲೀಪರ್ ಕ್ಲಾಸ್ ಮತ್ತು ಎಸಿ ಪ್ರಯಾಣ ದರದಲ್ಲಿ ಹೆಚ್ಚಳವಾಗಲಿದೆ.
ಸದ್ಯ ಸಿಕ್ಕಿರುವ ಮಾಹಿತಿಗಳಂತೆ, ಎಸಿ1 ಕೆಟಗರಿಯಲ್ಲಿ 35ರಿಂದ 40 ರೂಪಾಯಿ, ಎಸಿ 2ನಲ್ಲಿ ಸುಮಾರು 30 ರೂಪಾಯಿ ಹಾಗೂ ಎಸಿ 3ನಲ್ಲಿ 25ರಿಂದ 30 ರೂಪಾಯಿ ಮತ್ತು ಸ್ಲೀಪರ್ ಕ್ಲಾಸ್ನಲ್ಲಿ ಹತ್ತು ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.