ಕೊರೊನಾ ಸೋಂಕಿತರು ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳುವುದೇಕೆ?

0

ಕೊರೊನಾ ಸೋಂಕಿತರು ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳಲು ಕಾರಣವನ್ನು ವರದಿಯಲ್ಲಿ ತಿಳಿಸಲಾಗಿದೆ. ಕೊರೊನಾ ಸೋಂಕಿತರು ಯಾವಾಗ ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳುತ್ತಾರೆ. ಯಾವಾಗ ರೋಗಿಗಳಿಗೆ ಯಾವುದೇ ಲಕ್ಷಣಗಳಿರುವುದಿಲ್ಲ ಎಂಬುದನ್ನು ವಿವರಿಸಿದ್ದಾರೆ.

ಅವರ ಪ್ರಯೋಗಗಳಲ್ಲಿ ವಾಸನೆಯ ಗ್ರಹಿಕೆಯನ್ನು ಮಾಡುವ ಆಂಜಿಯೋಟೆನ್ಸಿನ್-ಎಸಿಇ 2ವನ್ನು ಕಂಡುಕೊಂಡಿದ್ದಾರೆ. ಈ ಕಿಣ್ವವು ಮೂಗಿನ ಆರಂಭದಲ್ಲಿದ್ದು, ವೈರಸ್‌ಅನ್ನು ದೇಹದ ಜೀವಕೋಶಗಳಿಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟು ಸೋಂಕನ್ನು ಉಂಟು ಮಾಡುತ್ತದೆ. ಆಗ ವಾಸನೆ ಗ್ರಹಿಕೆ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ.

 

ಕೊರೊನಾ ವೈರಸ್ ನಿಜವಾಗಿಯೂ ಈ ಕೋಶಗಳನ್ನು ಬಳಸುತ್ತದೆ ಎಂದು ಸಾಬೀತಾದರೆ ಮೂಗಿನ ಮೂಲಕ ನೇರವಾಗಿ ಆಂಟಿವೈರಲ್ ಚಿಕಿತ್ಸೆ ನೀಡಬಹುದಾಗಿದೆ ಎಂದು ಅಂದಾಜಿಸಿದ್ದಾರೆ. ಸಾಮಾನ್ಯವಾಗಿ ಶೀತ, ಕೆಮ್ಮು, ಜ್ವರ ಬಂದಾಗ ವಾಸನೆ ಗ್ರಹಿಕೆಯನ್ನುಕಳೆದುಕೊಳ್ಳುತ್ತೇವೆ ಆದರೆ ಈ ಕೊರೊನಾ ಸಂದರ್ಭದಲ್ಲಿ ಅದು ರೋಗದ ಒಂದು ಲಕ್ಷಣವಾಗಿದೆ ಅಷ್ಟೇ.

ಒಟ್ಟು 23 ಮಂದಿಯ ಪರೀಕ್ಷೆ

ಒಟ್ಟು 23 ಮಂದಿಯ ಪರೀಕ್ಷೆ ನಡೆದಿದ್ದು, ಮೂಗಿನ ಹಿಂಭಾಗದಿಂದ ಅಂಗಾಂಶದ ಮಾದರಿಗಳನ್ನು ಬಳಕೆ ಮಾಡಲಾಗಿದೆ. ಗಡ್ಡೆಗಳು ಅಥವಾ ಧೀರ್ಘಕಾಲದ ರೈನೋಸಿನೂಸಿಟಿಸ್, ಮೂಗು ಮತ್ತು ಸೈನಸ್‌ನ ಉರಿಯೂತದ ಕಾಯಿಲೆಯಂತಹ ಸಂದರ್ಭದಲ್ಲಿ ಎಂಡೋಸ್ಕೋಪಿಕ್ ಶಸ್ತ್ರ ಚಿಕಿತ್ಸೆ ನಡೆಸಿ ಅದನ್ನು ತೆಗೆದು ಹಾಕಲಾಗಿರುತ್ತದೆ. ಯಾವುದೇ ರೋಗಿಗಳಿಗೆ ಕೊರೊನಾವೈರಸ್ ಇರುವುದು ಪತ್ತೆಯಾಗಿಲ್ಲ.

ಯುರೋಪಿಯನ್ ರೆಸ್ಪಿರೇಟರಿ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಗಳು ಕೊವಿಡ್ 19 ಏಕೆ ಸಾಂಕ್ರಾಮಿಕವಾಗಿದೆ ಎಂಬುದರ ಬಗ್ಗೆ ಸುಳಿವು ನೀಡುತ್ತದೆ. ಈ ಭಾಗವನ್ನು ಗುರಿಯಾಗಿಸಿಕೊಂಡು ಹೆಚ್ಚು ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಆರು ವಿಧದ ರೋಗ

ಕೊರೊನಾ ವೈರಸ್ ಬಗ್ಗೆ ವಿಶ್ವದೆಲ್ಲೆಡೆ ವಿಜ್ಞಾನಿಗಳು ಆಳವಾದ ಅಧ್ಯಯನಗಳನ್ನ ನಡೆಸುತ್ತಲೇ ಇದ್ದಾರೆ. ಚುಚ್ಚುಮದ್ದು, ಲಸಿಕೆ, ಔಷಧ ಇತ್ಯಾದಿಗಳ ಅಭಿವೃದ್ಧಿಗೆ ನಿರಂತರ ಪ್ರಯತ್ನಗಳು ನಡೆದಿವೆ. ಬ್ರಿಟನ್ ವಿಜ್ಞಾನಿಗಳು ಈಗ ಆರು ವಿಧದ ಕೊವಿಡ್-19 ರೋಗವನ್ನು ಗುರುತಿಸಿದ್ದಾರೆ. ಇದು ರೋಗಿಗಳ ಚಿಕಿತ್ಸೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.

ರೋಗದ ಲಕ್ಷಣಗಳು

ಲಂಡನ್​ನ ಕಿಂಗ್ಸ್ ಕಾಲೇಜ್​ನ ವಿಜ್ಞಾನಿಗಳು ರೋಗಲಕ್ಷಣಗಳ ಆಧಾರದ ಮೇಲೆ ಕೋವಿಡ್ ರೋಗಗಳನ್ನ ಗುರುತಿಸಿದ್ದಾರೆ. ಒಂದು ವಿಧದ ಕೋವಿಡ್ ರೋಗದಲ್ಲಿ ಜ್ವರದ ಲಕ್ಷಣವೇ ಇರುವುದಿಲ್ಲ. ಆದರೆ, ತಲೆನೋವು, ಮೈಕೈ ನೋವು, ಕೆಮ್ಮು, ಗಂಟಲು ನೋವು, ಎದೆನೋವು ಇರುತ್ತದೆ. ಇನ್ನೊಂದು ವಿಧದ ರೋಗದಲ್ಲಿ ಜ್ವರವೂ ಇರುತ್ತದೆ.

 

ಬಹಳ ತೀವ್ರತೆಯ ರೋಗದಲ್ಲಿ ತಲೆನೋವು, ವಾಸನೆ ಗ್ರಹಿಕೆ ನಷ್ಟು, ಹಸಿವು ಇಲ್ಲದಿರುವುದು, ಕೆಮ್ಮು, ಜ್ವರ, ಗಂಟಲು ನೋವು, ಎದೆ ನೋವು, ತಲೆಸುತ್ತು, ಗೊಂದಲಮಯತೆ, ಸ್ನಾಯು ನೋವು, ಉಸಿರಾಟ ತೊಂದರೆ, ಬೇಧಿ, ಹೊಟ್ಟೆ ನೋವು ಈ ಲಕ್ಷಣಗಳಿರುತ್ತವೆ. ಇದು ಗಂಭೀರ ಸ್ಥಿತಿಯಾಗಿರುತ್ತದೆ.

ಹೀಗೆ ಕಿಂಗ್ಸ್ ಕಾಲೇಜಿನ ವಿಜ್ಞಾನಿಗಳು ಒಂದರಿಂದ ಆರು ವಿಧದ ರೋಗಗಳನ್ನ ವಿಭಾಗಿಸಿದ್ಧಾರೆ. ಅದರಲ್ಲಿ ಮೊದಲ ಮೂರು ವಿಧದ ರೋಗಗಳಿರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯ ಇರುವುದಿಲ್ಲ. ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯಬಹುದು. ಕೊನೆಯ ಮೂರು ವಿಧದ ರೋಗಿಗಳಿಗೆ ವೆಂಟಿಲೇಟರ್ ಸಪೋರ್ಟ್ ಅಗತ್ಯ ಇರುತ್ತದೆ.

ವಿಜ್ಞಾನಿಗಳು ಹೇಳುವುದೇನು?

ಪ್ರೊ.ಆಂಡ್ರ್ಯೂ ಪಿ ಲೇನ್, ಡಾ. ಮೆಂಗಿಫೇ ಕೆನ್ ಈ ಅಧ್ಯಯನ ನಡೆಸಿದ್ದಾರೆ.ಲೇನ್ ಮಾತನಾಡಿ, ನಾನು ಮೂಗು ಹಾಗೂ ಸೈನಸ್ ತೊಂದರೆ ಬಗ್ಗೆ ಅರಿತಿದ್ದೇನೆ. ಹೀಗಾಗಿ ಕೊರೊನಾ ಸೋಂಕು ತಗುಲಿದಾಗ ಜನರು ವಾಸನೆ ಗ್ರಹಿಕೆ ಶಕ್ತಿಯನ್ನು ಯಾಕಾಗಿ ಕಳೆದುಕೊಳ್ಳುತ್ತಾರೆ ಎಂದು ಅಧ್ಯಯನ ನಡೆಸಲು ಆರಂಭಿಸಿದೆ. ಬೇರೆ ಸಂದರ್ಭದಲ್ಲಿ ಮೂಗಿನಲ್ಲಿ ದ್ರವ ಸೋರುವುದರಿಂದ ವಾಸನೆ ಗ್ರಹಿಕೆ ಇರುವುದಿಲ್ಲ.

LEAVE A REPLY

Please enter your comment!
Please enter your name here