ಕೋಲ್ಹಾಪೂರ “ಸುವ್ಯವಸ್ಥಿತ ಆಡಳಿತ ನೀಡಲು ತನು-ಮನ-ಧನ ಮೀಸಲು”

0

ಕೋಲ್ಹಾಪೂರ ಜಿಲ್ಲೆಯ ನೀರಾವರಿ ಇಲಾಖೆಯ ಸಿಂಚನ ಭವನಕ್ಕೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೇಟಿ ನೀಡಿದಾಗ ಅಲ್ಲಿನ ಅಧಿಕಾರಿಗಳು ಹೃತ್ಪೂರ್ವಕ ಸ್ವಾಗತಿಸಿದರು. ನಂತರ ಅಧಿಕಾರಿಗಳೊಂದಿಗೆ ಮಹಾಪೂರದ ಕುರಿತು ಸುದೀರ್ಘ ಚರ್ಚೆನಡೆಸಿ, ಮುಖ್ಯವಾದ ಮಾಹಿತಿಗಳನ್ನು ಪಡೆದುಕೊಂಡು, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಭಾರೀ ಮಳೆಯಿಂದ ಸಂಭವಿಸುತ್ತಿರುವ ಅನಾಹುತಗಳ ತೀವ್ರತೆಯನ್ನು ಮನಗಂಡು, ನಿತ್ಯ ಮಳೆಯ ಪ್ರಮಾಣ, ರಾಧನಗರಿ ಹಾಗೂ ಕಾಳಂವಾಡಿ ಅಣೆಕಟ್ಟುಗಳ ನೀರಿನ ಸಂಗ್ರಹ ಮತ್ತು ನದಿ ನೀರು ಬಿಡುಗಡೆ, ನೀರಾವರಿಗೆ ಲಭ್ಯವಿರುವ ನೀರಿನ ಪ್ರಮಾಣ, ಪ್ರವಾಹ ನಿಯಂತ್ರಣ ವ್ಯವಸ್ಥೆ ಹಾಗೂ ಹಿರಣ್ಯಕೇಶಿ ನದಿಯ ಹಳೆಯ ಅಣೆಕಟ್ಟು ಇರುವುದು ಗೋಟೂರು ಮತ್ತು ನಾಗನೂರು ಪ್ರದೇಶಗಳಲ್ಲಿ ಪ್ರವಾಹದ ಮಟ್ಟ ಹೆಚ್ಚಿಸುತ್ತಿದ್ದು, ಅದನ್ನು ಕೆಡವಿ ತೆಗೆಯಲು ಕರ್ನಾಟಕದ ಅಧಿಕಾರಿಗಳಿಗೆ ಸೂಚನೆ ನೀಡುವ ಹಕ್ಕನ್ನು ಮಾನ್ಯ ಸಚಿವರಿಗೆ ನೀಡುವ ಕುರಿತು ಚರ್ಚಿಸಿ, ತೆಗೆದುಕೊಳ್ಳಲಾಗಿರುವ ಅತ್ಯುನ್ನತ ಕ್ರಮಗಳನ್ನು ಪ್ರಶಂಸಿದರು.

ಮುಂದಿನ ದಿನಗಳಲ್ಲಿ ನನ್ನ ಉಸ್ತುವಾರಿ ಜಿಲ್ಲೆಯಾದ ವಿಜಯಪುರದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರಗಳ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಆಲಮಟ್ಟಿ ಜಲಾಶಯ ನೀರು ಬಿಡುಗಡೆ ಹಾಗೂ ಪ್ರವಾಹದ ಸಂದರ್ಭದಲ್ಲಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವ ಕುರಿತು ಚರ್ಚಿಸಲಾಗುತ್ತದೆಂದು ಹೇಳಿದರು.

ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಶ್ರೀ ಮಹೇಶ ಸುರವೆ, ಕಾರ್ಯನಿರ್ವಾಹಕ ಇಂಜಿನಿಯರಗಳಾದ ಶ್ರೀ ಅಮೋಲ ನಾಯಕ, ಶ್ರೀ ರೋಹಿತ ಬಂಡಿವಾಡೇಕರ್, ಶ್ರೀಮತಿ ಸ್ಮಿತಾ ಮಾನೆ ಉಪಸ್ಥಿತರಿದ್ದರು.

कोल्हापूर
“सुव्यवस्थित शासन देण्यासाठी तनु मन धन राखीव”

कोल्हापूर जिल्ह्यातील पाटबंधारे विभागाच्या सिंचन भवनाला विजयपुर जिल्हा पालकमंत्री व राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी भेट दिल्यानंतर तेथील अधिकाऱ्यांनी सहर्ष स्वागत केले. त्यानंतर अधिकाऱ्यांच्याशी पुराबाबत प्रदीर्घ चर्चा केल्यानंतर महत्त्वपूर्ण माहिती मिळवून आवश्यक सल्ला व सूचना दिल्या.

मुसळधार पावसामुळे होणार्‍या आपत्तींची तीव्रता ओळखून, निरंतर पावसाचे प्रमाण, राधानगरी आणि काळमवाडी धरणांचा जलसाठा, नदीचे पाणी सोडणे, सिंचनासाठी उपलब्ध असलेल्या पाण्याचे प्रमाण, पूर नियंत्रण यंत्रणा व हिरण्यकेशी नदीचे जुने धरण गोटूर व नागनूरु भागात असून पाण्याची पातळीत वाढ होत असल्याने, जुने धरण उध्वस्त करण्यासाठी कर्नाटकाच्या अधिकाऱ्यांना माननीय मंत्र्यांनी अधिकार देण्याच्या विषयावर चर्चा करून, घेतलेल्या सर्वोच्च उपायांचे कौतुक केले गेले.

त्यानंतरच्या काही दिवसांत, विजयपुर येथे कर्नाटक आणि महाराष्ट्र जलसंपदा विभागातील अधिकाऱ्यांच्याशी सभा घेऊन, अलमट्टी जलाशयात पाणी सोडण्याबाबत आणि पुराच्या संधर्भात समन्वय साधण्यासाठी चर्चा करण्यात येणार आहे असे सांगितले.

यावेळी पाटबंधारे विभागाचे अधीक्षक अभियंता श्री महेश सुरवे, कार्यकारी अभियंता श्री अमोल नायक, श्री रोहित बंडीवाडेकर आणि श्रीमती स्मिता माने उपस्थित होते.

LEAVE A REPLY

Please enter your comment!
Please enter your name here