‘ಕ್ಷಮಿಸು ಬಾಬು.. ಎಂದು ಯಾಕೆ ಹೇಳಿದೆ..ಜೂ.14ರಂದು ಏನಾಯಿತು?’-ಎಳೆಎಳೆಯಾಗಿ ಬಿಚ್ಚಿಟ್ಟ ರಿಯಾ ಚಕ್ರವರ್ತಿ

0

ಮೃತ ಬಾಲಿವುಡ್ ನಟನ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ತರಲಾಗಿತ್ತು. ಈ ವೇಳೆಯಲ್ಲಿ ಸುಶಾಂತ್ ಸಿಂಗ್ ರಜ್ಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ಅಪರಾಧಿಯಂತೆ ವರ್ತಿಸುತ್ತಿದ್ದರು, ಸುಶಾಂತ್ ಪಾರ್ಥಿವ ಶರೀರದ ಮೇಲೆ ಕೈಯ್ಯಿಟ್ಟು ಕ್ಷಮೆ ಕೇಳುತ್ತಿದ್ದರು ಎಂದು ಆಸ್ಪತ್ರೆಯಲ್ಲೇ ಇದ್ದ ಕರಣಿ ಸೇನಾದ ಸದಸ್ಯನೋರ್ವ ಹೇಳಿಕೆ ನೀಡಿದ್ದಾರೆ
ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ತಂದ ನಂತರ ಅಲ್ಲಿಗೆ ಬಂದಿದ್ದ ರಿಯಾ ಚಕ್ರವರ್ತಿ, ಸುಶಾಂತ್​ ಮೃತದೇಹದ ಮೇಲೆ ಕೈಯಿಟ್ಟು, ಕ್ಷಮಿಸು ಬಾಬು ಎಂದಿದ್ದರು. ಅಪರಾಧಿಯಂತೆ ವರ್ತಿಸುತ್ತಿದ್ದರು ಎಂದು ವರದಿಯಾಗಿದೆ.

ಆದರೆ ಹೀಗೇಕೆ ಹೇಳಿದರು? ಮೃತ ಸುಶಾಂತ್​ ಬಳಿ ಕ್ಷಮೆ ಕೇಳುವ ತಪ್ಪು ಅವರೇನು ಮಾಡಿದ್ದರು ಎಂಬಿತ್ಯಾದಿ ಚರ್ಚೆಗಳೂ ಎದ್ದಿದ್ದವು. ಇದೀಗ ರಿಯಾ ಚಕ್ರವರ್ತಿಯವರೇ ಉತ್ತರಿಸಿದ್ದಾರೆ. ಜೂ.14ರಂದು ನಿಜಕ್ಕೂ ಏನಾಯಿತು ಎಂಬುದನ್ನೂ ಹೇಳಿದ್ದಾರೆ.
ಜೂ.14ರಂದು ಮಧ್ಯಾಹ್ನ 2 ಗಂಟೆ. ನಾನು ನನ್ನ ಸೋದರನೊಂದಿಗೆ ನನ್ನ ಮನೆಯಲ್ಲಿದ್ದೆ. ನನ್ನ ಸ್ನೇಹಿತೆಯೊಬ್ಬಳು ಕರೆ ಮಾಡಿ, ಸುಶಾಂತ್​ ಸಾವಿನ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ ಎಂದು ಹೇಳಿದಳು. ಅದಕ್ಕೆ ನಾನು, ಇಂಥ ರೂಮರ್​​ಗಳು ಹಬ್ಬುವುದು ನಿಲ್ಲಬೇಕೆಂದರೆ ಕೂಡಲೇ ಸುಶಾಂತ್​​ ಸಿಂಗ್​ ಬಳಿ ಒಂದು ಹೇಳಿಕೆ ನೀಡಲು ತಿಳಿಸಿಬೇಕು ಎಂದಿದ್ದೆ. ಆದರೆ ಕೆಲವೇ ನಿಮಿಷಗಳಲ್ಲಿ ಸುಶಾಂತ್​ ಸಾವು ದೃಢಪಟ್ಟಿತ್ತು. ಸುಶಾಂತ್​ ಸತ್ತಿದ್ದು ಖಚಿತವಾಗುತ್ತಿದ್ದಂತೆ ಸ್ನೇಹಿತೆ ನನ್ನ ಬಳಿ ಕೇಳಿದಳು. ನೀನು ಅವನ ಮನೆಗೆ ಹೋಗುತ್ತಿಯಾ ಎಂದು ಪ್ರಶ್ನಿಸಿದಳು. ಆದರೆ ನಾನು ಹೋಗುವುದಿಲ್ಲ ಎಂದೆ. ನನಗೆ ತುಂಬ ಶಾಕ್​ ಆಗಿದೆ. ನೋವಾಗಿದೆ. ಇದೆಲ್ಲ ಯಾಕಾಯಿತು, ಹೇಗಾಯಿತು ಎಂದು ಅರ್ಥವಾಗುತ್ತಿಲ್ಲ. ಅಷ್ಟೇ ಅಲ್ಲ, ಸುಶಾಂತ್​ ಅಂತ್ಯಕ್ರಿಯೆಗೆ ಹೋಗಲೂ ಸಾಧ್ಯವಿಲ್ಲ. ಅವನ ಕುಟುಂಬದವರಿಗೆ ನಾನಲ್ಲಿ ಇರುವುದು ಖಂಡಿತ ಒಪ್ಪಿಗೆಯಿಲ್ಲ ಎಂದು ಜೂ.14ರಂದು ನನ್ನ ಸ್ನೇಹಿತೆಯ ಬಳಿ ಹೇಳಿಕೊಂಡಿದ್ದೆ ಎಂದು ರಿಯಾ ಚಕ್ರವರ್ತಿ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ನನಗೆ ಸುಶಾಂತ್​ ಅಂತ್ಯಕ್ರಿಯೆಗೆ ಹೋಗಬೇಕು ಎಂದು ಬಲವಾಗಿ ಅನ್ನಿಸುತ್ತಿತ್ತು. ಆದರೆ ಇಂಡಸ್ಟ್ರಿಯ ಕೆಲವು ಸ್ನೇಹಿತರೇ ಬೇಡ ಎಂದರು. ಆದರೆ ನನಗೆ ಅವನನ್ನು ಕೊನೇ ಬಾರಿ ನೋಡಲೇಬೇಕಿತ್ತು. ಇಲ್ಲದಿದ್ದರೆ ಮನಸಿಗೆ ಸಮಾಧಾನ ಇರಲಿಲ್ಲ. ಹಾಗಾಗಿ ಆಸ್ಪತ್ರೆಗೇ ಹೋದೆ ಎಂದು ತಿಳಿಸಿದ್ದಾರೆ.

ಅವತ್ತು ತಾನು ಯಾಕಾಗಿ ಕ್ಷಮಿಸು ಬಾಬು ಎಂದು ಹೇಳಿದೆ ಎಂಬುದಕ್ಕೆ ಸ್ಪಷ್ಟನೆ ನೀಡಿದ ರಿಯಾ, ಯಾರಾದರೂ ಪ್ರಾಣ ಕಳೆದುಕೊಂಡಾಗ, ಅವರ ಮೃತದೇಹ ನೋಡಿದರೆ ಇನ್ನೇನು ಹೇಳಲು ಸಾಧ್ಯ? Sorry ಎನ್ನುವ ಶಬ್ದವೇ ಬರುತ್ತದೆ. ಹಾಗೇ ಸುಶಾಂತ್​ನನ್ನು ನೋಡಿ ನನ್ನ ಬಾಯಲ್ಲೂ ಕ್ಷಮಿಸು ಎಂಬ ಪದ ಬಂತು. ನೀನು ನಿನ್ನ ಜೀವ, ಜೀವನ ಕಳೆದುಕೊಂಡೆ…ಕ್ಷಮಿಸು ಎಂಬರ್ಥದಲ್ಲಿ ಹಾಗೆ ಹೇಳಿದೆ ಎಂದು ರಿಯಾ ತಿಳಿಸಿದ್ದಾರೆ.

ನಿನ್ನ ಸಾವು ಒಂದು ತಮಾಷೆಯಾಗಿ ಮಾರ್ಪಟ್ಟಿದೆ.. ನಿನ್ನ ಒಳ್ಳೆಯ ಕೆಲಸಗಳಾವವೂ ನಿನ್ನ ಬಗೆಗಿನ ನೆನಪಾಗಿ ಉಳಿದಿಲ್ಲ.. ನಿನ್ನ ಬುದ್ಧಿವಂತಿಕೆ..ನೀನು ಮಾಡಿದ ದಾನ, ಸಹಾಯಗಳಾವವೂ ಈಗ ಯಾರಿಗೂ ನೆನಪಾಗುತ್ತಿಲ್ಲ…ಅವೆಲ್ಲವನ್ನೂ ತಪ್ಪಾಗಿಯೇ ಅರ್ಥೈಸಲಾಗುತ್ತಿದೆ. ಇದಕ್ಕೆಲ್ಲ ನಾನು ಕ್ಷಮಿಸು ಎನ್ನುವುದನ್ನು ಬಿಟ್ಟು ಇನ್ನೇನು ತಾನೇ ಹೇಳಲು ಸಾಧ್ಯ ಎಂದು ರಿಯಾ ಸಂದರ್ಶನದ ವೇಳೆ ಕೂಡ ಸುಶಾಂತ್​ ಬಳಿ Sorry ಕೇಳಿದ್ದಾರೆ.

ಸುಶಾಂತ್​ ಅವರನ್ನು ಇಟ್ಟ ಶವಾಗಾರದಲ್ಲಿ ನೀವೆಷ್ಟು ಹೊತ್ತು ಇದ್ದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ರಿಯಾ, ನಾನು 3-4 ಸೆಕೆಂಡ್​​ಗಳಷ್ಟೇ ಕಾಲ ಅಲ್ಲಿದ್ದೆ. ನನ್ನ ಸ್ನೇಹಿತರು ಆಸ್ಪತ್ರೆ ಹೊರಗಡೆ ಕಾಯುತ್ತಿದ್ದರು. ಮೃತದೇಹವನ್ನು ಮೂರು ಸೆಕೆಂಡ್​​ಗಳಷ್ಟು ಕಾಲ ನೋಡಿದೆ. ಸುಶಾಂತ್​ ಜೀವನ ಕೊನೆಯಾಯಿತು ಎಂಬ ಕಾರಣಕ್ಕೆ ಕ್ಷಮಿಸು ಬಾಬು ಎಂದೆ..ಗೌರವಾರ್ಥವಾಗಿ ಅವನ ಪಾದವನ್ನು ಮುಟ್ಟಿದೆ. ಅಂಥ ಸಮಯದಲ್ಲಿ ಯಾಕಾಗಿ ಪಾದ ಸ್ಪರ್ಶಿಸುತ್ತೇವೆ ಎಂಬುದನ್ನು ಭಾರತೀಯನಾದ ಯಾರಾದರೂ ಅರ್ಥ ಮಾಡಿಕೊಳ್ಳುತ್ತಾರೆ ಅಲ್ಲವೇ? ಎಂದು ರಿಯಾ ಹೇಳಿದ್ದಾರೆ. (ಏಜೆನ್ಸೀಸ್​)

LEAVE A REPLY

Please enter your comment!
Please enter your name here