ಗೆದ್ದ ಕ್ಷೇತ್ರ ಕೈತಪ್ಪುವ ಭಯ – ಫೀಲ್ಡಿಗಿಳಿದ ಬಿ.ಎಲ್. ಸಂತೋಷ್ ಇವರಿಂದ ಪ್ರಕಟಿಸಲಾಗಿದೆ

0

ಕರ್ನಾಟಕದಲ್ಲಿ ಮುಂದೆ ಬರಲಿರುವ ಚುನಾವಣೆಗೆ ಬಿಜೆಪಿ ಈಗ್ಲೇ ಸಿದ್ದತೆ ಪ್ರಾರಂಭಿಸಿದೆ. ರಾಜ್ಯ ನಾಯಕರು ಪಕ್ಷ ಸಂಘಟನೆಗೆ ಒತ್ತು ಕೊಡುವಲ್ಲಿ ವಿಫಲವಾಗಿರುವುದನ್ನು ಗಮನಿಸಿರುವ ಹೈಕಮಾಂಡ್ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರಿಗೆ ಸಂಘಟನೆಯ ಹೊಣೆ ಕೊಟ್ಟಿದೆ.

ಹೀಗಾಗಿ ನಿನ್ನೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿರುವ ಸಂತೋಷ್ ಪ್ರಸ್ತುತ ರಾಜಕೀಯ, ಸಂಪುಟ ವಿಸ್ತರಣೆ, ಪಕ್ಷ ಸಂಘಟನೆ ಕುರಿತಂತೆ ಚರ್ಚೆ ನಡೆಸಿದ್ದರು.

ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ಬಂದಿದೆ. ಈ ವೇಳೆ ರಾಜ್ಯ ಮಟ್ಟದ ನಾಯಕರು ತಳ ಮಟ್ಟದ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ರೆ ಪಕ್ಷ ಸಂಘಟನೆ ಸುಲಭ ಅನ್ನುವ ತೀರ್ಮಾನಕ್ಕೆ ನಾಯಕರು ಬಂದಿದ್ದಾರೆ. ಆದರೆ ನಾಯಕರು ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿ ಇಲ್ಲ ಅನ್ನುವ ಸತ್ಯ ಹೈಕಮಾಂಡ್ ಗೂ ಆರಿವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಪ್ರತೀ ಜಿಲ್ಲೆಗೆ ಪ್ರವಾಸ ಮಾಡಿದ್ದಾರೆ. ಆದರೆ ಕಾರ್ಯಕರ್ತರನ್ನು ತಲುಪಿಲ್ಲ.

ಇದರ ಮುಂದುವರಿದ ಭಾಗವಾಗಿ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಹಿರಿಯ ಉಪಾಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಖಜಾಂಚಿಗಳು, ಜಿಲ್ಲಾಧ್ಯಕ್ಷರು ಸೇರಿದಂತೆ ಪದಾಕಾರಿಗಳ ಜೊತೆ ಸಭೆ ನಡೆಸಲಾಗಿದೆ.

ಮುಖ್ಯವಾಗಿ ಇಂದಿನ ಸಭೆಯಲ್ಲಿ ಹಳೆ ಮೈಸೂರು ಭಾಗದ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಹಾಸನ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಸಂಘಟನೆ ಹಿನ್ನಡೆ ಇರುವ ಕಡೆ ಪಕ್ಷವನ್ನು ಬಲಪಡಿಸುವ ಬಗ್ಗೆ ಚರ್ಚೆ ನಡೆದಿದೆ.

2023ರ ಚುನಾವಣೆಗೆ ಪಕ್ಷ ಈಗಿನಿಂದಲೇ ಸಿದ್ಧತೆ ನಡೆಸಬೇಕು. ಗೆದ್ದಿರುವ ಕೆಲ ಕ್ಷೇತ್ರ ಬಿಜೆಪಿಯ ಕೈತಪ್ಪುವ ಸಾಧ್ಯತೆ ಇದ್ದು, ಅದನ್ನು ಉಳಿಸಿಕೊಳ್ಳಬೇಕು, ಹಳೆ ಮೈಸೂರು ಭಾಗದಲ್ಲಿ ಕೆಲವೊಂದು ಸೀಟುಗಳನ್ನು ಗೆಲ್ಲುವ ಕುರಿತಂತೆ ಕಾರ್ಯತಂತ್ರಗಳನ್ನು ಸಭೆಯಲ್ಲಿ ರೂಪಿಸಲಾಗಿದೆ.

LEAVE A REPLY

Please enter your comment!
Please enter your name here