ಚೆನ್ನಬಸಪ್ಪ ಕೃಷಿಕ ಸ್ಟೇಟ್ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುತ್ತಾರೆ ಆದರೆ ಮುಂದೆ ಏನಾಯಿತು ಎಂದು ಕೆಳಗೆ ಓದಿ

0

ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಅರಳೇಶ್ವರ ಗ್ರಾಮದ ಚೆನ್ನಬಸಪ್ಪ ವೀರಪ್ಪ ಶೆಟ್ಟರ್ 81 ವರ್ಷದ ಕೃಷಿಕ
ಈ ಮೇಲೆ ತಿಳಿಸಿದ ಕೃಷಿಕನು ನಮ್ಮ ಸಂಘಟನೆಗೆ 9 2 2020 ನೇ ಸಾಲಿನಲ್ಲಿ ಮನವಿ ಮಾಡಿಕೊಂಡಿರುತ್ತಾರೆ
ರೈತನು ಹಾನಗಲ್ ತಾಲೂಕಿನ ಸ್ಟೇಟ್ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುತ್ತಾನೆ ಎಲ್ಲ ರೈತರಿಗೆ ಸರಕಾರದಿಂದ ಹಾನಿಗೊಳಗಾದ ಪರಿಹಾರ ಬರುತ್ತಿರುವುದನ್ನು ಗಮನಿಸಿ
ತಾನು ತನ್ನ ಪಾಸ್ ಬುಕ್ ಅನ್ನು ತೆಗೆದುಕೊಂಡು ಹೋಗಿ ಬ್ಯಾಂಕಿನಲ್ಲಿ ವಿಚಾರಿಸಿದಾಗ ಹಣ ಚೆನ್ನಾಗಿರುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸುತ್ತಾರೆ ಅನೇಕ ಬಾರಿ ಬ್ಯಾಂಕಿಗೆ ಹೋದಾಗ ಬ್ಯಾಂಕ್ ಅಧಿಕಾರಿಗಳು ಹಣ ಜಮಾ ಇರುವುದಿಲ್ಲ ನೀವು ಕೃಷಿ ಇಲಾಖೆ ಅಥವಾ ತಸಿಲ್ದಾರ್ ಅವರನ್ನು ಕಾಣಲು ತಿಳಿಸುತ್ತಾರೆಕೃಷಿ ಇಲಾಖೆ ಅಧಿಕಾರಿಗಳು ಇವರ ಆಧಾರ್ ಕಾರ್ಡ್ ಪರಿಶೀಲನೆ ಮಾಡಿ ಈ ಕೆಳಗಿನಂತೆ ತಿಳಿಸುತ್ತಾರೆ
ಏರ್ಟೆಲ್ ಪೇಮೆಂಟ್ ಬ್ಯಾಂಕಿನ ಖಾತೆಗೆ ಜಮಾ ಆಗಿರುತ್ತದೆ ನೀವು ಕಂಪನಿಯನ್ನು ವಿಚಾರಿಸಿ ಅಂತ ತಿಳಿಸಿ ಕಳಿಸುತ್ತಾರೆ.
ಏರ್ಟೆಲ್ ಕಂಪನಿ ಅವರ ಹತ್ತಿರ ಹೋಗಿ ವಿಚಾರಿಸಿದಾಗ ಅವರು ಈ ಕೆಳಗಿನಂತೆತಿಳಿಸುತ್ತಾರೆ
82 96 96 96 13 ಫೋನ್ ಮೂಲಕ ನಿಮ್ಮ ಹಣ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಜಮಾ ಆಗಿರುತ್ತದೆ ತಿಳಿಸುತ್ತಾರೆ
ಆಗ ಈ ನಂಬರ್ ಮೂಲಕ ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನು ತೆಗೆದು ನೋಡಿದಾಗ ಇವರ ಖಾತೆಯಲ್ಲಿರುವ ಹಣ FD-FUNDSTRANSFER DR ಈ ಹೆಸರಿಗೆ 97 2019ರಂದು 10000
99 2019ರಂದು 5300
12 9 2019 ರಂದು 6500
6 12 2019 ರಂದು 323
6 12 2019 ರಂದು 37000
7 12 2019 ರಂದು 31200
ಈ ಮೇಲಿನ ಒಟ್ಟು ಮತ್ತು 90323=00
ವಿಷಯದ ಕುರಿತು ನಮ್ಮ ಹಾನಗಲ್ ತಾಲೂಕ ಘಟಕ
ಭಾರತಿಯ ಕೃಷಿಕಾರ್ಮಿಕ ರೈತ ಸಂಘಟನೆ ಎಲ್ಲ ಮಾಹಿತಿಗಳ ವರದಿಯನ್ನು ತಯಾರಿಸಿ ತಾಲೂಕ ದಂಡಾಧಿಕಾರಿಗಳು ಹಾನಗಲ್ ತಾಲೂಕು ಪೊಲಿಸ ಇಲಾಖೆ ಹಾನಗಲ್ ಜಿಲ್ಲಾಧಿಕಾರಿಗಳು ಹಾವೇರಿ ಅವರಿಗೆ ಮನವಿ ಸಲ್ಲಿಸಿದ ಇರುತ್ತದೆ ಆದರೆ ಯಾವುದೇ ಅಧಿಕಾರಿಗಳು ಕೃಷಿಕನ ಬಗ್ಗೆ ಈ ಪ್ರಕರಣದ ಕುರಿತು ಸರಿಯಾದ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ವಾದ ಸಂಗತಿಯಾಗಿದೆ
ನಮ್ಮ ಸಂಘಟನೆಯಿಂದ ಈ ಕೃಷಿಕನ ಕುರಿತು ನಾವು
ನನ್ನ ಸಂಘಟನೆಯಿಂದ ಹೋರಾಟದ ಹಾದಿ ಹಿಡಿಯುವ ಹಂತದಲ್ಲಿರುವಾಗ
ಈ ಕರುಣಾ ಮಹಾಮಾರಿ ಯಿಂದ ಸ್ಥಗಿತಗೊಂಡಿದೆ ಈ ವಿಷಯದ ಕುರಿತು ತಾವು ಪತ್ರಿಕೆ ಸುದ್ದಿ ಮಾಧ್ಯಮಗಳ ಮೂಲಕ ಏರ್ಟೆಲ್ ಕಂಪನಿಯ ವಂಚನೆಯನ್ನು ಬೆಳಕಿಗೆತರಲು ತಾವು ಶ್ರಮಿಸಬೇಕೆಂದು ವಿವರಣೆ ಸಮೇತ ಕಳಿಸಿರುತ್ತೇವೆ ಇದಕ್ಕಿಂತ ಹೆಚ್ಚಿನ ಮಾಹಿತಿ ಏನಾದರೂ ಬೇಕಾದಲ್ಲಿ ತಿಳಿಸಿರಿ

LEAVE A REPLY

Please enter your comment!
Please enter your name here