ಜನತೆ ಕೊರೊನಾ ತಡೆಗಟ್ಟಲು ಸಹಕರಿಸಿ ಎಂದು ಶಾಸಕ ಮಹೇಶ ಕುಮಠಳ್ಳಿ ಮನವಿ ಮಾಡಿದ್ದಾರೆ ಸಾಚಿ ಟಿವಿ

0

ಸಾಚಿ ಟಿವಿ ನ್ಯೂಸ್

ಜನತೆ ಕೊರೊನಾ ತಡೆಗಟ್ಟಲು ಸಹಕರಿಸಿ ಎಂದು ಶಾಸಕ ಮಹೇಶ ಕುಮಠಳ್ಳಿ ಮನವಿ ಮಾಡಿದ್ದಾರೆ.

ಹೌದು ಅಥಣಿಯಲ್ಲಿ ಮಹಾಮಾರಿ ಕೊರೊನಾ ವ್ಯಾಪಕವಾಗಿ ತನ್ನ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ಅಥಣಿ ತಾಲೂಕಿನ ಸಮಸ್ತ ಹಿರಿಯರೆಲ್ಲ ಸ್ವಯಂಪ್ರೇರಿತ ಬಂದ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.ಕಾರಣ ಅಥಣಿ ತಾಲೂಕಿನ ಎಲ್ಲ ಜನತೆ ಕೊರೊನಾ ತಡೆಗಟ್ಟಲು ಸಹಕರಿಸಿ ಎಂದು ರಾಜ್ಯ ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷ , ಶಾಸಕ ಮಹೇಶ ಕುಮಠಳ್ಳಿ ಅಥಣಿ ಜನತೆಯಲ್ಲಿ ಮನವಿ ಮಾಡಿದ್ದಾರೆ .

ತಾಲೂಕಿನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  ಅಥಣಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಮತ್ತು ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿ ಮಾಧ್ಯಮ ದೊಂದಿಗೆ ಮಾತನಾಡಿದರು .

.ಕೊರೋನಾ ಜಾಗತಿಕ ಮಟ್ಟದಲ್ಲಿ ಎಲ್ಲ ದೇಶಗಳನ್ನು ಕಾಡುತ್ತಿದ್ದು ಪ್ರಧಾನಿಮೋದಿ ಅವರ ನಿರ್ದೇಶನದಂತೆ ಮತ್ತು ಮುಖ್ಯಮಂತ್ರಿ ಬಿ.ಎಸ್.
ಯಡಿಯೂರಪ್ಪ ಅವರ ನೇತೃತ್ವದಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿಗೆ ರಾಜ್ಯದ ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಕಳೆದ ಎರಡೂವರೆ ತಿಂಗಳ ಲಾಕ್ ಡೌನ್ ಸಮಯದಲ್ಲಿ ಸಾಮಾನ್ಯ ಜನರ ಜೀವನಕ್ಕೆ ಮತ್ತು ರೈತರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಸಡಿಲಿಕೆ ಕೊಡಲಾಗಿತ್ತು . ಆದರೆ ಈ ಸಮಯದಲ್ಲಿ ತಿಳಿದೋ ತಿಳಿಯದೆಯೋ ಕ್ವಾರಂಟೈನ್ ಇದ್ದವರು ಸರ್ಕಾರ ಮತ್ತು ಅಧಿಕಾರಿಗಳ ಕಣ್ಣು ತಪ್ಪಿಸಿ ಮನೆಯಿಂದ ಹೊರಬಂದ ಪರಿಣಾಮ ಮತ್ತೆ ಕೊರೋನಾ ವ್ಯಾಪಕವಾಗಿದೆ ಎಂದು ವಿಷಾದಿಸಿದರು . ಇದೆ ರೀತಿ ಬಿಟ್ಟರೆ ಸಮುದಾಯ ಹಂತದಲ್ಲಿ ಕೊರೋನಾ ಹರಡುತ್ತದೆ . ಆದ್ದರಿಂದ ಅಥಣಿ ತಾಲೂಕಿನ ಸಮಸ್ತ ಹಿರಿಯರೆಲ್ಲ ಸ್ವಯಂಪ್ರೇರಿತ ಬಂದ್ ಮಾಡುವ ನಿರ್ಧಾರ ಈಗಾಗಲೇ ಬಂದಿದ್ದಾರೆ . ಕಳೆದ ಎರಡೂವರೆ ತಿಂಗಳು ಎಲ್ಲರೂ ವೈಯಕ್ತಿಕವಾಗಿ ಬಡವರಿಗೆ ಊಟೋಪಚಾರ , ಪಡಿತರ ನೀಡಿ ಸಹಾಯಹಸ್ತ ಚಾಚಿದ್ದಾರೆ . ಮುಂದೆ ಪರಿಸ್ಥಿತಿ ಹತೋಟಿ ಮೀರದಂತೆ ನೋಡಿಕೊಳ್ಳಲು ಅಥಣಿ ತಾಲೂಕಿನ ಎಲ್ಲ ಜನರ ಸಹಕಾರದ ಅಗತ್ಯ ಇದೆ ಎಂದು ಮನವಿ ಮಾಡಿದರು .ಈಗಾಗಲೇ ಪ್ರತಿ ಗ್ರಾಮದಲ್ಲಿ ಟಾಸ್ಕ್ಫೋರ್ಸ್‌ನಿಂದ ಡಂಗುರ ಹೊಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಅಥಣಿ ತಹಶೀಲ್ದಾರ ದುಂಡಪ್ಪ ಕೊಮಾರ ಈಗಾಗಲೆ ಮಹಾರಾಷ್ಟ್ರದಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗಿದೆ.ಕೊರೊನಾದಿಂದ ಸತ್ತವರ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದೆ. ಕೊರೊನಾದಿಂದ ಸತ್ತ ವ್ಯಕ್ತಿಗಳನ್ನು ತಾಲೂಕಾ ಆಡಳಿತಕ್ಕೆ ತಿಳಿಸದೆ ಅಂತ್ಯಕ್ರಿಯೆ ಮಾಡಿದರೆ ಅವರ ಮೆಲೆ ಪ್ರಕರಣ ದಾಖಲಿಸಲಾಗುವುದಾಗಿಹೇಳಿದರು.ಅಥಣಿಯಲ್ಲಿ ಕೊರೊನಾ ಲ್ಯಾಬ ಸ್ಥಾಪಿಸುವ ಪ್ರಸ್ತಾವನೆ ಸಲ್ಲಿಸಲು ವಿಭಾಗಾಧಿಕಾರಿಗೆ ಶಾಸಕರು ಸೂಚಿಸಿದರು.

ಈ ವೇಳೆ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ,
ಕಿರಣಕುಮಾರ ಪಾಟೀಲ, ಸಿಪಿಐ ಶಂಕರಗೌಡ ಬಸನಗೌಡ,ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರ, ಟಿಎಚ್ಓ ಎಂ ಎಸ್ ಕೊಪ್ಪದ,ಇಒ ರವೀಂದ್ರ ಬಂಗಾರೆಪ್ಪನವರ, ಪಿಎಸ್ ಐ ಕುಮಾರ ಹಾಡಕರ ಉಪಸ್ಥಿತರಿದ್ದರು.

ವರದಿ :ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ ಅಥಣಿ ಸಾಚಿ ಟಿವಿ

ವಿಡಿಯೋ :1)ಶಾಸಕ ಮಹೇಶ ಕುಮಠಳ್ಳಿ ಮಾತನಾಡಿದರು.

2) ತಹಶೀಲ್ದಾರ ದುಂಡಪ್ಪ ಕೊಮಾರ ಮಾತನಾಡಿದರು.

3) ಅಥಣಿ ಪ್ರವಾಸಿ ಮಂದಿರದಲ್ಲಿ ಗಣ್ಯನಾಗರಿಕರು ವ್ಯಾಪಾರಸ್ಥರು ಅಧಿಕಾರಿಗಳು ಸೇರಿದ್ದರು.

ವರದಿ: ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ ಅಥಣಿ

Video

 

LEAVE A REPLY

Please enter your comment!
Please enter your name here