ಟಿಕ್‌ಟಾಕ್‌ ಬಳಿಕ ತಲೆ ಎತ್ತಿದ ಇನ್‌ಸ್ಟಾ ರೀಲ್ಸ್‌ಗೆ YouTube‌ ಚಾಲೆಂಜ್‌ !

0

ವಿಶ್ವದ ಅತಿದೊಡ್ಡ ವೀಡಿಯೊ ಪ್ಲಾಟ್ಫಾರ್ಮ್‌ ಯೂಟ್ಯೂಬ್‌ ಕಿರು ವೀಡಿಯೋ ತಯಾರಿಕೆ ಪ್ಲಾಟ್ಫಾರ್ಮ್‌ಗಳನ್ನು ಮುನ್ನೆಲೆ ತಂದಿದೆ.

ಇದೀಗ ಈ ತಂತ್ರಜ್ಞಾನ ಕೆಲವೆ ದಿನಗಳಲ್ಲಿ ಒಳ್ಳೆಯ ಬೆಂಬಲವನ್ನು ಪಡೆದುಕೊಂಡಿದೆ. ವಿಶ್ಲೇಷಕರ ಪ್ರಕಾರ, ಭಾರತದಲ್ಲಿ ಟಿಕ್‌ಟಾಕ್‌ ಅನ್ನು ನಿಷೇಧಿಸಿದ ಬಳಿಕ ಇನ್‌ಸ್ಟಾಗ್ರಾಂ ರೀಲ್‌ಗ‌ಳು ಜನಪ್ರಿಯತೆ ಪಡೆದುಕೊಂಡಿತ್ತು.

ಇದಕ್ಕೆ ಜನರು ಉತ್ತಮ ರೀತಿಯಲ್ಲಿ ಸ್ಪಂದನೆ ತೋರಿಸಿದ್ದರು. ಜನರು ಟಿಕ್‌ಟಾಕ್‌ನ ಖುಷಿಯನ್ನು ಇದರಲ್ಲಿ ಕಂಡುಕೊಂಡಿದ್ದಾರೆ. ಇದೀಗ ಯೂಟ್ಯೂಬ್‌ ಇಂತಹದ್ದೇ ಒಂದು ಕಿರುತಾಣವನ್ನು ಪರಿಚಯಿಸಿದ್ದು, ರೀಲ್ಸ್‌ಗೆ ದೊಡ್ಡ ಸವಾಲು ಎಂದು ಹೇಳಲಾಗುತ್ತಿದೆ.

ಹಾಗೆ ನೋಡಿದರೆ ಯುಟ್ಯೂಬ್‌ ಆರಂಭವಾಗಿದ್ದೇ ಕಿರು ವೀಡಿಯೋ ಪ್ಲಾಟ್‌ಫಾರ್ಮ್ ಆಗಿ. ಯೂಟ್ಯೂಬ್‌ ಸ್ವತಃ 2005ರಲ್ಲಿ 18 ಸೆಕೆಂಡುಗಳ “ಮಿ ಅಟ್‌ ದಿ ಝೂ’ ನೊಂದಿಗೆ ಪ್ರಾರಂಭವಾಯಿತು. ಇದರ ನಂತರ, ಚಾರ್ಲಿ ಬಿಟ್‌ ಮೈ ಫಿಂಗರ್‌ ಅವರನ್ನು ಜನರನ್ನು ತುಂಬಾ ಇಷ್ಟಪಟ್ಟಿದ್ದರು. ಚಾರ್ಲಿ ಅವರ ಈ ವೀಡಿಯೋ ತುಂಬಾ ವೈರಲ ಆಗಿತ್ತು.

ಯೂಟ್ಯೂಬ್‌ ತನ್ನ ಕಿರು ವಿಡಿಯೋ ಪ್ಲಾಟ್ಫಾರ್ಮ್‌ ಯೂಟ್ಯೂಬ್‌ ಶಾರ್ಟ್ಸ್ ಅನ್ನು ಪ್ರಾರಂಭಿಸಿದೆ. ಇದಕ್ಕಾಗಿ ಯಾವುದೇ ಪ್ರತ್ಯೇಕ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಬದಲಾಗಿ, ನೀವು ಬಳಸುತ್ತಿರುವ ಅದೇ ಪ್ಲಾಟ್ಫಾರ್ಮ್‌ನಲ್ಲಿ ಇದು ಲಭ್ಯವಿದೆ.

ಎರಡು ರೀತಿಯ ವೀಡಿಯೋಗಳು
YouTube‌ ಕಿರುಚಿತ್ರಗಳಲ್ಲಿ ಎರಡು ರೀತಿಯ ವೀಡಿಯೋಗಳನ್ನು ಅಫ್ಲೋಡ್‌ ಮಾಡಬಹುದಾಗಿದೆ. ಮೊದಲನೆಯದಾಗಿ ಹೊಸ ಕ್ಯಾಮೆರಾ ಪರಿಕರಗಳನ್ನು ಅಂದರೆ ನಿಮ್ಮ ಮೊಬೈಲ್‌ ಕೆಮರಾ ಬಳಸಿಕೊಂಡು ಬಳಸಿಕೊಂಡು ನೀವು 15 ಸೆಕೆಂಡುಗಳ ವೀಡಿಯೊವನ್ನು ಲೈವ್‌ ಅಥವ ರೆಕಾರ್ಡ್‌ ರೂಪದಲ್ಲಿ ರಚಿಸಲು ಸಾಧ್ಯವಾಗುತ್ತದೆ. ಎರಡನೆಯದಾಗಿ ನಿಮಗೆ ಕೆಮರಾ ಪರಿಕರಗಳನ್ನು ಬಳಸಲು ಸಾಧ್ಯವಾಗದಿದ್ದರೆ, ಈಗಾಗಲೇ ನೀವು ರೆಕಾರ್ಡ್‌ ಮಾಡಿರುವ ಲಂಬವಾದ ವೀಡಿಯೋಗಳನ್ನು 60 ಸೆಕೆಂಡುಗಳ ವರೆಗೆ ಅಪ್ಲೋಡ್‌ ಮಾಡಬಹುದಾಗಿದೆ. ಅವುಗಳಿಗೆ ಶೀರ್ಷಿಕೆ ಮತ್ತು ವಿವರಣೆ ಬರೆಯಬೇಕಾಗುತ್ತದೆ. ಈ ಕಿರುಚಿತ್ರಗಳ ವೀಡಿಯೊ ಶಾರ್ಟ್ಸ್ ವೀಡಿಯೊ ಶೆಲ್ಫ್ಗಳಲ್ಲಿ ಅಂದರೆ ಯೂಟ್ಯೂಬ್‌ ಮುಖಪುಟದಲ್ಲಿ ಕಾಣಿಸುತ್ತದೆ.

ನೋಡುವುದು ಹೇಗೆ
ಈ ಹೊಸ ಫೀಚರ್‌ ಬಹುತೇಕ ಎಲ್ಲ ಯೂಟ್ಯೂಬ್‌ವಿರುವ ಫೋನ್‌ಗಳಲ್ಲಿ ಲಭ್ಯವಿದೆ. ನೀವು ಶಾರ್ಟ್ಸ್ ಕೆಮರಾಗೆ ಅರ್ಹರಾಗಿದ್ದೀರಾ ಎಂಬುದನ್ನು ಅಪ್ಲಿಕೇಶನ್‌ ಸಹಾಯದಿಂದ ನೋಡಬಹುದಾಗಿದೆ. YouTube ಅಪ್ಲಿಕೇಶನ್‌ ತೆರೆಯಿರಿ. “+’ ಐಕಾನ್‌ ಒತ್ತಿರಿ. “ವೀಡಿಯೋ’ ಆಯ್ಕೆಮಾಡಿ. ಈ ಸಂದರ್ಭ “ಕಿರುಚಿತ್ರಗಳು’ ಕಾಣಿಸಿಕೊಂಡರೆ, ನೀವು ಕಿರುಚಿತ್ರಗಳ ಕೆಮರಾಕ್ಕೆ ಪ್ರವೇಶವನ್ನು ಹೊಂದಿದ್ದೀರಿ ಎಂದರ್ಥ. ನಿಮ್ಮ ಮೊದಲ ಕಿರುಚಿತ್ರಗಳ ವೀಡಿಯೋವನ್ನು ಮಾಡಬಹುದು.

LEAVE A REPLY

Please enter your comment!
Please enter your name here