ದೆಹಲಿಗೆ ಬಂದಿಳಿದ ಗಣ್ಯವ್ಯಕ್ತಿಗಳ ವಿಶೇಷ ವಿಮಾನ

0

ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿಯಂತಹ ಗಣ್ಯವಕ್ತಿಗಳು ಪ್ರಯಾಣಿಸುವ ವಿಶೇಷ ಬಿ 777 ವಿಮಾನವೊಂದು ಅಮೆರಿಕದಿಂದ ಗುರುವಾರ ದೆಹಲಿಗೆ ಬಂದು ಇಳಿದಿದೆ.

ಏರ್‌ಕ್ರಾಪ್ಟ್‌ ಚಿಹ್ನೆ ಎಂದೇ ಗುರುತಿಸಿರುವ ಈ ಏರ್‌ ಇಂಡಿಯಾ ಒನ್ ವಿಮಾನ ಗುರುವಾರ ಮಧ್ಯಾಹ್ನ 3 ಗಂಟೆಗೆ ಅಮೆರಿಕದ ಟೆಕ್ಸಾಸ್‌ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ವಿಮಾನ ತಯಾರಕ ಕಂಪನಿ ಬೋಯಿಂಗ್‌ ಕಂಪನಿ ಈ ವಿಮಾನಗಳನ್ನು ಜುಲೈನಲ್ಲಿ ಏರ್ ಇಂಡಿಯಾ ಸಂಸ್ಥೆಗೆ ಹಸ್ತಾಂತರಿಸ ಬೇಕಿತ್ತು. ಕೊರೊನಾ ಲಾಕ್‌ಡೌನ್‌ ಕಾರಣದಿಂದಾಗಿ ವಿತರಣೆ ಎರಡು ಬಾರಿ ವಿಳಂಬವಾಯಿತು. ಮುಂದೆ ಇಂಥದ್ದೇ ಗಣ್ಯವ್ಯಕ್ತಿಗಳು ಪ್ರಯಾಣಿಸುವ ವಿಶೇಷವಾಗಿ ನಿರ್ಮಿಸಲಾದ ಮತ್ತೊಂದು ಬಿ 777 ವಿಮಾನವೂ ದೇಶಕ್ಕೆ ಬರಲಿದೆ.

ಈ ಎರಡೂ ವಿಮಾನಗಳು ವಿವಿಐಪಿಗಳು ಸಂಚರಿಸುವ ಸುಸಜ್ಜಿತ ವಿಮಾನಗಳನ್ನಾಗಿಸಿ ಮಾರ್ಪಡಿಸುವ ಮುನ್ನ 2018ರಲ್ಲಿ ಏರ್ ಇಂಡಿಯಾದ ವಾಣಿಜ್ಯ ವಿಭಾಗದಲ್ಲಿದ್ದವು. ಈ ಎರಡು ವಿಮಾನಗಳ ಬೆಲೆ ₹ 8600 ಕೋಟಿ.

LEAVE A REPLY

Please enter your comment!
Please enter your name here