ನಟನೆಗೆ ಅವಕಾಶ ಬೇಕಿದ್ರೆ ಬಟ್ಟೆ ಬಿಚ್ಚಿ ಎದುರು ನಿಲ್ಲುವಂತೆ ಹೇಳಿದ್ದ!ಸಾಜಿದ್ ವಿರುದ್ಧ ಪೌಲಾ

0

ನವದೆಹಲಿ: ಬಾಲಿವುಡ್ ನಟ ನಾನಾಪಾಟೇಕರ್ ವಿರುದ್ಧ 2018ರಲ್ಲಿ ನಟಿ ತನುಶ್ರೀ ದತ್ತಾ ಮೀ ಟು ಅಭಿಯಾನದಡಿ ಬಹಿರಂಗವಾಗಿ ಆರೋಪಿಸಿದ್ದರು. ಇದರಿಂದ ಬಾಲಿವುಡ್ ನಲ್ಲಿ ಹಲವರು ಆಘಾತಕಾರಿ ವಿಷಯಗಳು ಬಹಿರಂಗಗೊಳ್ಳಲು ಕಾರಣವಾಗಿತ್ತು. ಇದೀಗ ಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಗಂಭೀರವಾದ ಆರೋಪ ಕೇಳಿಬಂದಿರುವುದಾಗಿ ವರದಿ ತಿಳಿಸಿದೆ.

“ಹೌಸ್ ಫುಲ್” ಸಿನಿಮಾದ ನಟನೆಗೆ ಅವಕಾಶ ಸಿಗಬೇಕಾದರೆ ತನ್ನೆದುರು ಬಟ್ಟೆ ಬಿಚ್ಚಿ ನಿಲ್ಲುವಂತೆ” ಸಾಜಿದ್ ಖಾನ್ ಕೇಳಿರುವುದಾಗಿ ರೂಪದರ್ಶಿ ಪೌಲಾ ಇನ್ಸ್ ಟಾಗ್ರಾಮ್ ನಲ್ಲಿ ಆರೋಪಿಸುವ ಮೂಲಕ ಮೌನ ಮುರಿದಿರುವುದಾಗಿ ವರದಿ ಹೇಳಿದೆ.

ಮೀ ಟೂ ಅಭಿಯಾನ ಆರಂಭವಾದಾಗ ಹಲವಾರು ಮಂದಿ ಸಾಜಿದ್ ಖಾನ್ ಬಗ್ಗೆ ದೂರಿದ್ದರು. ಆದರೆ ನನಗೆ ಮಾತ್ರ ಧೈರ್ಯ ಬಂದಿರಲಿಲ್ಲವಾಗಿತ್ತು. ಯಾಕೆಂದರೆ ಎಲ್ಲ ನಟರಿಗಿದ್ದಂತೆ ನನಗೆ ಯಾರೂ ಗಾಡ್ ಫಾದರ್ ಗಳಿಲ್ಲವಾಗಿತ್ತು. ಅಲ್ಲದೇ ಕುಟುಂಬ ನಿರ್ವಹಣೆಗಾಗಿ ಕೆಲಸ ಮಾಡಬೇಕಾಗಿತ್ತು. ಹೀಗಾಗಿ ಮೌನವಾಗಿದ್ದೆ ಎಂದು ಪೌಲಾ ತಿಳಿಸಿದ್ದಾರೆ.

ಸಾಜಿದ್ ಖಾನ್ ಹೌಸ್ ಫುಲ್ ಸಿನಿಮಾಕ್ಕಾಗಿ ನನ್ನ ಬಳಿ ನೇರವಾಗಿಯೇ ಬಟ್ಟೆ ಬಿಚ್ಚಿ ನಿಲ್ಲುವಂತೆ ತಿಳಿಸಿದ್ದರು ಎಂದು ಪೌಲಾ ಆರೋಪಿಸಿದ್ದಾರೆ. ಈ ಆರೋಪದ ನಂತರ ಸಾಮಾಜಿಕ ಜಾಲತಾಣದಲ್ಲಿ ಆರೋಪ, ಪ್ರತ್ಯಾರೋಪ ಆರಂಭವಾಗಿದೆ ಎಂದು ವರದಿ ತಿಳಿಸಿದೆ.

ಪೌಲಾ ಆರೋಪದ ನಂತರ ಹಲವು ಮಂದಿ ಸಾಜಿದ್ ಖಾನ್ ನ ಲೈಂಗಿಕ ಕಿರುಕುಳದ ಬಗ್ಗೆ ಆರೋಪಿಸಿದ್ದರು. ಈ ನಿಟ್ಟಿನಲ್ಲಿ ಇಂಡಿಯನ್ ಫಿಲ್ಮ್ ಆಯಂಡ್ ಟೆಲಿವಿಷನ್ ಡೈರೆಕ್ಟರ್ಸ್ ಅಸೋಸಿಯೇಶನ್ ಒಂದು ವರ್ಷದ ಮಟ್ಟಿಗೆ ಸಾಜಿದ್ ಖಾನ್ ಗೆ ನಿರ್ದೇಶನಕ್ಕೆ ನಿಷೇಧ ಹೇರಿದೆ.

LEAVE A REPLY

Please enter your comment!
Please enter your name here