ಪಟ್ಟಣದ ೭ನೇ ವಾರ್ಡನಲ್ಲಿರುವ ಅರಳಗುಂಡಗಿ ಬಡಾವಣೆಯಲ್ಲಿರುವ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ಅಲ್ಪಸಂಖ್ಯಾತರ ಯೋಜನೆಯಡಿಯಲ್ಲಿ ರೂ ೩೦ ಲಕ್ಷಗಳ ವೆಚ್ಚದಲ್ಲಿ ನಡೆಯುತ್ತಿರುವ ಸಿಸಿ ರಸ್ತೆಯ ಕಾಮಗಾರಿಯನ್ನು ಶಾಸಕ ಎಂ.ಸಿ.ಮನಗೂಳಿ ಅವರು ಪರವಾಗಿ ಜೆಡಿಎಸ್ ಮುಖಂಡ ಅಶೋಕ ಮನಗೂಳಿ ವಿಕ್ಷಿಸಿದರು.

0

ಸಿಂದಗಿ: ಪಟ್ಟಣದ ೭ನೇ ವಾರ್ಡನಲ್ಲಿರುವ ಅರಳಗುಂಡಗಿ ಬಡಾವಣೆಯಲ್ಲಿರುವ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ಅಲ್ಪಸಂಖ್ಯಾತರ ಯೋಜನೆಯಡಿಯಲ್ಲಿ ರೂ ೩೦ ಲಕ್ಷಗಳ ವೆಚ್ಚದಲ್ಲಿ ನಡೆಯುತ್ತಿರುವ ಸಿಸಿ ರಸ್ತೆಯ ಕಾಮಗಾರಿಯನ್ನು ಶಾಸಕ ಎಂ.ಸಿ.ಮನಗೂಳಿ ಅವರು ಪರವಾಗಿ ಜೆಡಿಎಸ್ ಮುಖಂಡ ಅಶೋಕ ಮನಗೂಳಿ ವಿಕ್ಷಿಸಿದರು.
ಈ ವೇಳೆ ಮಾತನಾಡಿದ ಅವರು ಸಿಂದಗಿ ಕ್ಷೇತ್ರವನ್ನು ಹಂತ ಹಂತವಾಗಿ ಅಭಿವೃದ್ದಿ ಪಡಿಸುವುದು ಮತ್ತು ಈ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುವುದು ಶಾಸಕರ ಕನಸ್ಸಾಗಿದೆ. ಈಗಾಗಲೇ ನೂರಾರು ಕೋಟಿ ಅನುದಾನವನ್ನು ಈ ಕ್ಷೇತ್ರದ ಅಭಿವೃದ್ದಿಗೆ ತಂದು ಕಾಮಗಾರಿಯನ್ನು ಮಾಡಲಾಗುತ್ತಿದೆ. ಅಲ್ಲದೆ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಅಲ್ಪಸಂಖ್ಯಾತರ ಯೋಜನೆಯಡಿಯಲ್ಲಿ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಮತ್ತು ಬಾಗವಾನ ಸಮಾಜದ ಬಹುದಿನಗಳ ಬೇಡಿಕೆಯಾದ ಬೀದಿ ಬದಿ ವ್ಯಾಪಾರಿಗಳಿಗೆ ಮಾರುಕಟ್ಟೆ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದರು. ಅದನ್ನು ಎಲ್ಲ ವ್ಯಾಪಾರಿಗಳ ಅನುಕೂಲಕ್ಕಾಗಿ ಹಳೇ ಗೆಸ್ಟ ಹೌಸನಲ್ಲಿರುವ ಜಾಗೆಯಲ್ಲಿ ೧೫ ಗುಂಟೆ ಜಾಗೆಯನ್ನು ಮಾರುಕಟ್ಟೆ ನಿರ್ಮಾಣಕ್ಕೆ ಸರಕಾರ ಮಂಜೂರು ನೀಡಿದೆ ಇನ್ನೂ ಕೆಲ ದಿನಗಳಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದ ಅವರು ೫,೬,೭ ನೇ ವಾರ್ಡ ಜನರಿಗೆ ದಿನ ಬಳಕೆಗೆ ನೀರಿನ ಸಮಸ್ಯೆ ಬಾರದಂತೆ ಜಾಪನ ಬಾವಿ ಅಭಿವೃದ್ದಿ ಪಡಿಸಲು ಸುಮಾರು ರೂ ೧೮ ಲಕ್ಷ ವೆಚ್ಚದಲ್ಲಿ ಜೀರ್ಣೋದ್ದಾರ ಮಾಡಲಾಗಿದೆ ಮತ್ತು ಅಲ್ಪಸಂಖ್ಯಾತರ ಸ್ಮಶಾನ ಅಭಿವೃದ್ಧಿಗೆ ರೂ ೧೦ ಲಕ್ಷಗಳನ್ನು ಅನುದಾನ ಹೀಗೆ ಅಲ್ಪಸಂಖ್ಯಾತ ಸಮೂದಾಯ ಅಭಿವೃದ್ಧಿಗೆ ಹತ್ತು ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ ಅದಕ್ಕೆ ಕಾಲೋನಿಗಳಲ್ಲಿ ನಡೆಯುವ ಕಾಮಗಾರಿಗಳನ್ನು ಅಚ್ಚುಕಟ್ಟತನದಿಂದ ನಡೆಯಲು ಸಹಕರಿಸಬೇಕು ಎಂದರು.
ಬಾಗವಾನ ಜಮಾತೆ ಅದ್ಯಕ್ಷ ಮಹಿಬೂಬ ಶಹಾಪುರ ಮಾತನಾಡಿ, ಅಲ್ಪಸಂಖ್ಯಾತರ ಕಾಲೋನಿಗಳು ಉದ್ದಾರವಾಗಬೇಕಾದರೆ ಈ ಸಮೂದಾಯದ ಜೋತೆ ಹತ್ತಿರವಾದವರಿಗೆ ಮಾತ್ರ ಅವರ ಕಷ್ಠ ಅರಿಯಲು ಸಾದ್ಯ ಅಂತೇಯೇ ಶಾಸಕ ಎಂ.ಸಿ.ಮನಗೂಳಿ ಅವರು ಯಾವಗ್ಗೆ ಅಧಿಕಾರಕ್ಕೆ ಬಂದಿದ್ದಾರೆ ಅವಾಗ್ಗೆ ನಮ್ಮ ಕೆಲಸಗಳು ಅಗಿವೆ ಇಡೀ ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಸಮೂದಾಯಗಳ ಜೀರ್ಣೋದ್ದಾರಕ್ಕೆ ಸರಕಾರದಿಂದ ಹಲವಾರು ಯೋಜನೆಗಳನ್ನು ಮನವಿ ಸಲ್ಲಿಸಿದ್ದಾಗ ಕಾಮಗಾರಿಗಳನ್ನು ಕೈಕೊಂಡಿದ್ದು ನಾವು ಕೇಳಿದ್ದೇವೆ ಆದರೆ ನಮ್ಮಗೆ ಕೇಳದೆ ಕೆಲವೊಂದು ಯೋಜನೆಗಳನ್ನು ರೂಪಿಸಿದನ್ನು ನೋಡಿದರೆ ನಾವೇ ನಿಬ್ಬೆರಾಗಿದ್ದೇವೆ ಜನರ ನಾಡಿಮಿಡಿತವನ್ನು ಅರಿತು ಕೆಲಸ ಮಾಡುವವರಾಗಿದ್ದಾರೆ. ಶಾದಿಮಹಲ ಅಭಿವೃದ್ದಿ ಸ್ವಂತ ಹಣದಿಂದ ಉಳೀದ ಕಾಮಗಾರಿ ಮಾಡಿಸುತ್ತಿದ್ದಾರೆ. ಬಾಗವಾನ ಜಮಾತೆಯಿಂದ ಎಲ್ಲ ಸಮೂದಾಯಗಳ ಬೀದಿ ಬದಿ ವ್ಯಾಪಾರಸ್ಥರಿಗೆ ಸ್ಥಳವಕಾಶ ಕಲ್ಪಸಿಕೊಡಿ ಎಂದು ಕೆಲ ತಿಂಗಳ ಹಿಂದೆ ಪ್ರತಿಭಟನೆ ಮಾಡಲಾಗಿತ್ತು ಕೆಲವೇ ತಿಂಗಳಲ್ಲಿ ಸರಕಾರದಿಂದ ಜಾಗೆಯನ್ನು ಮಂಜೂರ ಪಡಿಸಿದ್ದಾರೆ. ಇಂತಹ ಅಭಿವೃದ್ಧಿಗಳನ್ನು ಸಹಿಸದ ಕೆಲವರು ನಾವೇ ಮಾಡಿಸಿದ್ದೇವೆ ಎಂದು ಬಿಂಭಿಸಿಕೊಳ್ಳುತ್ತ ಜನರಿಗೆ ಮಂಕು ಬೂದಿ ಎರುಚುತ್ತಿದ್ದಾರೆ. ಇದು ಯಾವ ಪುರಷಾರ್ಥಕ್ಕಾಗಿ ಹೇಳಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ ಇಬ್ರಾಹಿಂ ನಾಟಿಕಾರ, ಇಸ್ಮಾಯಿಲ ನಾಟಿಕಾರ, ಪಾಪಾ ಚಾಂದಕವಟೆ, ಇಸ್ಮಾಯಿಲ್ ಹಗಡೆ, ಬಾಬು ಮರ್ತೂರ ಮತ್ತು ಬಸೀರ ಮರ್ತೂರ, ಸೈಪನ ನಾಟಿಕಾರ, ಸೈಪನ ದಳಪತಿ, ಮೈಬೂಬ ಮರ್ತೂರ, ಬುಡ್ಡಾ ಬಳಗಾನೂರ, ಭೀಮನಗೌಡ ಬಿರಾದಾರ, ಮಲ್ಲು ಶೆಂಬೆವಾಡ, ಖತೀಬ ಜವಳಿ ಸೇರಿದಂತೆ ಅನೇಕರು ಇದ್ದರು.

ವರದಿ: ಮಹಾಂತೇಶ ನೂಲಾನವರ, ಸಿಂದಗಿ.

LEAVE A REPLY

Please enter your comment!
Please enter your name here