ವೃದ್ಧ ದಂಪತಿ ಒಂದೇ ದಿನ ಸಾವನ್ನಪ್ಪಿದ ಮನಕಲಕುವ ಘಟನೆ ಕುಂದಗೋಳ ಪಟ್ಟಣದ ಕುಂಬಾರಗಲ್ಲಿಯಲ್ಲಿ ನಡೆದಿದೆ.
ಇಂದು ಬೆಳಗ್ಗೆ 6.30ರ ಹೊತ್ತಿಗೆ ಫೆರಿದ್ದೀನ್ ಇಮಾಮ್ಸಾಬ್ ಪಠಾಣ್(74) ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಕುಟುಂಬಸ್ಥರು, ಸಂಬಂಧಿಕರೆಲ್ಲ ಸೇರಿ ಅವರ ಅಂತ್ಯ ಸಂಸ್ಕಾರವನ್ನು ಮುಗಿಸಿ ಮನೆಗೆ ವಾಪಸ್ ಬರುವಷ್ಟರಲ್ಲಿ ಪತ್ನಿ ಹುಸೇನಬಿ ಫೆರುದ್ದೀನ್ ಪಠಾಣ್ (70) ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಪತಿಯ ಸಾವಿನ ನಂತರ ತೀವ್ರ ದುಃಖಿತರಾಗಿದ್ದ ಹುಸೇನಬಿ, ಅದೇ ನೋವಿನಲ್ಲೇ ಕೊರಗಿ, ಪತಿಯನ್ನು ಹಿಂಬಾಲಿಸಿದ್ದಾರೆ.
ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ..ತಂದೆ-ತಾಯಿಯನ್ನು ಒಂದೇದಿನ ಕಳೆದುಕೊಂಡ ಮಕ್ಕಳ, ಕುಟುಂಬದವರ ರೋದನ ಮುಗಿಲುಮುಟ್ಟಿದೆ. (ದಿಗ್ವಿಜಯ ನ್ಯೂಸ್)