ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ ಆರ್ ಎಮ್ ಕುಬೇರಪ್ಪನವರು ರಾಣೆಬೆನ್ನೂರು ತಾಲೂಕು ನಿಟ್ಟೂರು ಗ್ರಾಮದಲ್ಲಿ ಪದವೀದರರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು.

0

ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ ಆರ್ ಎಮ್ ಕುಬೇರಪ್ಪನವರು ರಾಣೆಬೆನ್ನೂರು ತಾಲೂಕು ನಿಟ್ಟೂರು ಗ್ರಾಮದಲ್ಲಿ ಪದವೀದರರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೊರೊನ ಕಾಲದ ಸಂದಿಗ್ದ ಪರಿಸ್ಥಿತಿಯಲ್ಲಿ ಉದ್ಯೋಗ ಕಡಿತ ಹೆಚ್ಚಾಗಿದ್ದು ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಗುಂಡೂರಾವ್ ಸರಕಾರದ ಮಾದರಿಯಲ್ಲಿ ನಿರುದ್ಯೋಗಿ ಪದವೀಧರರರಿಗೆ ವಿಶೇಷ ಭತ್ಯೆ ನೀಡಬೇಕೆಂದು ಆಗ್ರಹಿಸಿದರು. ಇದೆ ಸಂದರ್ಭದಲ್ಲಿ ಖಾಸಗಿ ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿಗಳು ಪಿಂಚಣಿಯಿಂದ ವಂಚಿತರಾಗಿದ್ದ್ದು ಎನ್ ಪಿ ಎಸ್ ನಿಂದಲೂ ಹೊರಗಿಡಲಾಗಿದ್ದು ತಕ್ಷಣವೇ ಅವರನ್ನು ಎನ್ ಪಿ ಎಸ್ ಗೆ ಸೇರ್ಪಡಿಸಬೇಕೆಂದು ಆಗ್ರಹಿಸಿದರು. ಈ ಸಮಸ್ಯೆಗೆ ಪರಿಹಾರ ಹಳೆಯ ಪಿಂಚಣಿ ವ್ಯವಸ್ಥೆಯಾಗಿದ್ದು ಅದನ್ನು ಜಾರಿಗೊಳೋಸಲು ಪ್ರಯತ್ನಿಸುವದಾಗಿ ತಿಳಿಸಿದರು. ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬರ್ತಿಯಿಂದ ನಿರುದ್ಯೋಗ ಸಮಸ್ಯೆ ಕಡಿಮೆಯಾಗಲಿದ್ದು ತಕ್ಷಣವೇ ಸರಕಾರ ಕ್ರಮ ವಹಿಸಬೇಕೆಂದು ತಿಳಿಸಿದರು. ವೇದಿಕೆಯಲ್ಲಿ ಮುಖಂಡರಾದ ಬಿ ಮಹಾಂತೇಶಪ್ಪ ಎಸ್ ಎಚ್ ಹುಚಗೊಂಡರ, ಶಿವಣ್ಣ ನಂದಿಹಳ್ಳಿ, ಮಲ್ಲಪ್ಪ ದುರ್ಗದ, ಕರೇಗೌಡ ಬಾಗುರ್, ಉಜ್ಜಪ್ಪ ಚಳಗೇರಿ ಕರಬಸಪ್ಪ ಕೂಲೇರ್, ನಿಟ್ಟೂರು, ಗೋಡಿಹಾಳ ಕೋಣನತಲೆ ಆಲದಕಟ್ಟಿ ಗ್ರಾಮಗಳ ಹಲವಾರು ಪದವೀಧರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here