ಪ್ರವಾಹ ಮರಕಳಿಸುವ ಹಿನ್ನೆಲೆ ತಾಲ್ಲೂಕಾಡಳಿತ ಸರ್ವಸನ್ನದ್ದ:ಉಪತಹಶಿಲ್ದಾರ ಜಿತೇಂದ್ರ ನಿಡೋಣಿ

0

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕರ್ನಾಟಕದ ಭೋರ್ಗರೆಯುತ್ತಿದ್ದು ಕಾಗವಾಡ ತಾಲ್ಲೂಕಿನ ಅನೇಕ ಗ್ರಾಮಗಳು ಪ್ರವಾಹದಿಂದ ಅಪಾಯವನ್ನು ಎದುರಿಸುತ್ತಿದ್ದು ಇದಕ್ಕೆ ತಾಲ್ಲೂಕಾಡಳಿತ ಎಲ್ಲ ರೀತಿಯಿಂದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಉಪತಹಶಿಲ್ದಾರ ಜಿತೇಂದ್ರ ನಿಡೋಣಿ ಮಾಹಿತಿ ನೀಡಿ ಕಾಗವಾಡ ತಾಲೂಕಿನಲ್ಲಿ ಇಲ್ಲಿಯವರೆಗೆ ಪ್ರತಿ ಹಳ್ಳಿಗಳ ನದಿಯ ದಡದಲ್ಲಿ ವಾಸವಿರುವ ಜನ ಜಾನುವಾರುಗಳನ್ನು ಸ್ಥಳಾಂತರ ಮಾಡಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ ಈಗಾಗಲೇ ನದಿಪಾತ್ರದ ಹಳ್ಳಿಗಳಲ್ಲಿ ಬೋಟ್ ಗಳ ವ್ಯವಸ್ಥೆ ಮಾಡಲಾಗಿದ್ದು ಜನರಿಗೆ ಧ್ವನಿ ವರ್ಧಕಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಲಾಗುತ್ತಿದೆ


ಇಲ್ಲಿಯವರೆಗೆ ತಾಲೂಕಿನ ಉಗಾರ-ಕುಡಚಿ,ಉಗಾರ-ಶೇಡಬಾಳ,ಶಶಹಾಪೂರ-ಯಡೂರವಾಡಿ,ಮಂಗಾವತಿ- ರಾಜಾಪೂರ ರಸ್ತೆ ಸೇತುವೆಗಳು ಬಂದ್ ಆಗಿವೆ ನಡುಗಡ್ಡೆಯಲ್ಲಿ ಯಾರಾದರೂ ಜನ ಉಳಿದರೆ ಅವರನ್ನ ಹೊರತರಲು ಬೋಟ್ ವ್ಯವಸ್ಥೆ ಮಾಡಲಾಗಿದೆ

ಪ್ರವಾಹ ಮುಂಜಾಗ್ರತಾ ಕ್ರಮವಾಗಿ ಎಸ್ ಡಿ ಆರ್ ಎಪ್ ಹಾಗೂ ಎನ್ ಡಿ ಆರ್ ಎಪ್ ಜಿಲ್ಲಾ ಕೇಂದ್ರದಲ್ಲಿ ಠಿಕಾಣಿ ಹೂಡಿದ್ದು ಅಗತ್ಯ ಬಿದ್ದಲ್ಲಿ ಬಳಕೆ ಮಾಡಿಕೊಳ್ಳಲಾಗುವದು ಎಂದು ಹೇಳಿದರು
ವರದಿ. ಅಮರ ಕಾಂಬಳೆ ಕಾಗವಾಡ

LEAVE A REPLY

Please enter your comment!
Please enter your name here