ಬಂಡಿಹೊಳೆ ಸುತ್ತಮುತ್ತಲ ಗ್ರಾಮದ ಬಡ ಜನತೆಯ ಮನಗೆದ್ದಿರುವ ದಕ್ಷ ವೈದ್ಯ ಪುನೀತ್ ಎನ್ .ರವರ ವರ್ಗಾವಣೆ ಖಂಡಿಸಿ ಪ್ರತಿಭಟನೆ….

0

ಬಂಡಿಹೊಳೆ ಸುತ್ತಮುತ್ತಲ ಗ್ರಾಮದ ಬಡ ಜನತೆಯ ಮನಗೆದ್ದಿರುವ ದಕ್ಷ ವೈದ್ಯ ಪುನೀತ್ ಎನ್ .ರವರ ವರ್ಗಾವಣೆ ಖಂಡಿಸಿ ಪ್ರತಿಭಟನೆ….ವರ್ಗಾವಣೆ ರದ್ದುಗೊಳಿಸಿ ಎಂದು ನೂರಾರು ಸಾರ್ವಜನಿಕರಿಂದ ಆಸ್ಪತ್ರೆ ಆವರಣದಲ್ಲೆ ತಾಲೂಕು ವೈದ್ಯಾಧಿಕಾರಿ ಡಾ:ಮಧುಸೂದನ್ ರವರಿಗೆ ಮನವಿ ಸಲ್ಲಿಸಿದರು

ಕೆ ಆರ್ ಪೇಟೆ ತಾಲೂಕಿನ ಬಂಡಿಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಮಾಣಿಕವಾಗಿ ಕೆಲ ವರ್ಷಗಳಿಂದ ಮತ್ತು ಕೋರೋನ ಸಂಕಷ್ಟದಲ್ಲೂ ಉತ್ತಮ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದ್ದ ವೈದ್ಯ ಡಾಕ್ಟರ್ ಪುನೀತ್ ರವರನ್ನು ಏಕಾಏಕಿ ಜಿಲ್ಲೆ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ನೂರಾರು ಮುಖಂಡರು ದಕ್ಷ ವೈದ್ಯ ಪುನೀತ್ ಕಾರ್ ತಡೆದು ಇಲ್ಲೇ ಕರ್ತವ್ಯ ನಿರ್ವಹಿಸಿ ಎಂದು ಅಂಗಲಾಚಿ ಬೇಡುತ್ತಾ ವರ್ಗಾವಣೆ ಮಾಡಿದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ನಮ್ಮ ಭಾಗದಲ್ಲಿ ಅತಿ ಹೆಚ್ಚು ಕೋರೋನ ಸೋಂಕಿತರ ಇದ್ದಾರು ನಿಷ್ಕಲ್ ಮನಸ್ಸಿಂದ ಯಾವುದೇ ಭೇದಭಾವವಿಲ್ಲದೆ ಜನರ ವಿಶ್ವಾಸ ಗಳಿಸಿ ನಿಯಮಿತ ಸಮಯಕ್ಕೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸುತ ದೇವರಂತ ಉತ್ತಮ ವೈದ್ಯ ಸಿಕ್ಕಿರುವುದು ನಮಗೆ ಸೌಭಾಗ್ಯ ಇಂತಹ ವೈದ್ಯರನ್ನು ವರ್ಗಾವಣೆ ಮಾಡುತ್ತಿರುವುದು ನಮಗೆ ಬೇಸರದ ಸಂಗತಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ವರ್ಗಾವಣೆಯನ್ನು ರದ್ದುಗೊಳಿಸಿ ಎಂದಿನಂತೆ ಕರ್ತವ್ಯ ನಿರ್ವಹಿಸುವುದಕ್ಕೆ ಆದೇಶ ನೀಡಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಗ್ರಾಮದ ಸುತ್ತಮುತ್ತಲಿನ ನೂರಾರು ಸಾರ್ವಜನಿಕರು ತಮ್ಮ ಆಕ್ರೋಶ ಹೊರಹಾಕಿದರು….

ಪ್ರಾಮಾಣಿಕ ಡಾಕ್ಟರ್ ಪುನೀತ್ N ರವರು ಮಾತನಾಡಿ ಇಲ್ಲೇ ನಾನು ಕರ್ತವ್ಯ ನಿರ್ವಹಿಸುವುದಕ್ಕೆ ಇಷ್ಟವೇ ಆದರೆ ನನ್ನ ಮೇಲಾಧಿಕಾರಿ ಆದೇಶದಂತೆ ಕರ್ತವ್ಯ ನಿರ್ವಹಿಸುವುದು ನನ್ನ ಕೆಲಸ ನಿಮ್ಮ ಅಭಿಮಾನಕ್ಕೆ ನಾನು ಸದಾ ಚಿರಋಣಿ ಎಂದು ಸಂತೋಷ ವ್ಯಕ್ತಪಡಿಸಿದರು…

ಸುದ್ದಿ ತಿಳಿದ ತಕ್ಷಣ ತಾಲೂಕು ವೈದ್ಯಾಧಿಕಾರಿಗಳಾದ ಡಾ:ಮಧುಸೂದನ್ ರವರು ಆಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸುವ ಕೆಲಸ ಮಾಡಿ ಎಂದಿನಂತೆ ಕರ್ತವ್ಯ ನಿರ್ವಹಿಸಿ ಎಂದು ಡಾಕ್ಟರ್ ಪುನೀತ್ N ಅವರಿಗೆ ಆದೇಶ ನೀಡಿದರು….

LEAVE A REPLY

Please enter your comment!
Please enter your name here