ಬಣವಿಕಲ್ಲು: ಭಜ೯ರಿ ಮಳೆ, ದಣಿವಾರಿಸಿಕೊಂಡು ರೈತರು

0

ಬಣವೀಕಲ್ಲು:ಭಜ೯ರಿ ಮಳೆ,ದಣಿವಾರಿಸಿಕೊಂಡ ರೈತರು

<->ಬಳ್ಳಾರಿಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಜು 20ರಂದು ಬಹುತೇಕ ಕಡೆಗಳಲ್ಲಿ,ದಾಖಲು ಪ್ರಮಾಣದಲ್ಲಿ ಮಳೆ ಬಂದಿದೆ.ಬಣವಿಕಲ್ಲು ಗ್ರಾಮ-58.5mm,ಚಿಕ್ಕಜೋಗಿಹಳ್ಳಿ-35.4mm,ಕೊಟ್ಟೂರು-27.8mm,ಕೂಡ್ಲಿಗಿ-18.6mm,ಗುಡೇಕೋಟೆ-18.3mm,ಖಾನಾಹೊಸಹಳ್ಳಿ-17.8mm,ಮಳೆಬಂದಿದೆ.ಮಳೆಗಾಳಿ ಇಂದಾಗಿ ತಾಲೂಕಿನ ಕೆಲವೆಡೆ ಹಲವು ತಾಸುಗಳ ಕಾಲ ವಿಧ್ಯುತ್ ವ್ಯತ್ಯಯ ಕಂಡುಬಂದಿದ್ದು,ಯಾವುದೇ ಜೀವ ಹಾನಿ ಆಸ್ಥಿ ಪಾಸ್ಥಿ ಹಾನಿಗಳು ಜುರುಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.ಈ ಕುರಿತು ಕೂಡ್ಲಿಗಿ ತಹಶಿಲ್ದಾರರಾದ ಎಸ್.ಮಹಾಬಲೇಶ್ವರವರು ಮಾಹಿತಿ ನೀಡಿದ್ದಾರೆ.ತಾಲೂಕಿನ ಕೆಲಭಾಗದ ರೈತರು ಬಿತ್ತಿದ್ದಾರೆ,ಬಹುತೇಕ ರೈತರು ಬಿತ್ತನೆ ಕಾಯ೯ದಲ್ಲಿ ತಲ್ಲೀನರಾಗಿದ್ದಾರೆ,ಹಾಗಾಗಿ ರೈತರಿಗೆ ಮಳೆ ಮಿಶ್ರ ಪರಿಣಾಮ ಬೀರುತ್ತದೆ.ಕೆಲವೆಡೆಗಳಲ್ಲಿ ಮಳೆಯ ಮೋಡವೇ ಕಾಣದಾಗಿದೆ,ಪರಿಣಾಮ ರೈತರು ಹೊಲಗಳನ್ನು ಹಸನು ಮಾಡಿ ಆಗಸದತ್ತ ಮಳೆಗಾಗಿ ಮುಖಮಾಡಿ ಮಾಡಿ ಕುಳಿತಿದ್ದಾರೆ.ಕಳೆದ ಎರೆಡು ದಿನಗಳು ಕೇವಲ ರಾತ್ರಿವೇಳೆ ಮಾತ್ರ ಮಳೆ ಬರುತ್ತಿದ್ದು,ಹಗಲಿನಲ್ಲಿ ಬಿರುಬಿಸಿಲು ಬೀರುವುದರಿಂದಾಗಿ ಬಿತ್ತಿದ ಬೀಜಗಳು, ಮೊಳಕೆಯೊಡೆಯಲು ಅನುಕೂಲವಾಗಬಹುದೆಂದು ರೈತರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.ನಾಗರ ಪಂಚಮಿ ಆಚರಿಸುವ ರೈತರೆಲ್ಲರಿಗೂ,ನಿರಂತರ ಬರುವ ಮಳೆಯಿಂದಾಗಿ ಹೊಲಗಳಲ್ಲಿ ನೀರುನಿಂತು ಗುಂಡಿಗಳು ನಿಮಾ೯ಣಗೊಂಡಿವೆ ಹಾಗಾಗಿ,ರೈತರಿಗೆ ಕೃಷಿ ಚಟುವಟಿಕೆಗಳಿಂದ ಬಿಡುವುದೊರಕಿದಂತಾಗಿದೆ.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-

LEAVE A REPLY

Please enter your comment!
Please enter your name here