ಬಿರುಗಾಳಿ ಪತ್ರಿಕೆ ಸಂಪಾದಕ ಈಶ್ವರ ತುಂಗಳ ಅವರಿಂದ ಪೋಲಿಸ್ ಇಲಾಖೆಯ ವಿರುದ್ಧ ಕರ್ತವ್ಯ ಲೋಪದ ಆರೋಪ.

0

ಬಿರುಗಾಳಿ ಪತ್ರಿಕೆ ಸಂಪಾದಕ ಈಶ್ವರ ತುಂಗಳ ಅವರಿಂದ ಪೋಲಿಸ್ ಇಲಾಖೆಯ ವಿರುದ್ಧ ಕರ್ತವ್ಯ ಲೋಪದ ಆರೋಪ.

ನಗರದ ರಮಾ ನಿವಾಸ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಈಶ್ವರ ತುಂಗಳ.

ಕಾನೂನಾತ್ಮಕ ಹೋರಾಟದ ಎಚ್ಚರಿಕೆ ನೀಡಿದ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಜಮಖಂಡಿ ಘಟಕದ ಅಧ್ಯಕ್ಷ.

ಬಿರುಗಾಳಿ ಪತ್ರಿಕೆ ಸಂಪಾದಕರಾದ ಶ್ರೀ ಈಶ್ವರ ಎಮ್. ತುಂಗಳ ಅವರು ಮುಧೋಳ ನಗರದ ಉದಯ ಕುಲಕರ್ಣಿ ಎಂಬವರ ಮೇಲೆ ಜಾತಿನಿಂದನೆ ಹಾಗೂ ಜೀವ ಬೆದರಿಕೆ ಯಂತಹ ಗುರುತರವಾದ ಪ್ರಕರಣ ವನ್ನು ದಿನಾಂಕ 23 -09 -2020 ರಂದು ದಾಖಲಿಸಲಾಗಿದ್ದರು ಕೂಡಾ, ಇಲ್ಲಿವರೆಗೆ ಆತನನ್ನು ಬಂಧಿಸದೆ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಂಡಿಲ್ಲಾ ಎಂದು ಪೋಲಿಸ್ ಇಲಾಖೆಯ ವಿರುದ್ಧ ಆರೋಪಿಸಿದ್ದಾರೆ. ಇದನ್ನೆಲ್ಲಾ ಕಂಡರೆ ಪೊಲೀಸ್ ಇಲಾಖೆಯು ಆತನ ರಾಜಕೀಯ ಪ್ರಭಾವಕ್ಕೆ, ಹಾಗು ಕೆಲವೊಂದು ರಾಜಕೀಯ ನಾಯಕರ ಒತ್ತಡಕ್ಕೆ ಮಣಿದಿರುವುದು ಕಂಡುಬರುತ್ತದೆ. ಪೊಲೀಸ್ ಇಲಾಖೆ ಆತನ ಒತ್ತಡಕ್ಕೆ ಒಳಗಾಗದೆ ತಕ್ಷಣಕ್ಕೆ ಆತನನ್ನು ಬಂಧಿಸಬೇಕೆಂದು ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಜಮಖಂಡಿ ಘಟಕ ಒತ್ತಾಯಿಸಿದ್ದು, ಉದಯ್ ಕುಲಕರ್ಣಿ ಕುರಿತು ಪತ್ರಿಕೆಯಲ್ಲಿ ಲೇಖನ ಬರೆದ ಕಾರಣಕ್ಕೆ ಮುಧೋಳ ಪೊಲೀಸ್ ಠಾಣೆ ಯವರು ಶ್ರೀ ಈಶ್ವರ ತುಂಗಳ ಅವರನ್ನು ಏಕಾಏಕಿ ಬಂಧಿಸಿರುವುದು ಖಂಡನೀಯವಾಗಿದೆ. ಈಶ್ವರ್ ತುಂಗಳ ಇವರು ಒಬ್ಬ ದಲಿತ ಎಂಬ ಕಾರಣಕ್ಕೆ ತಕ್ಷಣ ಬಂಧಿಸಿದ ಪೊಲೀಸರು ಉದಯ ಕುಲಕರ್ಣಿ ವಿಷಯದಲ್ಲಿ ಮೌನ ವಹಿಸಿರುವುದನ್ನು ಕಂಡರೆ ಇದರ ಹಿಂದೆ ಜಾತಿ ಬಲಾಢ್ಯತೆ ಕೆಲಸ ಮಾಡುತ್ತಿರುವುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ. ಪೊಲೀಸ್ ಇಲಾಖೆಯೂ ಈ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸದೇ ಉದಯ ಕುಲಕರ್ಣಿಯವರನ್ನು ಬಂಧಿಸಿ ಈಶ್ವರ್ ತುಂಗಳ ಇವರಿಗೆ ನ್ಯಾಯ ಒದಗಿಸಿಕೊಡಬೇಕು. ಒಂದು ವೇಳೆ ಈ ಪ್ರಕ್ರಿಯೆ ವಿಳಂಬವಾದಲ್ಲಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಜಮಖಂಡಿ ಘಟಕದ ಅಧ್ಯಕ್ಷ ಅಶೋಕ ಕಿತ್ತೂರ ಎಚ್ಚರಿಸಿದರು.

ವರದಿ: ಪರಶುರಾಮ್. ಕಾಂಬಳೆ

LEAVE A REPLY

Please enter your comment!
Please enter your name here