ಬುರ್ಜ್ ಖಲೀಫಾದಲ್ಲಿ ರಾರಾಜಿಸಲಿದ್ದಾರೆ ರಾಷ್ಟ್ರಪಿತ: ರಾತ್ರಿ 8.15ಕ್ಕೆ ದುಬೈ ಪ್ರಜೆಗಳಿಂದ ಮಹಾತ್ಮನಿಗೆ ಗೌರವ ನಮನ..!

0

ಮಹಾತ್ಮ ಗಾಂಧಿ ಅವರ 151ನೇ ಜನ್ಮ ದಿನಾಚರಣೆ ಅಂಗವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ಬುರ್ಜ್ ಖಲೀಫಾದಲ್ಲಿ ರಾತ್ರಿ 8.15ರ ಸುಮಾರಿಗೆ ರಾಷ್ಟ್ರಪಿತನ ಭಾವಚಿತ್ರ ಹಾಕುವ ಮೂಲಕ ಗೌರವ ಸಲ್ಲಿಸಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ಸಾಮಾಜಿಕ ಜಾಲತಾಣಪುಟಗಳ ಮೂಲಕ ಈ ವಿಷ್ಯ ತಿಳಿಸಿದ್ದು, ನಾನವರರ ಬೆಂಬಲಕ್ಕೆ ಆಭಾರಿಯಾಗಿದ್ದೇವೆ’ ಎಂದಿದೆ.ಇನ್ನು ಶುಕ್ರವಾರ ಸಂಜೆ 7 ಗಂಟೆಗೆ ’21ನೇ ಶತಮಾನದಲ್ಲಿ ಗಾಂಧೀಜಿಯವರ ಸಂದೇಶದ ಪ್ರಸ್ತುತತೆ’ ಕುರಿತು ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುವುದಾಗಿಯೂ ಹೇಳಿದೆ.

ಇನ್ನು ಗಾಂಧಿ ಜಯಂತಿ ಅಂಗವಾಗಿ ಕಾನ್ಸುಲೇಟ್ ಅಧಿಕಾರಿಗಳು ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ್ದು, ಭಾರತೀಯ ಸಮುದಾಯದ ಬೆಂಬಲದೊಂದಿಗೆ ವಿವಿಧ ಸ್ಥಳಗಳಲ್ಲಿ 151 ಗಿಡಗಳನ್ನು ನೆಡಲಾಗುವುದು ಎಂದು ವರದಿ ತಿಳಿಸಿದೆ. ಅಂದ್ಹಾಗೆ, 2018ರ ಗಾಂಧಿ ಜಯಂತಿಯಂದು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ 150 ವರ್ಷಗಳ ಗಾಂಧೀ ಸಿದ್ಧಾಂತಗಳನ್ನ ವಿಶೇಷ ಎಲ್ ಇಡಿಯಲ್ಲಿ ಪ್ರದರ್ಶನ ಮಾಡಿತ್ತು.

LEAVE A REPLY

Please enter your comment!
Please enter your name here